AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Fever: ಜ್ವರ ಬಂದಾಗ ಸ್ನಾನ ಮಾಡುವುದು ಒಳ್ಳೆಯದೋ, ಅಲ್ಲವೋ?

ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಆದಷ್ಟು ಜಾಗರೂಕರಾಗಿರುವುದು ಬಹಳ ಮುಖ್ಯ. ಅದರಲ್ಲಿಯೂ ಕೆಲವು ಆರೋಗ್ಯಕರ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಇದು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರಲ್ಲಿಯೂ ಮಳೆಗಾಲ ಆರಂಭವಾದಾಗಿನಿಂದಲೂ ವೈರಲ್ ಜ್ವರದ ಅಪಾಯ ಹೆಚ್ಚಾಗಿದ್ದು ಪ್ರತಿಯೊಬ್ಬರೂ, ಅದು ಚಿಕ್ಕವರಾಗಿರಲಿ ಅಥವಾ ದೊಡ್ಡವರಾಗಿರಲಿ, ವೈರಲ್ ಜ್ವರದಿಂದ ಬಳಲುತ್ತಿದ್ದಾರೆ. ಜೊತೆಗೆ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬ್ಯಾಕ್ಟೀರಿಯಾ. ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ ಇಂತಹ ರೋಗಗಳು ಮತ್ತೆ ಮತ್ತೆ ಕಾಡುತ್ತದೆ. ಹಾಗಾಗಿ ಈ ಸೋಂಕನ್ನು ತಡೆಗಟ್ಟುವುದು ತುಂಬಾ ಮುಖ್ಯವಾಗುತ್ತದೆ. ಜ್ವರ ಬಂದಾಗ ಏನು ತಿನ್ನಬೇಕು? ಏನು ತಿನ್ನಬಾರದು ಎಂಬುದು ಎಷ್ಟು ಮುಖ್ಯವೋ, ವೈರಲ್ ಜ್ವರವಿದ್ದರೆ ನೀವು ಸ್ನಾನ ಮಾಡಬೇಕೇ ಅಥವಾ ಬೇಡವೇ? ಎಂಬುದು ಕೂಡ ಅಷ್ಟೇ ಮುಖ್ಯ.

Viral Fever: ಜ್ವರ ಬಂದಾಗ ಸ್ನಾನ ಮಾಡುವುದು ಒಳ್ಳೆಯದೋ, ಅಲ್ಲವೋ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 05, 2024 | 3:50 PM

Share

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಹವಾಮಾನದಿಂದಾಗಿ ಕಾಲೋಚಿತ ರೋಗಗಳ ಅಪಾಯ ಹೆಚ್ಚುತ್ತಿದೆ. ಆದ್ದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಆದಷ್ಟು ಜಾಗರೂಕರಾಗಿರುವುದು ಬಹಳ ಮುಖ್ಯ. ಅದರಲ್ಲಿಯೂ ಕೆಲವು ಆರೋಗ್ಯಕರ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಇದು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರಲ್ಲಿಯೂ ಮಳೆಗಾಲ ಆರಂಭವಾದಾಗಿನಿಂದಲೂ ವೈರಲ್ ಜ್ವರದ ಅಪಾಯ ಹೆಚ್ಚಾಗಿದ್ದು ಪ್ರತಿಯೊಬ್ಬರೂ, ಅದು ಚಿಕ್ಕವರಾಗಿರಲಿ ಅಥವಾ ದೊಡ್ಡವರಾಗಿರಲಿ, ವೈರಲ್ ಜ್ವರದಿಂದ ಬಳಲುತ್ತಿದ್ದಾರೆ. ಜೊತೆಗೆ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬ್ಯಾಕ್ಟೀರಿಯಾ. ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ ಇಂತಹ ರೋಗಗಳು ಮತ್ತೆ ಮತ್ತೆ ಕಾಡುತ್ತದೆ. ಹಾಗಾಗಿ ಈ ಸೋಂಕನ್ನು ತಡೆಗಟ್ಟುವುದು ತುಂಬಾ ಮುಖ್ಯವಾಗುತ್ತದೆ. ಜ್ವರ ಬಂದಾಗ ಏನು ತಿನ್ನಬೇಕು? ಏನು ತಿನ್ನಬಾರದು ಎಂಬುದು ಎಷ್ಟು ಮುಖ್ಯವೋ, ವೈರಲ್ ಜ್ವರವಿದ್ದರೆ ನೀವು ಸ್ನಾನ ಮಾಡಬೇಕೇ ಅಥವಾ ಬೇಡವೇ? ಎಂಬುದು ಕೂಡ ಅಷ್ಟೇ ಮುಖ್ಯ.

ವೈರಲ್ ಜ್ವರದ ಲಕ್ಷಣಗಳು;

ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಮೈಕೈ ನೋವು, ತಲೆನೋವು, ಆಯಾಸ, ನಿದ್ರಾಹೀನತೆ. ಇದರಿಂದಾಗಿ ಸುಸ್ತು ಹೆಚ್ಚಾಗುತ್ತದೆ. ತೂಕವನ್ನು ಸಹ ಕಡಿಮೆ ಮಾಡುತ್ತದೆ.

ವೈರಲ್ ಜ್ವರವಿದ್ದಾಗ ಸ್ನಾನ ಮಾಡಬೇಕೇ ಅಥವಾ ಬೇಡವೇ?

ಇಂತಹ ಸಂದರ್ಭದಲ್ಲಿ ಸ್ನಾನ ಮಾಡುವುದು ಆರೋಗ್ಯಕರ ಎಂದು ಕೆಲವು ವೈದ್ಯರು ಹೇಳುತ್ತಾರೆ. ಏಕೆಂದರೆ ಇದು ದೇಹದಿಂದ ಕೊಳೆಯನ್ನು ತೆಗೆದು ಹಾಕುತ್ತದೆ. ಮಾನಸಿಕವಾಗಿ ನೆಮ್ಮದಿಯನ್ನು ನೀಡುತ್ತದೆ. ಆದ್ದರಿಂದ, ವೈರಲ್ ಜ್ವರ ಇದ್ದಾಗ ಸ್ನಾನ ಮಾಡುವುದು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಮಕ್ಕಳು ಅಥವಾ ವಯಸ್ಸಾದವರಿಗೆ ವೈರಲ್ ಜ್ವರ ಬಂದರೆ, ಸ್ನಾನ ಮಾಡುವಾಗ ಎಚ್ಚರಿಕೆ ವಹಿಸಬೇಕು. ಏಕೆಂದರೆ ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ವ್ಯಕ್ತಿಯ ಸ್ಥಿತಿಯೂ ಒಂದೇ ಆಗಿರುವುದಿಲ್ಲ. ಆದ್ದರಿಂದ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ನಮ್ಮ ದೇಹ ವೈರಲ್ ಸೋಂಕಿನ ವಿರುದ್ಧ ಹೋರಾಡುವಾಗ ಅದು ಹೆಚ್ಚು ದಣಿಯದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.

ವೈರಲ್ ಜ್ವರವನ್ನು ತಡೆಗಟ್ಟುವುದು ಹೇಗೆ?

ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಿರಿ. ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ವೈರಸ್ ನಿಮ್ಮಿಂದ ದೂರವಿದ್ದರೆ, ಜ್ವರ ಬರುವ ಸಾಧ್ಯತೆ ತುಂಬಾ ಕಡಿಮೆ. ಆದ್ದರಿಂದ, ನಾವೆಲ್ಲರೂ ನಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಬದಲಾಗುತ್ತಿರುವ ವಾತಾವರಣದಲ್ಲಿ ಮಾಸ್ಕ್ ಧರಿಸುವುದು ಉತ್ತಮ. ಇದಲ್ಲದೆ ಅಗತ್ಯವಿದ್ದರೆ, ವೈರಲ್ ಜ್ವರವಿರುವ ರೋಗಿಗಳಿಂದ ಆದಷ್ಟು ಅಂತರವನ್ನು ಕಾಪಾಡಿಕೊಳ್ಳಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸಾಧ್ಯವಾದಷ್ಟು ಸೇವಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ