Black Wheat Flour: ಕಪ್ಪು ಗೋಧಿ ಹಿಟ್ಟಿನಿಂದ ಈ ಸಮಸ್ಯೆಗಳಿಗೆ ಬೈ ಬೈ ಹೇಳಿ!

|

Updated on: Mar 01, 2024 | 4:38 PM

Black Wheat: ಮಧುಮೇಹ ಇರುವವರು ಕೆಲವು ಆಹಾರಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಆದರೆ ಕಪ್ಪು ಗೋಧಿ ಹಿಟ್ಟನ್ನು ಯಾವುದೇ ಸಂದೇಹವಿಲ್ಲದೆ ತೆಗೆದುಕೊಳ್ಳಬಹುದು. ಈ ಗೋಧಿ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದನ್ನು ತಡೆಯುತ್ತದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

Black Wheat Flour: ಕಪ್ಪು ಗೋಧಿ ಹಿಟ್ಟಿನಿಂದ ಈ ಸಮಸ್ಯೆಗಳಿಗೆ ಬೈ ಬೈ ಹೇಳಿ!
ಕಪ್ಪು ಗೋಧಿ ಹಿಟ್ಟಿನಿಂದ ಈ ಸಮಸ್ಯೆಗಳಿಗೆ ಬೈ ಬೈ ಹೇಳಿ!
Follow us on

ಸಾಮಾನ್ಯವಾಗಿ ಗೋಧಿ ಹಿಟ್ಟು ಅಂದರೆ.. ಅದು ತಿಳಿ ಕೆನೆ ಬಣ್ಣದ್ದಾಗಿರುತ್ತದೆ. ಆದರೆ ನೀವು ಎಂದಾದರೂ ಕಪ್ಪು ಗೋಧಿ ಹಿಟ್ಟನ್ನು ನೋಡಿದ್ದೀರಾ..!? ಹಾಗಾದರೆ ಈಗ ತಿಳಿದುಕೊಳ್ಳಿ. ನಿಜವಾಗಿಯೂ ಕಪ್ಪು ಗೋಧಿ ಹಿಟ್ಟು ನೋಡಿದರೆ ನಿಮಗೆ ಶಾಕ್ ಆಗುವುದು ಖಚಿತ. ಇದನ್ನು ಕಪ್ಪು ಗೋಧಿಯಿಂದ (Black Wheat Flour) ತಯಾರಿಸಲಾಗುತ್ತದೆ. ಈ ಕಪ್ಪು ಗೋಧಿ ಹಿಟ್ಟನ್ನು ಪ್ರಾಚೀನ ಕಾಲದಲ್ಲಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಇದನ್ನು ಸಾವಿರಾರು ವರ್ಷಗಳಿಂದಲೂ ಬೆಳೆಯಲಾಗುತ್ತಿದೆ. ಇದು ಪ್ರೋಟೀನ್ಗಳು, ಫೈಬರ್, ಕ್ಯಾಲ್ಸಿಯಂ, ಸತು, ಪೊಟ್ಯಾಸಿಯಮ್, ತಾಮ್ರ, ಕಬ್ಬಿಣ, ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲಗಳಂತಹ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಈ ಕಪ್ಪು ಗೋಧಿ ಹಿಟ್ಟನ್ನು ಬಳಸುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ತಡೆಯಬಹುದು. ಇದು ತುಂಬಾ ಆರೋಗ್ಯಕರ ಕೂಡ. ಹಾಗಾದರೆ ಈ ಹಿಟ್ಟಿನಿಂದ ಎಷ್ಟು ಪ್ರಯೋಜನಗಳಿವೆ ಎಂದು ತಿಳಿಯೋಣ (Health tips).

ಹೃದಯ ಸಮಸ್ಯೆಗಳಿಗೆ ಚಿಕಿತ್ಸೆ:
ಹೃದಯದ ಸಮಸ್ಯೆ ಇರುವವರು ಈ ಕಪ್ಪು ಗೋಧಿ ಹಿಟ್ಟನ್ನು ಬಳಸುವುದರಿಂದ ಹೃದಯದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಇದರಲ್ಲಿರುವ ಕೊಬ್ಬಿನಾಮ್ಲಗಳು (Fatty acid) ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ಸಹ ತಡೆಯುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಫೈಬರ್ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಆರೋಗ್ಯಕರವಾಗಿರುತ್ತದೆ. ಇದಲ್ಲದೆ, ಹೃದಯದ ಕಾರ್ಯವು ಸುಧಾರಿಸುತ್ತದೆ. ಹೃದಯಾಘಾತದ ಸಾಧ್ಯತೆಯೂ ಬಹಳ ಕಡಿಮೆಯಾಗುತ್ತದೆ.

ಮಧುಮೇಹಿಗಳಿಗೆ ಉತ್ತಮ:
ಮಧುಮೇಹ ಇರುವವರು ಕೆಲವು ಆಹಾರಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಆದರೆ ಕಪ್ಪು ಗೋಧಿ ಹಿಟ್ಟನ್ನು ಯಾವುದೇ ಸಂದೇಹವಿಲ್ಲದೆ ತೆಗೆದುಕೊಳ್ಳಬಹುದು. ಈ ಗೋಧಿ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದನ್ನು ತಡೆಯುತ್ತದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

Also Read: ಯೂರಿಕ್ ಆಸಿಡ್ ಅಧಿಕವಾಗಿರುವವರು ಏನು ತಿನ್ನಬೇಕು.. ಏನು ತಿನ್ನಬಾರದು? ಇಲ್ಲಿ ತಿಳಿದುಕೊಳ್ಳಿ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಕಪ್ಪು ಗೋಧಿ ಹಿಟ್ಟು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ವೈರಸ್‌ಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಇದಲ್ಲದೆ, ಕಪ್ಪು ಗೋಧಿ ಡಿಎನ್ಎ ಹಾನಿಯಿಂದ ರಕ್ಷಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ರಾತ್ರಿ ಕುರುಡುತನ ತಡೆಯುತ್ತದೆ:
ಅನೇಕ ಜನರು ರಾತ್ರಿ ಕುರುಡುತನದಿಂದ (Night blindness) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಪ್ಪು ಗೋಧಿ ಈ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಆಂಥೋಸಯಾನಿನ್‌ಗಳು (Anthocyanins) ರಾತ್ರಿ ಕುರುಡುತನವನ್ನು ತಡೆಯುತ್ತದೆ. ಕಣ್ಣಿನ ಸಮಸ್ಯೆಗಳೂ ದೂರವಾಗುತ್ತವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Fri, 1 March 24