ಏಲಕ್ಕಿ ಸೇವನೆ ಮಾಡಿದರೆ ಈ ಆರೋಗ್ಯ ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲ
ಆಯುರ್ವೇದ ತಜ್ಞರು ಏಲಕ್ಕಿಯನ್ನು ಪೌಷ್ಠಿಕಾಂಶದ ಶಕ್ತಿ ಕೇಂದ್ರ ಎಂದು ಕರೆಯುತ್ತಾರೆ. ಇದರಲ್ಲಿ ಸತು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ಸೇರಿದಂತೆ ಅಗತ್ಯ ಖನಿಜಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿದೆ. ಈ ಪೋಷಕಾಂಶಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
“ಸಾಂಬಾರ ಪದಾರ್ಥಗಳ ರಾಣಿ” ಎಂದೇ ಪ್ರಸಿದ್ಧಿಯಾಗಿರುವ ಏಲಕ್ಕಿ ಅದರ ಪರಿಮಳ ಮತ್ತು ಆರೋಗ್ಯಕರ ಗುಣಗಳಿಗೆ ಬಹಳ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ಈ ಮಸಾಲೆಯನ್ನು ಶತಮಾನಗಳಿಂದಲೂ, ಸಾಂಪ್ರದಾಯಿಕ ಔಷಧ ಮತ್ತು ವಿವಿಧ ರೀತಿಯ ಭಕ್ಷ್ಯಗಳ ಸ್ವಾದವನ್ನು ದುಪ್ಪಟ್ಟು ಮಾಡಲು ಬಳಸುತ್ತಾ ಬರಲಾಗಿದೆ. ಇದೊಂದು ರೀತಿಯ ಅಡುಗೆ ಮನೆಯ ಬಹುಮುಖ್ಯ ಪದಾರ್ಥ. ಕೇವಲ ಅಡುಗೆಗೆ ಮಾತ್ರವಲ್ಲ ಇದು ಮನೆಮದ್ದಿಗೂ ಸೈ ಎನಿಸಿಕೊಂಡ ಮಸಾಲೆ. ಇದನ್ನು ಶುಂಠಿ ಕುಟುಂಬಕ್ಕೆ ಸೇರಿದ ಎಲೆಟೇರಿಯಾ ಮತ್ತು ಅಮೋಮಮ್ ಸಸ್ಯಗಳ ಬೀಜಗಳಿಂದ ಪಡೆಯಲಾಗುತ್ತದೆ. ಇದರ ಇನ್ನೊಂದು ವಿಶೇಷತೆ ಎಂದರೆ ಇದನ್ನು ಕೇವಲ ಸಿಹಿ ತಿಂಡಿಗಳಲ್ಲಿ ಮಾತ್ರವಲ್ಲ ಖಾರದ ಭಕ್ಷ್ಯಗಳಲ್ಲಿಯೂ ಬಳಸಲಾಗುತ್ತದೆ. ಜೊತೆಗೆ ಚಹಾ ಮತ್ತು ಕಾಫಿಯಂತಹ ಪಾನೀಯಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಅಡುಗೆಗೆ ಬಳಕೆಯಾಗುವುದರೊಂದಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದು ಜೀರ್ಣಕ್ರಿಯೆಯಿಂದ ಹಿಡಿದು ಉಸಿರಾಟವನ್ನು ತಾಜಾಗೊಳಿಸುವ ನೈಸರ್ಗಿಕ ನಿರ್ವಿಷೀಕರಣವಾಗಿ ಕಾರ್ಯನಿರ್ವಹಿಸುತ್ತದೆ.
ಆರೋಗ್ಯ ಪ್ರಯೋಜನಗಳೇನು?
ಈ ಮಸಾಲೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ಹೃದಯದ ಆರೋಗ್ಯವನ್ನು ಕಾಪಾಡಿಕೊಂಡು ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಗಾಗಿಯೇ ಆಯುರ್ವೇದ ತಜ್ಞರು ಇದನ್ನು ಪೌಷ್ಠಿಕಾಂಶದ ಶಕ್ತಿ ಕೇಂದ್ರ ಎಂದು ಕರೆಯುತ್ತಾರೆ. ಇದರಲ್ಲಿ ಸತು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ಸೇರಿದಂತೆ ಅಗತ್ಯ ಖನಿಜಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿದೆ. ಈ ಪೋಷಕಾಂಶಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ;
ಜೀರ್ಣಕಾರಿ ಅಸ್ವಸ್ಥತೆಗಳಾದ ವಾಕರಿಕೆ, ವಾಂತಿ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸಲು ಏಲಕ್ಕಿ ಬಹಳ ಉಪಯುಕ್ತವಾಗಿದೆ. ಅಲ್ಲದೆ ಇದು ಆಮ್ಲೀಯತೆಯನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದನ್ನು ಮಿತವಾಗಿ ಸೇವನೆ ಮಾಡುವುದು ಒಳ್ಳೆಯದು.
ಬಾಯಿಯ ಆರೋಗ್ಯಕ್ಕೆ ಒಳ್ಳೆಯದು;
ಏಲಕ್ಕಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ಸೋಂಕುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುವ ಮೂಲಕ ಹಲ್ಲಿನ ಕುಳಿಗಳನ್ನು ತಡೆದು ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ.
ಇದನ್ನೂ ಓದಿ: ತುಳಸಿ ಎಲೆಗಳನ್ನು ಈ ರೀತಿ ಸೇವನೆ ಮಾಡಿದರೆ ಯಾವ ರೋಗವೂ ಬರುವುದಿಲ್ಲ
ಹೃದಯದ ಆರೋಗ್ಯವನ್ನು ಕಾಪಾಡುತ್ತದೆ;
ಏಲಕ್ಕಿಯ ನಿಯಮಿತ ಸೇವನೆಯು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಉತ್ಕರ್ಷಣ ನಿರೋಧಕ ಗುಣಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಒಟ್ಟಾರೆ ಹೃದಯರಕ್ತನಾಳದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.
ಭಾರತೀಯ ಪಾಕಪದ್ಧತಿಯಲ್ಲಿ ಪ್ರಧಾನವಾಗಿರುವ ಏಲಕ್ಕಿಯ ವಿಶಿಷ್ಟ ಪರಿಮಳವು, ಸಿಹಿಯಾಗಲಿ ಖಾರವಾಗಲಿ ತನ್ನದೇ ಆದ ರುಚಿಯನ್ನು ನೀಡುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರ ನೀಡುವುದರಿಂದ ಹಿಡಿದು ಹೃದಯರಕ್ತನಾಳದ ಸ್ವಾಸ್ಥ್ಯವನ್ನು ಉತ್ತೇಜಿಸುವವರೆಗೆ, ಏಲಕ್ಕಿ ತನ್ನದೇ ಆದ ಆರೋಗ್ಯಕರ ಗುಣಗಳನ್ನು ಹೊಂದಿದೆ. ಹಾಗಾಗಿ ಈ ಮಸಾಲೆಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ನೈಸರ್ಗಿಕ ಉತ್ತೇಜನ ಸಿಗುತ್ತದೆ. ಆದರೆ ಇದರೆ ಸೇವನೆ ಅತಿಯಾಗದಂತೆ ನೋಡಿಕೊಳ್ಳಿ, ಆರೋಗ್ಯ ಕಾಪಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ