AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಶ್ವಾಸಕೋಶಕ್ಕೆ ಸಿಗರೇಟುಗಳಿಗಿಂತ ಸೊಳ್ಳೆ ಕಾಯಿಲ್​​​ಗಳೇ ಹೆಚ್ಚು ಹಾನಿಕಾರಕ

ಇತ್ತೀಚಿಗೆ ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಸೇರಿದಂತೆ ನಾನಾ ರೀತಿಯ ಜ್ವರಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ರೋಗಗಳು ಸೊಳ್ಳೆ ಕಡಿತದಿಂದಲೇ ಬರುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಈ ವಿವಿಧ ರೀತಿಯ ಜ್ವರ ಮತ್ತು ನಾನಾ ರೀತಿಯ ಸಮಸ್ಯೆಗಳನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಅದರಲ್ಲಿಯೂ ವಿಶೇಷವಾಗಿ ಸೊಳ್ಳೆಗಳನ್ನು ನಿಯಂತ್ರಿಸಲು ಅನೇಕ ಸಲಹೆಗಳಿವೆ. ಅವುಗಳಲ್ಲಿ ಒಂದು ಸೊಳ್ಳೆ ಕಾಯಿಲ್ ಗಳನ್ನು ಮನೆಗಳ ವಿವಿಧ ಮೂಲೆಗಳಲ್ಲಿ ಹಚ್ಚಿಡುವುದು. ಇದರಿಂದ ಬರುವ ಹೊಗೆ ಸೊಳ್ಳೆಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಈ ಹೊಗೆಯು ಮನೆಯಿಂದ ಸೊಳ್ಳೆಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂಬುದು ನಮ್ಮ ನಂಬಿಕೆ. ಇದರಲ್ಲಿ ಅನೇಕ ರೀತಿಯ ಸೋಂಕು ನಿವಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹಾಗಿದ್ದರೆ, ಕಾಯಿಲ್ ಗಳಿಂದ ಬರುವ ಹೊಗೆ ಮನುಷ್ಯರಿಗೆ ಅಪಾಯಕಾರಿಯೇ? ತಜ್ಞರು ಇದನ್ನು ಹಚ್ಚಬಾರದು ಎಂದು ಎಚ್ಚರಿಸಲು ಕಾರಣವೇನು? ಇಲ್ಲಿದೆ ಮಾಹಿತಿ.

ನಿಮ್ಮ ಶ್ವಾಸಕೋಶಕ್ಕೆ ಸಿಗರೇಟುಗಳಿಗಿಂತ ಸೊಳ್ಳೆ ಕಾಯಿಲ್​​​ಗಳೇ ಹೆಚ್ಚು ಹಾನಿಕಾರಕ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 05, 2024 | 5:01 PM

Share

ಮಳೆಗಾಲ ಆರಂಭವಾಗಿ ಮುಗಿಯುವ ಹಂತಕ್ಕೆ ಬಂದಿದ್ದರು ಕೂಡ ಈ ಕಾಲೋಚಿತ ರೋಗಗಳ ಹಾವಳಿ ಕಡಿಮೆಯಾಗಿಲ್ಲ. ಬದಲಾಗಿ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲಿಯೂ ಈ ಸಮಯದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗುವುದರಿಂದ ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಸೇರಿದಂತೆ ನಾನಾ ರೀತಿಯ ಜ್ವರಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ರೋಗಗಳು ಸೊಳ್ಳೆ ಕಡಿತದಿಂದಲೇ ಬರುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಈ ವಿವಿಧ ರೀತಿಯ ಜ್ವರ ಮತ್ತು ನಾನಾ ರೀತಿಯ ಸಮಸ್ಯೆಗಳನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಅದರಲ್ಲಿಯೂ ವಿಶೇಷವಾಗಿ ಸೊಳ್ಳೆಗಳನ್ನು ನಿಯಂತ್ರಿಸಲು ಅನೇಕ ಸಲಹೆಗಳಿವೆ. ಅವುಗಳಲ್ಲಿ ಒಂದು ಸೊಳ್ಳೆ ಕಾಯಿಲ್ ಗಳನ್ನು ಮನೆಗಳ ವಿವಿಧ ಮೂಲೆಗಳಲ್ಲಿ ಹಚ್ಚಿಡುವುದು. ಇದರಿಂದ ಬರುವ ಹೊಗೆ ಸೊಳ್ಳೆಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಈ ಹೊಗೆಯು ಮನೆಯಿಂದ ಸೊಳ್ಳೆಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂಬುದು ನಮ್ಮ ನಂಬಿಕೆ.. ಇದರಲ್ಲಿ ಅನೇಕ ರೀತಿಯ ಸೋಂಕು ನಿವಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹಾಗಿದ್ದರೆ, ಕಾಯಿಲ್ ಗಳಿಂದ ಬರುವ ಹೊಗೆ ಮನುಷ್ಯರಿಗೆ ಅಪಾಯಕಾರಿಯೇ? ತಜ್ಞರು ಇದನ್ನು ಹಚ್ಚಬಾರದು ಎಂದು ಎಚ್ಚರಿಸಲು ಕಾರಣವೇನು? ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಏಕೆ ಒಳ್ಳೆಯದಲ್ಲ?

ಸೊಳ್ಳೆಯ ಕಾಯಿಲ್ ನಿಂದ ಬರುವ ಹೊಗೆಯು ಆರೋಗ್ಯಕ್ಕೆ ಗಂಭೀರ ಹಾನಿಯನ್ನು ಉಂಟು ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಹೊಗೆ ತೆಗೆದುಕೊಳ್ಳುವುದು ಸಿಗರೇಟುಗಳನ್ನು ಸೇದುವುದಕ್ಕೆ ಸಮನೆಂದು ಹೇಳಲಾಗುತ್ತದೆ. ಏಕೆಂದರೆ ಈ ಕಾಯಿಲ್ ನಲ್ಲಿ ಅನೇಕ ರೀತಿಯ ರಾಸಾಯನಿಕಗಳನ್ನು ಉಪಯೋಗಿಸಲಾಗಿರುತ್ತದೆ. ಸೊಳ್ಳೆಗಳಿಂದ ಬರುವ ಹೊಗೆ ನೇರವಾಗಿ ಶ್ವಾಸಕೋಶವನ್ನು ತಲುಪುವುದರಿಂದ ದೇಹಕ್ಕೆ ಹಾನಿ ಮಾಡುತ್ತದೆ. ಅಷ್ಟು ಮಾತ್ರವಲ್ಲ ಇವು ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತವೆ. ಇದರಿಂದ ಭವಿಷ್ಯದಲ್ಲಿ ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು. ಕೆಲವರಲ್ಲಿ ಅಸ್ತಮಾ ಬರಬಹುದು. ಅದೂ ಅಲ್ಲದೆ ಹೆಚ್ಚಿನ ಜನರಿಗೆ ಚರ್ಮದ ಅಲರ್ಜಿಯಾಗಬಹುದು. ಈ ಹೊಗೆ ಬಹಳ ವಿಷಕಾರಿಯಾಗಿರುವುದರಿಂದ ಮೆದುಳಿಗೂ ಹಾನಿ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಪರಿಸರಕ್ಕೆ ಹಾನಿಕಾರಕ

ಸೊಳ್ಳೆ ಕಾಯಿಲ್ ಗಳು ಪರಿಸರದ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ. ಇದರಿಂದ ಬರುವ ವಿಷಕಾರಿ ಹೊಗೆ ಗಾಳಿಯನ್ನು ಕಲುಷಿತಗೊಳಿಸುತ್ತದೆ. ಆ ಗಾಳಿ ನಮ್ಮೊಳಗೆ ಹೋಗಿ ನಾನಾ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಇದನ್ನು ಬಳಸದಿರುವುದು ಉತ್ತಮ. ಇದನ್ನು ಎಲ್ಲಿಯಾದರೂ ಮುಟ್ಟಿ ಕೈಗಳನ್ನು ತೊಳೆದುಕೊಂಡರೆ ಅದು ಜಲಮೂಲಗಳಲ್ಲಿ ಬೆರೆತು ಪ್ರಾಣಿಗಳ ಜೀವಕ್ಕೆ ಅಪಾಯಕಾರಿಯಾಗುತ್ತದೆ.

ಇದನ್ನೂ ಓದಿ: ಜ್ವರ ಬಂದಾಗ ಸ್ನಾನ ಮಾಡುವುದು ಒಳ್ಳೆಯದೋ, ಅಲ್ಲವೋ?

ಸೊಳ್ಳೆಗಳನ್ನು ತಡೆಯಲು ಸುರಕ್ಷಿತ ಆಯ್ಕೆಗಳೇನು?

ನೀವು ಸೊಳ್ಳೆಗಳನ್ನು ತಡೆಯಲು ಕಾಯಿಲ್ ಬಳಸುವ ಬದಲು ಅನೇಕ ಸುರಕ್ಷಿತ ಆಯ್ಕೆಗಳನ್ನು ಹುಡುಕಬಹುದು. ಪ್ರಸ್ತುತ, ಮಾರುಕಟ್ಟೆಯಲ್ಲಿ ಅನೇಕ ರೀತಿಯ ಸೊಳ್ಳೆ ಬ್ಯಾಟ್ ಮತ್ತು ಯಂತ್ರಗಳು ಲಭ್ಯವಿದೆ. ಅವುಗಳ ಮೂಲಕ ಪರಿಸರಕ್ಕೆ ಹಾನಿಯಾಗದಂತೆ ಸೊಳ್ಳೆಗಳ ಹಾವಳಿಯನ್ನು ತಡೆಯಬಹುದು. ಇದಲ್ಲದೆ, ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಿ. ಇದು ಸುರಕ್ಷಿತ ಆಯ್ಕೆಯಾಗಿದ್ದು, ಯಾರಿಗೂ ಯಾವುದೇ ರೀತಿಯ ಅಪಾಯವಿಲ್ಲ. ಇದಲ್ಲದೆ, ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ. ಈ ಮೂಲಕ ಜೀವಕ್ಕೆ ಅಪಾಯಕಾರಿಯಾದ ಸೊಳ್ಳೆಗಳನ್ನು ತಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ