Hair Care Tips: ಉದ್ದ, ದಪ್ಪ ಕೂದಲು ನಿಮಗಿಷ್ಟನಾ? ಆರೈಕೆ ಹೀಗಿರಬೇಕು

| Updated By: sandhya thejappa

Updated on: Jul 21, 2021 | 10:19 AM

ಸಾಮಾನ್ಯವಾಗಿ ಮಳೆಗಾಲದಲ್ಲಿ ತೇವಾಂಶದಿಂದ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಕೂದಲಿನ ಆರೈಕೆ ಅನಿವಾರ್ಯ. ಕೂದಲು ಉದುರುವ ಸಮಸ್ಯೆ ನಿಮಗಿದ್ದರೆ ನಾವು ಹೇಳಿದ ಕೆಲವು ಸಲಹೆಗಳನ್ನು ಅನುಸರಿಸಿ.

Hair Care Tips: ಉದ್ದ, ದಪ್ಪ ಕೂದಲು ನಿಮಗಿಷ್ಟನಾ? ಆರೈಕೆ ಹೀಗಿರಬೇಕು
ಉದ್ದ ಕೂದಲು (ಸಾಂಕೇತಿಕ ಚಿತ್ರ)
Follow us on

ಕೂದಲು ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಉದ್ದ ಹಾಗೂ ದಟ್ಟವಾದ ಕೂದಲನ್ನು ಪಡೆಯಲು ಹೆಣ್ಣು ಮಕ್ಕಳು ಪಡುವ ಹರಸಾಹಸ ಅಷ್ಟಿಷ್ಟಲ್ಲ. ಚಿಕ್ಕ ವಯಸ್ಸಿನಿಂದಲೇ ದಪ್ಪ ಮತ್ತು ಉದ್ದ ಕೂದಲಿನ ಕನಸು ಕಾಣುತ್ತಾರೆ. ಆದರೆ ಬಹುತೇಕರಿಗೆ ಕೂದಲಿನ ಆರೈಕೆ ಬಗ್ಗೆ ಇನ್ನು ತಿಳಿದಿಲ್ಲ. ಪದೇ ಪದೇ ಉದುರುವ ಕೂದಲಿಗೆ ಆರೈಕೆ ಚೆನ್ನಾಗಿ ಆಗಬೇಕು. ಇಲ್ಲದಿದ್ದರೆ ಕೂದಲು ಉದುರಿ ಮೋಟುದ್ದವಾಗುತ್ತದೆ. ಬ್ಯುಸಿ ಲೈಫಿನಲ್ಲಿ ಕೂದಲಿನ ಬಗ್ಗೆ ಹಲವರು ಕಾಳಜಿ ವಹಿಸುತ್ತಿಲ್ಲ. ಹೀಗೆ ಮಾಡಿದರೆ ತಮ್ಮ ಸೌಂದರ್ಯವನ್ನು ತಾವೇ ಹಾಳು ಮಾಡಿಕೊಂಡಂತಾಗುತ್ತದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ತೇವಾಂಶದಿಂದ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಕೂದಲಿನ ಆರೈಕೆ ಅನಿವಾರ್ಯ. ಕೂದಲು ಉದುರುವ ಸಮಸ್ಯೆ ನಿಮಗಿದ್ದರೆ ನಾವು ಹೇಳಿದ ಕೆಲವು ಸಲಹೆಗಳನ್ನು ಅನುಸರಿಸಿ.

* ಆಗಾಗ ಕತ್ತರಿಸುವುದು
ಕೂದಲಿಗೆ ಕತ್ತರಿ ಹಾಕುವುದಕ್ಕೆ ಯಾರು ಇಷ್ಟಪಡಲ್ಲ. ಆದರೆ ಕೂದಲು ಚೆನ್ನಾಗಿ ಬೆಳೆಯಬೇಕಾದರೆ 8 ರಿಂದ 10 ವಾರಕ್ಕೊಮ್ಮೆ ಕೂದಲನ್ನು ಕತ್ತರಿಸಬೇಕು. ಅತಿಯಾದ ಬಿಸಿಲಿನಿಂದ ಮತ್ತು ಧೂಳಿನಿಂದ ಕೂದಲು ಹಾಳಾಗುತ್ತದೆ. ಕೂದಲಿನ ತುದಿಯಲ್ಲಿ ಸ್ಪ್ಲಿಟ್ಸ್ ಆಗುತ್ತೆ. ಇದರಿಂದ ಕೂದಲು ಉದ್ದವಾಗಲ್ಲ. ಹೀಗಾಗಿ ಆಗಾಗ ಸ್ವಲ್ಪ ಸ್ವಲ್ಪ ಕೂದಲನ್ನು ಕತ್ತರಿಸಬೇಕು.

* ಹೇರ್ ಕಂಡೀಷನರ್ ಬಳಸಿ
ಆರೈಕೆ ಸರಿಯಾಗದಿದ್ದರೆ ಕೂದಲಿನ ತುದಿ ತೆಳ್ಳಗೆ ಕಾಣಿಸುತ್ತದೆ. ಕೂದಲಿಗೆ ಏನೋ ಹಾನಿಯಾದಂತೆ ಕಾಣುತ್ತದೆ. ಇದಕ್ಕಾಗಿ ಹೇರ್ ಕಂಡೀಷನರ್ ಬಳಸಬೇಕು. ತಲೆ ಸ್ನಾನ ಮಾಡಿದ ಬಳಿಕ ನಿಮಗೆ ಸರಿ ಹೊಂದುವ ಕಂಡೀಷನರ್​ನ ಹಚ್ಚಿ. 6 ರಿಂದ 7 ನಿಮಿಷ ಹಾಗೆ ಬಿಡಿ. ಆ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಕಂಡೀಷನರ್ ಬಳಸುವುದರಿಂದ ಕೂದಲಿಗೆ ಸಂಬಂಧಿಸಿ ಕೆಲ ಸಮಸ್ಯೆಗಳು ದೂರವಾಗುತ್ತದೆ. ಅಲ್ಲದೆ ಕೂದಲು ರೇಷ್ಮೆಯಂತಾಗುತ್ತದೆ.

* ಬಿಸಿ ಎಣ್ಣೆಯಿಂದ ಮಸಾಜ್ ಮಾಡಿ
ಎಣ್ಣೆ ಕೂದಲಿಗೆ ಆಹಾರವಿದ್ದಂತೆ. ಆದರೆ ಬಹುತೇಕರು ತಲೆಗೆ ಎಣ್ಣೆ ಹಾಕಲು ಹಿಂಜರಿಯುತ್ತಾರೆ. ವಾರಕ್ಕೆ ಎರಡು ಬಾರಿಯಾದರೂ ತಲೆಗೆ ಎಣ್ಣೆ ಹಾಕಬೇಕು. ಬೆಚ್ಚಗಿನ ಎಣ್ಣೆಯಿಂದ ವಾರಕ್ಕೊಮ್ಮೆ ಕೂದಲನ್ನು ಮಜಾಸ್ ಮಾಡಬೇಕು. ಹೀಗೆ ಮಾಡಿದರೆ ಕೂದಲು ಉದ್ದವಾಗಿ ಬೆಳೆಯುತ್ತದೆ. ಜೊತೆಗೆ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ. ಕೂದಲಿಗೆ ತೆಂಗಿನಕಾಯಿ, ಆಲಿವ್ ಮತ್ತು ಲ್ಯಾವೆಂಡರ್ ಎಣ್ಣೆಯನ್ನು ಬಳಸಬಹುದು.

* ಕೂದಲು ಬಾಚುವುದು
ಪದೇ ಪದೇ ಬಾಚುತ್ತಿದ್ದರೆ ಕೂದಲು ಉದುರುತ್ತದೆ ಮತ್ತು ಕೂದಲಿಗೆ ಹಾನಿಯಾಗುತ್ತದೆ ಅಂತ ಹೇಳುತ್ತಾರೆ. ಆದರೆ ಇದು ಸುಳ್ಳು. ಕೂದಲು ಬಾಚಿದಾಗ ತಲೆಯಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ. ಹೀಗಾಗಿ ರಾತ್ರಿ ಮಲಗುವ ಮೊದಲು ಕೂದಲನ್ನು ಬಾಚಿ. ಇದರಿಂದ ಕೂದಲು ಬಲವಾಗುತ್ತದೆ. ವೇಗವಾಗಿ ಬೆಳೆಯುವಂತೆ ಮಾಡುತ್ತದೆ.

* ತಲೆಗೆ ಟವಲ್ ಕಟ್ಟಬೇಡಿ
ತಲೆ ಸ್ನಾನ ಮಾಡಿದ ಬಳಿಕ ಟವಲ್​ನಿಂದ ಕಟ್ಟುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಒದ್ದೆಯಾದ ಕೂದಲನ್ನು ಸ್ವಲ್ಪ ಒರೆಸಿ ಹಾಗೆ ಬಿಡಬೇಕು. ಒದ್ದೆಯಾಗಿರುವ ಕೂದಲಿಗೆ ಬಟ್ಟೆ ಕಟ್ಟುವುದರಿಂದ ಕೂದಲು ಉದುರುತ್ತದೆ. ಹಲವರಿಗೆ ಈ ಅನುಭವವಾಗಿರುತ್ತದೆ. ಹೀಗಾಗಿ ಈ ಅಭ್ಯಾಸವನ್ನು ಕೈ ಬಿಡಬೇಕು.

ಇದನ್ನೂ ಓದಿ

Health Tips: ಸ್ಟ್ರಾಬೆರಿ ವಿಶೇಷತೆ ಏನು? ಒಡೆದ ಹಿಮ್ಮಡಿಗೆ ಈ ಹಣ್ಣಿನ ರಸವನ್ನು ಹಾಕುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ

Health Tips: ಕಂಪನಿಗಳಲ್ಲಿ ನೈಟ್​ ಡ್ಯೂಟಿ ಮಾಡುತ್ತಿದ್ದೀರಾ? ಆರೋಗ್ಯ ಕಾಳಜಿಗೆ ಈ ಕೆಲವು ವಿಷಯಗಳನ್ನು ಮರೆಯದಿರಿ

(Hair care Tips here is the step by step tips to make your hair smooth)