H3N8 Bird Flu: ಚೀನಾದ ಕೋಳಿಗಳಲ್ಲಿ H3N8 ವೈರಸ್ ಪತ್ತೆ! ​ರೋಗಲಕ್ಷಣ, ಮುನ್ನೆಚ್ಚರಿಕೆ ಕ್ರಮ?

ಚೀನಾದಲ್ಲಿ ಇನ್ನೊಂದು ವೈರಸ್​ ಪತ್ತೆಯಾಗಿದೆ, H3N8 ಎಂಬ ವೈರಸ್, ಇದು ಹಕ್ಕಿ ಜ್ವರದಿಂದ ಉಂಟಾದ ಮಾರಣಾಂತಿ ವೈರಸ್​​ ಎಂದು ಹೇಳಲಾಗಿದೆ.

H3N8 Bird Flu: ಚೀನಾದ ಕೋಳಿಗಳಲ್ಲಿ H3N8 ವೈರಸ್ ಪತ್ತೆ! ​ರೋಗಲಕ್ಷಣ, ಮುನ್ನೆಚ್ಚರಿಕೆ ಕ್ರಮ?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 13, 2023 | 12:28 PM

H3N2 ವೈರಸ್​ (H3N2 Virus) ಜಗತ್ತಿನ ಅನೇಕ ಕಡೆ ಹರಡುತ್ತಿದೆ, ಇದೇ ಈಗ ಎಲ್ಲರಿಗೂ ದೊಡ್ಡ ತಲೆನೋವು, ಈ ಮಧ್ಯೆ ಇದೀಗ ಚೀನಾದಲ್ಲಿ ಇನ್ನೊಂದು ವೈರಸ್​ ಪತ್ತೆಯಾಗಿದೆ, H3N8 (H3N8 Virus) ಎಂಬ ವೈರಸ್, ಇದು ಹಕ್ಕಿ ಜ್ವರದಿಂದ ಉಂಟಾದ ಮಾರಣಾಂತಿ ವೈರಸ್​​ ಎಂದು ಹೇಳಲಾಗಿದೆ. ಕೊರೊನಾ ನಂತರ ಅನೇಕ ವೈರಸ್​​ಗಳು ಮಾನವನ ಮೇಲೆ ಭಾರಿ ಪರಿಣಾಮವನ್ನು ಉಂಟು ಮಾಡುತ್ತಿದೆ. ಈ H3N8 ಮೊದಲ ಬಾರಿಗೆ ಚೀನಾದ 56 ವರ್ಷದ ಮಹಿಳೆಯಲ್ಲಿ ಕಂಡುಬಂದಿದೆ. H3N8 ಹಕ್ಕಿ ಜ್ವರದಿಂದ ಸಾವು ಕೂಡ ವರದಿಯಾಗಿದೆ. ಇಲ್ಲಿಯವರೆಗೆ, H3N8 ನ ಮಾನವ ಸೋಂಕಿನಿಂದ ಒಟ್ಟು ಮೂರು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಎರಡು ಮಕ್ಕಳು ಕೋಳಿಯನ್ನು ತಿಂದು ಸಾವನ್ನಪ್ಪಿದ್ದಾರೆ. ಏವಿಯನ್ ಫ್ಲೂ ವೈರಸ್​ ಎಂದಿಗೂ ಸಾವು ಉಂಟು ಮಾಡುವ ವೈರಸ್ ಅಲ್ಲ ಎಂದು ಹೇಳಲಾಗಿತ್ತು. ಆದರೆ ಇಂದು ಈ ವೈರಸ್​​ನಿಂದ ಮೂರು ಜನರು ಸಾವನ್ನಪ್ಪಿದ್ದಾರೆ. ಇದೀಗ ಈ ವೈರಸ್​​ ಸಾವಿನ ಆತಂಕದ ಅಲೆಯನ್ನು ಉಂಟು ಮಾಡಿದೆ. ಕೊರೊನಾ ನಂತರ ಬಂದ ಅನೇಕ ವೈರಸ್​ಗಳಿಂದ ಕಾಪಾಡಿಕೊಳ್ಳಲು ಅನೇಕ ವೈದ್ಯಕೀಯ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ H3N8 ವೈರಸ್​ ಹರಡುವಿಕೆ, ತಡೆಗಟ್ಟುವಿಕೆ ಮತ್ತು ರೋಗಲಕ್ಷಣಗಳ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಜನರಿಗೆ ಕೆಲವು ತಡೆಗಟ್ಟುವ ಸಲಹೆಗಳನ್ನು ನೀಡಿದೆ.

H3N8 ವೈರಸ್ ಎಂದರೇನು?

ಇದು ಏವಿಯನ್ ಇನ್ಫ್ಲುಯೆನ್ಸದ ಉಪತಳಿಯಾಗಿದೆ. ಈ ವೈರಸ್​​ ಮೊದಲು 1960ರ ಸುಮಾರಿಗೆ ಕಾಡು ಪಕ್ಷಿಗಳಲ್ಲಿ ಕಂಡುಹಿಡಿಯಲಾಯಿತು. ಇದು ನಂತರ ಇತರ ಪಕ್ಷಿಗಳಲ್ಲಿ ಕಂಡುಬಂದಿತು. 2022ರಲ್ಲಿ ಇದು ಮತ್ತೆ ಕಾಣಿಸಿಕೊಂಡಿತು. ಈ ವೈರಸ್ ಕ್ರಮೇಣ ಕುದುರೆಗಳು ನಾಯಿಗಳಿಗೂ ಹರಡಲು ಶುರುವಾಗಿದೆ. H3N8 ಹಕ್ಕಿ ಜ್ವರ ಪ್ರಕರಣಗಳು ಸತ್ತ ಕೋಳಿ ಮತ್ತು ಕಲುಷಿತ ಪರಿಸರದಿಂದ ಉಂಟಾಗಿದೆ ಎಂದು ವರದಿಯಾಗಿದೆ. WHO ಪ್ರಕಾರ ಏವಿಯನ್ ಇನ್ಫ್ಲುಯೆನ್ಸ ವೈರಸ್‌ಗಳೊಂದಿಗಿನ ಮಾನವ ಸೋಂಕಿನ ಪ್ರಕರಣಗಳು ಸಾಮಾನ್ಯವಾಗಿ ಸೋಂಕಿತ ಜೀವಂತ ಅಥವಾ ಸತ್ತ ಕೋಳಿ, ಕಲುಷಿತ ಪರಿಸರದಿಂದ ನೇರ ಅಥವಾ ಪರೋಕ್ಷವಾಗಿ ಹರಡುತ್ತದೆ ಎಂದು ಹೇಳಲಾಗಿದೆ.

H3N8 ವೈರಸ್ ಲಕ್ಷಣಗಳು:

WHO ಮಾನವರಲ್ಲಿ ಝೂನೋಟಿಕ್ ಇನ್ಫ್ಲುಯೆನ್ಸ ಸೋಂಕುಗಳು ಲಕ್ಷಣರಹಿತವಾಗಿರಬಹುದು ಅಥವಾ ರೋಗವನ್ನು ಉಂಟು ಮಾಡದೇ ಇರಬಹುದು ಎಂದು ಹೇಳಿದೆ. ವೈರಸ್​​ಗೆ ಸಂಬಂಧಿಸಿದ ಅಂಶಗಳ ಆಧಾರದ ಮೇಲೆ, ರೋಗವು ಸೌಮ್ಯವಾದ ಜ್ವರ ತರಹದ ರೋಗಲಕ್ಷಣಗಳಿಂದ ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಸಾವುವನ್ನು ಉಂಟು ಮಾಡಬಹುದು.

ಇದನ್ನೂ ಓದಿ: H3N2 Virus: ಇದರಿಂದ ಉಂಟಾಗುವ ದೀರ್ಘಕಾಲದ ಪರಿಣಾಮಗಳು ಯಾವುವು? ಇಲ್ಲಿವೆ ಸಲಹೆಗಳು

H3N8 ತಡೆಗಟ್ಟುವಿಕೆ ಸಲಹೆಗಳು

H3N8 ಹಕ್ಕಿ ಜ್ವರ ಹರಡುವಿಕೆಯ ನಡುವಿನ ಸಂಪರ್ಕದ ಕುರಿತು ಹೆಚ್ಚಿನ ಸಂಶೋಧನೆ ಸಂಗ್ರಹ ಅಗತ್ಯವಿದ್ದರೂ, WHO ಅನುಸರಿಸಲು ಕೆಲವು ಮೂಲಭೂತ ಮಾರ್ಗಸೂಚಿಗಳನ್ನು ಪಟ್ಟಿಮಾಡಿದೆ:

– ತಮ್ಮ ತಮ್ಮ ದೇಶಗಳಲ್ಲಿ ಜನಜಾಗೃತಿ ಹೆಚ್ಚಿಸಬೇಕು

– ಮಾಂಸದ ಮಾರುಕಟ್ಟೆಗಳ ಪರಿಸರದಲ್ಲಿ ಹೆಚ್ಚಿನ ಅಪಾಯದ ಸಂಪರ್ಕವನ್ನು ತಪ್ಪಿಸಿ

– ಕೋಳಿ ಅಥವಾ ಪಕ್ಷಿಗಳ ಮಲದಿಂದ ಕಲುಷಿತಗೊಳ್ಳುವ ಪ್ರದೇಶಗಳಲ್ಲಿ ಓಡಾಟ ತಪ್ಪಿಸಿ.

– ಆಗಾಗ್ಗೆ ಕೈಗಳನ್ನು ತೊಳೆಯುವ ಮೂಲಕ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸೂಚಿಸಲಾಗುತ್ತದೆ.

– ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಸಿ

– ಅಪಾಯಕಾರಿ ವಾತಾವರಣದಲ್ಲಿರುವಾಗ ಮಾಸ್ಕ್​ ಧರಿಸಿ.

ಈ ಸೋಂಕಿನ ನಿಖರವಾದ ಮೂಲ ಯಾವುದು ಮತ್ತು ಈ ವೈರಸ್ ಪ್ರಾಣಿಗಳಲ್ಲಿ ಪರಿಚಲನೆಗೊಳ್ಳುವ ಇತರ ಏವಿಯನ್ ಇನ್ಫ್ಲುಯೆನ್ಸ A (H3N8) ವೈರಸ್‌ಗಳಿಗೆ ಹೇಗೆ ಸಂಬಂಧಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಾರ್ವಜನಿಕ ಆರೋಗ್ಯಕ್ಕೆ ಪ್ರಸ್ತುತ ಅಪಾಯವಿದೆ ಎಂದು ಹೇಳಲಾಗಿದೆ, ಈ ಬಗ್ಗೆ ಹೆಚ್ಚಿನ ಅಧ್ಯಯನ ಬೇಕಾಗಿದೆ ಎಂದು ಹೇಳಿದೆ.

Published On - 11:07 am, Thu, 13 April 23

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ