Health Tips: ಸ್ಟ್ರಾಬೆರಿ ವಿಶೇಷತೆ ಏನು? ಒಡೆದ ಹಿಮ್ಮಡಿಗೆ ಈ ಹಣ್ಣಿನ ರಸವನ್ನು ಹಾಕುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ
Strawberry: ಸ್ಟ್ರಾಬೇರಿ ಹಣ್ಣನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿನ ಕಲೆಗಳು ಮತ್ತು ಮೊಡವೆಯಂತಹ ಲಕ್ಷಣಗಳು ದೂರವಾಗುತ್ತದೆ. ಹಾಗಿದ್ದರೆ ಸ್ಟ್ರಾಬೆರಿ ಹಣ್ಣಿನ ಪ್ರಯೋಜನಗಳೇನು ಎನ್ನುವುದರ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಸೂಕ್ತ.
ಸಿಹಿ ಮತ್ತು ಹುಳಿ ಸಂಯೋಜನೆಯೊಂದಿಗಿರುವ ಸ್ಟ್ರಾಬೆರಿ ಹಣ್ಣನ್ನು ತಿನ್ನಲು ಹೆಚ್ಚಿನ ಜನರು ಇಷ್ಟಪಡುತ್ತಾರೆ. ಆದರೆ ಈ ಸ್ಟ್ರಾಬೆರಿ ಹಣ್ಣು ರುಚಿ ಮಾತ್ರವಲ್ಲ. ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸ್ಟ್ರಾಬೆರಿ ನೈಸರ್ಗಿಕವಾಗಿ ತ್ವಚೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದ್ದು, ಚರ್ಮವನ್ನು ಕಾಂತಿಯುತವಾಗಿರುವಂತೆ ಮಾಡುತ್ತದೆ. ಅಲ್ಲದೆ ಸ್ಟ್ರಾಬೇರಿ ಹಣ್ಣನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿನ ಕಲೆಗಳು ಮತ್ತು ಮೊಡವೆಯಂತಹ ಲಕ್ಷಣಗಳು ದೂರವಾಗುತ್ತದೆ. ಹಾಗಿದ್ದರೆ ಸ್ಟ್ರಾಬೆರಿ ಹಣ್ಣಿನ ಪ್ರಯೋಜನಗಳೇನು ಎನ್ನುವುದರ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಸೂಕ್ತ.
* ಸ್ಟ್ರಾಬೆರಿ ದೇಹದ ಚರ್ಮವನ್ನು ಸೂರ್ಯನ ಕಿರಣಗಳಿಂದ ಹಾನಿಯಾಗದಂತೆ ರಕ್ಷಿಸುತ್ತದೆ. ಎಲಾಜಿಕ್ ಆಮ್ಲ ಮತ್ತು ಆಂಥೋಸಯಾನಿನ್ ಸೇರಿದಂತೆ, ಅನೇಕ ಉತ್ಕರ್ಷಣ ನಿರೋಧಕಗಳು ಸ್ಟ್ರಾಬೆರಿ ಹಣ್ಣಿನಲ್ಲಿ ಅಧಿಕವಾಗಿದೆ.
* ಸ್ಟ್ರಾಬೆರಿ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ಸ್ಯಾಲಿಸಿಲಿಕ್ ಆಮ್ಲವಿದೆ. ಇದು ಬೀಟಾ ಹೈಡ್ರಾಕ್ಸಿ ಆಮ್ಲ, ಹೈಪರ್ ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಸ್ಟ್ರಾಬೆರಿಗಳಲ್ಲಿ ಆಲ್ಫಾ ಹೈಡ್ರಾಕ್ಸಿ ಆಮ್ಲಗಳಿವೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಚರ್ಮವನ್ನು ಶುದ್ಧೀಕರಿಸಲು ಇವು ಸಹಾಯ ಮಾಡುತ್ತವೆ. ಆದ್ದರಿಂದ, ಚರ್ಮವು ಒಣಗಿದಾಗ, ಸ್ಟ್ರಾಬೆರಿ ಹಣ್ಣಿನ ರಸವನ್ನು ಚರ್ಮಕ್ಕೆ ಹಚ್ಚಿ 10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
* ಸ್ಟ್ರಾಬೆರಿ ಹಣ್ಣು ಹಲ್ಲುಗಳು ಬಿಳಿಯಾಗಿ ಹೊಳೆಯುವಂತೆ ಮಾಡುತ್ತದೆ. ಇದರಲ್ಲಿನ ಮಾಲಿಕ್ ಆಮ್ಲವು ಹಲ್ಲುಗಳನ್ನು ಬಿಳುಪುಗೊಳಿಸಲು ಕೆಲಸ ಮಾಡುತ್ತದೆ. ಸ್ಟ್ರಾಬೆರಿಗಳನ್ನು ತಿನ್ನುವ ಬದಲು ಹಲ್ಲಿನ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. ನಂತರ ಬಾಯಿಯನ್ನು ಸ್ವಚ್ವವಾಗಿ ತೊಳೆಯಿರಿ.
* ಸ್ಟ್ರಾಬೆರಿಗಳು ರಕ್ತ ಪರಿಚಲನೆ ಸುಧಾರಿಸುವ ಗುಣವನ್ನು ಹೊಂದಿವೆ. ಆದ್ದರಿಂದ ಕಣ್ಣುಗಳ ಕೆಳಗೆ ಕಪ್ಪಾದಾಗ ಸ್ಟ್ರಾಬೆರಿ ಹಣ್ಣನ್ನು ಬಳಸಿ. ದೊಡ್ಡ ಸ್ಟ್ರಾಬೆರಿಯನ್ನು ಎರಡು ತುಂಡುಗಳಾಗಿ ಕತ್ತರಿಸಿ, ಆ ಚೂರುಗಳನ್ನು ಕಣ್ಣಿನ ಕೆಳಗೆ ಇರಿಸಿ. 15 ನಿಮಿಷಗಳ ನಂತರ, ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
* ಉಗುರುಗಳು ಬಲವಾಗಿ ಬೆಳೆಯಲು ಸ್ಟ್ರಾಬೆರಿ ಅತ್ಯುತ್ತಮ ಪೋಷಕಾಂಶವಾಗಿದೆ.
* ಸ್ಟ್ರಾಬೆರಿ, ಗ್ಲಿಸರಿನ್ ಮತ್ತು ಓಟ್ಸ್ ಮಿಶ್ರಣವು ಒಡಕು ಮತ್ತು ನಿರ್ಜೀವ ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಪಾದದ ಹಿಂಬಡಿಗೂ ಇದನ್ನು ಹಚ್ಚಬಹುದು. ನೈಸರ್ಗಿಕ ಸ್ಕ್ರಬ್ ಆಗಿ ಸ್ಟ್ರಾಬೆರಿ ಕಾರ್ಯನಿರ್ವಹಿಸುತ್ತದೆ.