ಹಲ್ಲು ಕಳೆದುಕೊಂಡವರಿಗೆ ಅದ್ಭುತ ಔಷಧ; ಬಿದ್ದ ಜಾಗದಲ್ಲಿ ಮತ್ತೆ ಹುಟ್ಟುತ್ತೆ ಹೊಸ ಹಲ್ಲು

ಇತ್ತೀಚೆಗೆ ದಂತ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಂಶೋಧನೆ ನಡೆಸಲಾಗಿದ್ದು, ಪ್ರಸ್ತುತ ಹೊಸ ಔಷಧವೊಂದು ಕ್ಲಿನಿಕಲ್ ಪ್ರಯೋಗಗಳಲ್ಲಿದೆ ಇದು 2030 ರ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಜಪಾನಿನ ಒಸಾಕಾದ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಕಿಟಾನೊ ಆಸ್ಪತ್ರೆಯ ಸಂಶೋಧಕರು, ಹಲ್ಲಿನ ಬೆಳವಣಿಗೆಗೆ ಯುಎಸ್ಎಜಿ -1 ಎಂಬ ಔಷಧಿಯನ್ನು ಕಂಡು ಹಿಡಿದಿದ್ದಾರೆ. ಇದನ್ನು ವಿಜ್ಞಾನಿಗಳು, ಇಲಿ ಮತ್ತು ಗಿಳಿ ಸೇರಿದಂತೆ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದ್ದು ಹಲ್ಲಿನ ಬೆಳವಣಿಗೆಯಾಗಿದೆ.

ಹಲ್ಲು ಕಳೆದುಕೊಂಡವರಿಗೆ ಅದ್ಭುತ ಔಷಧ; ಬಿದ್ದ ಜಾಗದಲ್ಲಿ ಮತ್ತೆ ಹುಟ್ಟುತ್ತೆ ಹೊಸ ಹಲ್ಲು
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 05, 2024 | 5:19 PM

ಚಿಕ್ಕ ಮಕ್ಕಳಲ್ಲಿ ಯಾವ ರೀತಿ ಹಾಲು ಹಲ್ಲುಗಳು ಬಿದ್ದ ನಂತರ ಮತ್ತೆ ಬೇರೆ ಹಲ್ಲುಗಳು ಹುಟ್ಟುತ್ತವೆಯೋ ಅದೇ ರೀತಿ ಶಾಶ್ವತವಾಗಿ ಹಲ್ಲು ಕಳೆದುಕೊಂಡ ವಯಸ್ಕರೂ ಕೂಡ ಶೀಘ್ರದಲ್ಲೇ ಹಲ್ಲುಗಳನ್ನು ಬೆಳೆಸಿಕೊಳ್ಳುವ ಸಾಮರ್ಥ್ಯವನ್ನು ಪಡೆಯಬಹುದು. ಹೌದು, ದಂತ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಂಶೋಧನೆ ನಡೆಸಲಾಗಿದ್ದು, ಪ್ರಸ್ತುತ ಹೊಸ ಔಷಧವೊಂದು ಕ್ಲಿನಿಕಲ್ ಪ್ರಯೋಗಗಳಲ್ಲಿದೆ ಇದು 2030 ರ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಜಪಾನಿನ ಒಸಾಕಾದ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಕಿಟಾನೊ ಆಸ್ಪತ್ರೆಯ ಸಂಶೋಧಕರು, ಹಲ್ಲಿನ ಬೆಳವಣಿಗೆಗೆ ಯುಎಸ್ಎಜಿ -1 ಎಂಬ ಔಷಧಿಯನ್ನು ಕಂಡು ಹಿಡಿದಿದ್ದಾರೆ. ಇದನ್ನು ವಿಜ್ಞಾನಿಗಳು, ಇಲಿ ಮತ್ತು ಗಿಳಿ ಸೇರಿದಂತೆ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದ್ದು ಹಲ್ಲಿನ ಬೆಳವಣಿಗೆಯಾಗಿದೆ.

ನೀವು ಅನೋಡೊಂಟಿಯಾದಂತಹ ಪರಿಸ್ಥಿತಿಗಳ ಬಗ್ಗೆ ತಿಳಿದಿರಬಹುದು. ಇದೊಂದು ರೀತಿಯ ಅಸ್ವಸ್ಥತೆಯಾಗಿದ್ದು ವ್ಯಕ್ತಿಗೆ ಎಷ್ಟು ವರ್ಷವಾದರೂ ಹಲ್ಲುಗಳು ಬರುವುದಿಲ್ಲ. ಅಂತವರಿಗೆ ಈ ಔಷಧ ಜೀವನವನ್ನೇ ಬದಲಾಯಿಸಬಹುದು. ಹಲ್ಲಿಲ್ಲದೆ ಸಂಕಷ್ಟ ಪಡುವ ಲಕ್ಷಾಂತರ ಜನರಿಗೆ ಇದೊಂದು ರೀತಿಯ ಭರವಸೆಯಾಗಿದೆ. ಇದು ಇಂಪ್ಲಾಂಟ್ಗಳನ್ನು ಮೀರಿದ ನೈಸರ್ಗಿಕ ಪರಿಹಾರವನ್ನು ಒದಗಿಸುತ್ತದೆ.

ಸಂಶೋಧನಾ ತಂಡದ ಡಾ. ಕಟ್ಸು ತಕಹಾಶಿ ಅವರು ಹೇಳುವ ಪ್ರಕಾರ, ರೋಗಿಗಳಿಗೆ ಮತ್ತು ವೈದ್ಯರಿಗೆ ಇದು ಬಹಳ ನಿರೀಕ್ಷೆ ಹುಟ್ಟಿಸುತ್ತದೆ. ಅದೇ ರೀತಿ ಈ ಔಷಧಿ ಆ ನಂಬಿಕೆಯನ್ನು ಹುಸಿ ಮಾಡುವುದಿಲ್ಲ. ಯುಎಸ್ಎಜಿ -1 ಹಲ್ಲಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಬಹುದು ಎಂಬುದು ನಮಗೆ ತಿಳಿದಿತ್ತು. ಹಲ್ಲು ನಷ್ಟವಾಗುವುದು ಅಥವಾ ಇಲ್ಲದಿರುವವರಿಗೆ ಇದು ಸ್ವಲ್ಪ ಮಟ್ಟಿಗೆ ಸಹಾಯ ಮಾಡಬಹುದು. ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಹಲ್ಲುಗಳನ್ನು ಮತ್ತೆ ಬೆಳೆಸುವಲ್ಲಿ ಬಹಳಷ್ಟು ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಶ್ವಾಸಕೋಶಕ್ಕೆ ಸಿಗರೇಟುಗಳಿಗಿಂತ ಸೊಳ್ಳೆ ಕಾಯಿಲ್​​​ಗಳೇ ಹೆಚ್ಚು ಹಾನಿಕಾರಕ

ಪ್ರಯೋಗದ ಉದ್ದೇಶವೇನು?

ಈ ಔಷಧಿಯು ಮಾನವ ಪ್ರಯೋಗಗಳಿಗೆ ಸೆಪ್ಟೆಂಬರ್ 2024ರಿಂದ ಆರಂಭಗೊಂಡಿದ್ದು, 30 ರಿಂದ 64 ವರ್ಷ ವಯಸ್ಸಿನ 30 ಪುರುಷರನ್ನು ಈ ಪ್ರಯೋಗ ಕೇಂದ್ರೀಕರಿಸಿದೆ. ಪ್ರಯೋಗ ಸುಮಾರು 11 ತಿಂಗಳುಗಳ ಕಾಲ ನಡೆಯುವ ನಿರೀಕ್ಷೆಯಿದ್ದು. ಇದು ಪರಿಣಾಮಕಾರಿ ಎಂದು ಸಾಬೀತಾದರೆ, ಹಲ್ಲುಗಳನ್ನು ಕಳೆದುಕೊಳ್ಳುತ್ತಿರುವ ಎರಡು ಮತ್ತು ಏಳು ವರ್ಷದೊಳಗಿನ ಮಕ್ಕಳ ಮೇಲೆ ಪರೀಕ್ಷಿಸಲು ಸಂಶೋಧನಾ ತಂಡ ಉದ್ದೇಶಿಸಿದೆ. ಈ ಅಧ್ಯಯನದ ಸಂಭಾವ್ಯ ಪರಿಣಾಮವು ದಂತ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಮಹತ್ವದ್ದಾಗಿದ್ದು. ಪ್ರಸ್ತುತ, ಹಲ್ಲುಗಳಿಲ್ಲದವರಿಗೆ ಇದು ಸಂಭಾವ್ಯ ಪ್ರಯೋಜನಗಳನ್ನು ನೀಡಲಿದೆ. ಹಲ್ಲಿನ ಇಂಪ್ಲಾಂಟ್ ಮಾಡಬಹುದು ಆದರೆ ವಾಸ್ತವದಲ್ಲಿ ಅದು ನಿಜವಾದ ಹಲ್ಲುಗಳನ್ನು ಹೋಲುವುದಿಲ್ಲ. ಹಾಗಾಗಿ ಜನರು ತಮ್ಮ ಹಲ್ಲುಗಳನ್ನು ಮತ್ತೆ ಬೆಳೆಸಲು ಸಾಧ್ಯವಾದರೆ ಅವರ ಜೀವನದ ಗುಣಮಟ್ಟವೂ ಕೂಡ ಸುಧಾರಿಸುತ್ತದೆ ಎಂಬುದು ಈ ಪ್ರಯೋಗದ ಉದ್ದೇಶವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್