Health Tips: ನಿಮಗೆ ಗೊತ್ತಾ, ಈ ತರಕಾರಿ ತಿಂದರೆ ಕ್ಯಾನ್ಸರ್ ನಿಮ್ಮ ಹತ್ತಿರವೂ ಬರಲ್ಲ

ಟೊಮೆಟೊ ಎಲ್ಲಾ ರೀತಿಯ ಅಡುಗೆಗೂ ತನ್ನ ರುಚಿಯನ್ನು ನೀಡುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ನಮಗೆ ಈ ತರಕಾರಿ ಬಗ್ಗೆ ಸರಿಯಾಗಿ ತಿಳಿದಿಲ್ಲದಿರಬಹುದು ಆದರೆ ಇದರಲ್ಲಿರುವ ವಿವಿಧ ರೀತಿಯ ಪೋಷಕಾಂಶಗಳು ನಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡದ ಅಪಾಯ ಇರುವವರು ಕೂಡ ಈ ತರಕಾರಿಯನ್ನು ಯಾವುದೇ ರೀತಿಯ ಭಯವಿಲ್ಲದೆಯೇ ಸೇವನೆ ಮಾಡಬಹುದು. ಏಕೆಂದರೆ ಇದರಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದ್ದು ರಕ್ತದೊತ್ತಡ ಹೆಚ್ಚಾಗುವುದಿಲ್ಲ. ಹಾಗಾದರೆ ಈ ತರಕಾರಿ ಸೇವನೆ ಮಾಡಿದರೆ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತೆ ಎಂಬುದನ್ನು ತಿಳಿದುಕೊಳ್ಳಿ.

Health Tips: ನಿಮಗೆ ಗೊತ್ತಾ, ಈ ತರಕಾರಿ ತಿಂದರೆ ಕ್ಯಾನ್ಸರ್ ನಿಮ್ಮ ಹತ್ತಿರವೂ ಬರಲ್ಲ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Oct 06, 2024 | 10:22 AM

ಸಾಮಾನ್ಯವಾಗಿ ಅತಿ ಹೆಚ್ಚು ಬಳಕೆ ಮಾಡುವ ತರಕಾರಿಗಳಲ್ಲಿ ಟೊಮೆಟೊ ಕೂಡ ಒಂದು. ಇದರಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಫೋಲೇಟ್ ಮತ್ತು ವಿಟಮಿನ್-ಕೆ ಸಮೃದ್ಧವಾಗಿದೆ. ಟೊಮೆಟೊ ಎಲ್ಲಾ ರೀತಿಯ ಅಡುಗೆಗೂ ತನ್ನ ರುಚಿಯನ್ನು ನೀಡುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ನಮಗೆ ಈ ತರಕಾರಿ ಬಗ್ಗೆ ಸರಿಯಾಗಿ ತಿಳಿದಿಲ್ಲದಿರಬಹುದು ಆದರೆ ಇದರಲ್ಲಿರುವ ವಿವಿಧ ರೀತಿಯ ಪೋಷಕಾಂಶಗಳು ನಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡದ ಅಪಾಯ ಇರುವವರು ಕೂಡ ಈ ತರಕಾರಿಯನ್ನು ಯಾವುದೇ ರೀತಿಯ ಭಯವಿಲ್ಲದೆಯೇ ಸೇವನೆ ಮಾಡಬಹುದು. ಏಕೆಂದರೆ ಇದರಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದ್ದು ರಕ್ತದೊತ್ತಡ ಹೆಚ್ಚಾಗುವುದಿಲ್ಲ. ಹಾಗಾದರೆ ಈ ತರಕಾರಿ ಸೇವನೆ ಮಾಡಿದರೆ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತೆ ಎಂಬುದನ್ನು ತಿಳಿದುಕೊಳ್ಳಿ.

ಚರ್ಮಕ್ಕೆ ಒಳ್ಳೆಯದು:

ದೈನಂದಿನ ಆಹಾರದಲ್ಲಿಈ ತರಕಾರಿಯನ್ನು ನಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಹೃದಯವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು. ಟೊಮೆಟೊ ಸೇವನೆಯು ಚರ್ಮಕ್ಕೆ ಒಳ್ಳೆಯದು. ಇದರಲ್ಲಿ ಕಡಿಮೆ ಕ್ಯಾಲೊರಿಗಳಿದ್ದು ಹೆಚ್ಚಿನ ನೀರಿನ ಅಂಶವಿರುವುದರಿಂದ ದೇಹಕ್ಕೆ ಉತ್ತಮ ಆಹಾರವಾಗಿದೆ ಎಂದು ತಜ್ಞರು ಕೂಡ ಹೇಳುತ್ತಾರೆ. ನಿಯಮಿತವಾಗಿ ಟೊಮೆಟೊ ಸೇವನೆ ಮಾಡಿದರೆ ಇದರಲ್ಲಿ ಅಡಕವಾಗಿರುವ ಫೈಬರ್ ಅಂಶವು ನಿಮಗೆ ದೀರ್ಘಕಾಲದ ವರೆಗೆ ಹಸಿವಾಗಲು ಬಿಡುವುದಿಲ್ಲ. ಹಾಗಾಗಿ ಆರೋಗ್ಯಕ್ಕೆ ಹಾನಿಕಾರಕವಾಗಿರುವ ತಿಂಡಿಯನ್ನು ತಿನ್ನಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: ನಿಮ್ಮ ಶ್ವಾಸಕೋಶಕ್ಕೆ ಸಿಗರೇಟುಗಳಿಗಿಂತ ಸೊಳ್ಳೆ ಕಾಯಿಲ್​​​ಗಳೇ ಹೆಚ್ಚು ಹಾನಿಕಾರಕ

ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುತ್ತೆ:

ಈ ತರಕಾರಿಯಲ್ಲಿರುವ ಲೈಕೋಪೀನ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ, ಬಿಪಿಯನ್ನು ನಿಯಂತ್ರಿಸಲು ಮತ್ತು ಅಪಧಮನಿಯ ಕಾರ್ಯವನ್ನು ಸುಧಾರಿಸಲು ಉಪಯುಕ್ತವಾಗಿವೆ. ಇದರಲ್ಲಿರುವ ‘ಲೈಕೋಪೀನ್’ ಕೆಲವು ರೀತಿಯ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ವಿಶೇಷವಾಗಿ, ಇದು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಅದಲ್ಲದೆ ಇದರಲ್ಲಿ ಬೀಟಾ-ಕ್ಯಾರೋಟಿನ್, ಪ್ರಾಸ್ಟೇಟ್ ಕ್ಯಾನ್ಸರ್ ಗೆಡ್ಡೆ ಬೆಳೆಯುವುದನ್ನು ತಡೆಯುತ್ತದೆ. ನಿಯಮಿತವಾಗಿ ಟೊಮೆಟೊ ಸೇವಿಸುವುದರಿಂದ ನಿಮ್ಮ ಚರ್ಮ ಮತ್ತು ಕೂದಲು ಆರೋಗ್ಯವಾಗಿರುತ್ತದೆ. ಚರ್ಮವನ್ನು ರಕ್ಷಿಸಲು ಟೊಮೆಟೊ ತುಂಬಾ ಉಪಯುಕ್ತವಾಗಿದೆ. ‘ಫ್ರೀ ರಾಡಿಕಲ್’ಗಳನ್ನು ತಟಸ್ಥಗೊಳಿಸುವ ಮೂಲಕ, ಟೊಮೆಟೊಗಳು ಜೀವಕೋಶಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಾಗಿ ಇದನ್ನು ಅತಿಯಾಗಿ ಸೇವನೆ ಮಾಡದೆಯೇ ನಿಯಮಿತ ಸೇವನೆ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ