ಕೊರೊನಾ ಭೀತಿಯಿಂದ ಜನರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆರೋಗ್ಯಕರ ಆಹಾರದ ಜೊತೆಗೆ ತಾಜಾ ಆಹಾರವನ್ನೇ ತಿನ್ನಲು ಇಷ್ಟಪಡುತ್ತಾರೆ. ಅದಾಗ್ಯೂ, ರೊಟ್ಟಿ, ಚಪಾತಿಯಂತಹ ಆಹಾರಗಳನ್ನು ಬಿಸಿಬಸಿ ತಿಂದು ತಣ್ಣಗಾದ ಮೇಲೆ ಪಕ್ಕಕ್ಕಿಡುತ್ತಾರೆ. ಆದರೆ, ತಣ್ಣಗಾದ ರೊಟ್ಟಿಯಿಂದ ಹಲವು ಆರೋಗ್ಯ ಪ್ರಯೋಜನಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ರಾತ್ರಿ ಮಾಡಿದ ಚಪಾತಿ ಉಳಿದರೆ ಬೆಳಗ್ಗೆ ತಿಂಡಿಯಾಗಿ ಸೇವಿಸಬಹುದು ಎನ್ನುತ್ತಾರೆ. ವಿಶೇಷವಾಗಿ ಮಧುಮೇಹ ಪೀಡಿತರು ಅವರ ಆಹಾರದಲ್ಲಿ ಈ ರಾತ್ರಿ ಮಾಡಿದ ಚಪಾತಿಗಳನ್ನು ಬೆಳಗ್ಗೆ ಸೇರಿಸುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯುತ್ತಾರೆ. ಅಂತಹ ಚಪಾತಿಗಳನ್ನು ಚಹಾ ಅಥವಾ ಯಾವುದೇ ಒಳ್ಳೆಯ ಪದಾರ್ಥದೊಂದಿಗೆ ಸೇವಿಸಬಹುದು. ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ರಾತ್ರಿ ಮಾಡುವ ಚಪಾತಿಯಲ್ಲಿ ಬೆಳಗ್ಗೆಯಾದರೂ ಅದರಲ್ಲಿರುವ ಪೋಷಕಾಂಶಗಳು ಹಾಗೆಯೇ ಇರುತ್ತವೆ. ಇದೇ ಕಾರಣಕ್ಕೆ ಬೆಳಗ್ಗೆಯೂ ತಿನ್ನಬಹುದು ಎನ್ನಲಾಗುತ್ತದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಈ ಚಪಾತಿಗಳನ್ನು ಬೆಚ್ಚಗಿನ ಹಾಲಿನಲ್ಲಿ 10 ನಿಮಿಷಗಳ ಕಾಲ ನೆನೆಸಿಟ್ಟರೆ ಸಮಸ್ಯೆಯನ್ನು ನಿಯಂತ್ರಿಸಬಹುದು. ಜೀರ್ಣಕ್ರಿಯೆ ಸಮಸ್ಯೆ, ಎಸಿಡಿಟಿ ಮತ್ತು ಹೊಟ್ಟೆ ಉಬ್ಬರದಿಂದ ಬಳಲುತ್ತಿರುವವರು ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ಚಪಾತಿಗಳನ್ನು ನೆನೆಸಿಟ್ಟು ಬೆಳಗ್ಗೆ ತಿನ್ನುವುದರಿಂದ ಇಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Weight loss tips: ತೂಕ ಇಳಿಸಿಕೊಳ್ಳಲು ಈ ಹಣ್ಣಿನ ಜ್ಯೂಸ್ ಕುಡಿಯಿರಿ? ಇಲ್ಲಿದೆ ತಜ್ಞರ ಸಲಹೆ
ರಾತ್ರಿ ಮಾಡಿದ ಚಪಾತಿಗಳನ್ನು ನೆನೆಸಿ ಬೆಳಗ್ಗೆ ತಿಂದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಎನ್ನುತ್ತಾರೆ ಸಂಶೋಧಕರು. ಈ ಚಪಾತಿ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಹಾಲಿನೊಂದಿಗೆ ತಿಂದರೆ ಅದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಕ್ಕಳು ತೆಳ್ಳಗಿದ್ದರೆ ರಾತ್ರಿ ಉಳಿದ ಚಪಾತಿಗಳನ್ನು ತಿನ್ನಿಸುವ ಅಭ್ಯಾಸ ಮಾಡುವುದರಿಂದ ಅವರ ತೂಕ ಹೆಚ್ಚುತ್ತದೆ. ಬೆಳಗಿನ ಉಪಾಹಾರದಲ್ಲಿ ಇವುಗಳನ್ನು ಹಾಲಿನೊಂದಿಗೆ ತಿನ್ನುವುದರಿಂದ ನಿಮ್ಮ ಆರೋಗ್ಯವು ಖಂಡಿತವಾಗಿಯೂ ಸುಧಾರಿಸುತ್ತದೆ.
ರಾತ್ರಿ ಉಳಿದ ಚಪಾತಿಯನ್ನು ಬೆಳಗ್ಗೆ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡಬಹುದು. ಉಳಿದಿರುವ ಈ ಚಪಾತಿಯಲ್ಲಿ ನಾರಿನಂಶ ಹೇರಳವಾಗಿದೆ. ಬೇಸಿಗೆಯಲ್ಲಿ ತಣ್ಣನೆಯ ಹಾಲಿನೊಂದಿಗೆ ತಿನ್ನುವುದರಿಂದ ದೇಹದ ಉಷ್ಣತೆಯು ಸಮತೋಲನದಲ್ಲಿರುತ್ತದೆ. ಶಾಖದ ಹೊಡೆತವು ದೇಹದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗೆಯೇ ರಾತ್ರಿ ಉಳಿದ ತಣ್ಣನೆಯ ಚಪಾತಿಯನ್ನು ಬೆಳಗ್ಗೆ ಲಸ್ಸಿ ಮತ್ತು ಮಜ್ಜಿಗೆಯೊಂದಿಗೆ ತಿನ್ನುವುದು ಕೂಡ ತುಂಬಾ ಒಳ್ಳೆಯದು. ಬೆಳಗಿನ ಉಪಾಹಾರಕ್ಕೆ ತಣ್ಣನೆಯ ಹಾಲಿನೊಂದಿಗೆ ಇದನ್ನು ಸೇವಿಸುವವರಿಗೂ ಆರೋಗ್ಯಕ್ಕೆ ಉತ್ತಮ.
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ