Home remedies: ಮಕ್ಕಳು ಸ್ಪಷ್ಟವಾಗಿ ಮಾತನಾಡದಿದ್ದರೆ ಈ ಬೇರನ್ನು ಹೀಗೆ ಬಳಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 20, 2024 | 5:43 PM

 ಹಿಂದಿನ ಕಾಲದಲ್ಲಿ ಇವುಗಳನ್ನು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಉಪಯೋಗ ಮಾಡಲಾಗುತ್ತಿತ್ತು, ಇದರ ಬಗ್ಗೆ ತಿಳಿದುಕೊಂಡರೆ ಇದರಲ್ಲಿರುವ ಶಕ್ತಿ ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಬಹುದು. ಈ ಸುವಾಸನೆಯುಕ್ತ ಬೇರಿನ ಸೇವನೆಯು ದೇಹಕ್ಕೆ ಹಿತ ನೀಡುವುದಲ್ಲದೆ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿದೆ. ಈ ಬೇರನ್ನು ಸ್ವಚ್ಛವಾಗಿ ತೊಳೆದು ನೀರಿನಲ್ಲಿ ಕುದಿಸಿ ಇದರಿಂದ ಮಾಡಿದ ಕಷಾಯವನ್ನು ಸೇವನೆ ಮಾಡಲಾಗುತ್ತದೆ ಇದರಿಂದ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಬೇರುಗಳನ್ನು ಆಯುರ್ವೇದದಲ್ಲಿ ಹೇರಳವಾಗಿ ಬಳಸಲಾಗುತ್ತದೆ. ಹಾಗಾಗಿ ಅವುಗಳನ್ನು ನಾವು ಕೂಡ ಬಳಸುವ ಮೂಲಕ, ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು

Home remedies: ಮಕ್ಕಳು ಸ್ಪಷ್ಟವಾಗಿ ಮಾತನಾಡದಿದ್ದರೆ ಈ ಬೇರನ್ನು ಹೀಗೆ ಬಳಸಿ
ಸಾಂದರ್ಭಿಕ ಚಿತ್ರ
Follow us on

ಬಜೆ ಬೇರಿನ ಬಗ್ಗೆ ನೀವು ಕೇಳಿರಬಹುದು. ಹಿಂದಿನ ಕಾಲದಲ್ಲಿ ಇವುಗಳನ್ನು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಉಪಯೋಗ ಮಾಡಲಾಗುತ್ತಿತ್ತು, ಇದರ ಬಗ್ಗೆ ತಿಳಿದುಕೊಂಡರೆ ಇದರಲ್ಲಿರುವ ಶಕ್ತಿ ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಬಹುದು. ಈ ಸುವಾಸನೆಯುಕ್ತ ಬೇರಿನ ಸೇವನೆಯು ದೇಹಕ್ಕೆ ಹಿತ ನೀಡುವುದಲ್ಲದೆ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿದೆ. ಈ ಬೇರನ್ನು ಸ್ವಚ್ಛವಾಗಿ ತೊಳೆದು ನೀರಿನಲ್ಲಿ ಕುದಿಸಿ ಇದರಿಂದ ಮಾಡಿದ ಕಷಾಯವನ್ನು ಸೇವನೆ ಮಾಡಲಾಗುತ್ತದೆ ಇದರಿಂದ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಬೇರುಗಳನ್ನು ಆಯುರ್ವೇದದಲ್ಲಿ ಹೇರಳವಾಗಿ ಬಳಸಲಾಗುತ್ತದೆ. ಹಾಗಾಗಿ ಅವುಗಳನ್ನು ನಾವು ಕೂಡ ಬಳಸುವ ಮೂಲಕ, ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಸಾಮಾನ್ಯವಾಗಿ ಈ ಬಜೆ ಬೇರುಗಳು ನಿಮಗೆ ಆಯುರ್ವೇದ ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತದೆ. ದೇಹದ ಉಷ್ಣಾಂಶ ಜಾಸ್ತಿಯಾಗಿದ್ದರೆ ಅಥವಾ ಹೆಚ್ಚು ಬೆವರುತ್ತಿದ್ದರೆ ಈ ಬೇರನ್ನು ಕುಟ್ಟಿ ಪುಡಿ ಮಾಡಿದ ಮಿಶ್ರಣವನ್ನು ಹಾಲು ಅಥವಾ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಈ ಬೇರಿನ ಕಷಾಯವನ್ನು ಕುಡಿಯುವುದರಿಂದ, ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜ್ವರದ ಸಮಯದಲ್ಲಿ ಕುಡಿಯುವುದರಿಂದ ಜ್ವರವು ಬೇಗನೆ ಕಡಿಮೆಯಾಗುತ್ತದೆ. ನಿಯಮಿತವಾಗಿ ಈ ಬೇರಿನ ಪಾನೀಯವನ್ನು ಕುಡಿಯುವುದರಿಂದ ಕೀಲು ನೋವು ಸಹ ಕಡಿಮೆಯಾಗುತ್ತದೆ. ದೇಹದಲ್ಲಿನ ಕಲ್ಮಶಗಳನ್ನು ತೆಗೆದು ಹಾಕುತ್ತದೆ. ಚರ್ಮವು ಆರೋಗ್ಯಕರ ಮತ್ತು ಕಾಂತಿಯುತವಾಗಿರುತ್ತದೆ. ರಕ್ತ ಪರಿಚಲನೆ ಸರಾಗವಾಗಿರುತ್ತದೆ. ಅಲ್ಲದೆ ರಕ್ತವನ್ನು ಶುದ್ಧೀಕರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆಯೂ ಕಡಿಮೆಯಾಗುತ್ತದೆ.

ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು

ಚಿಕ್ಕ ಮಕ್ಕಳು ಮಾತನಾಡಲು ಕಷ್ಟ ಪಡುತ್ತಿದ್ದರೆ ಅಥವಾ ನಾಲಿಗೆ ಸರಿಯಾಗಿ ಹೊರಳದೆ ಸ್ಪಷ್ಟವಾಗಿ ಉಚ್ಚಾರಣೆ ಮಾಡದಿದ್ದರೆ ಆಗ ಈ ಬಜೆ ಬೇರನ್ನು ತಿನ್ನಿಸಲಾಗುತ್ತದೆ. ಇದನ್ನು ಆದಷ್ಟು ಹಸಿದ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಒಳ್ಳೆಯದು. ಹೀಗಾಗಿ ಬೆಳಗ್ಗೆ ಇದನ್ನು ಲಿಂಬು ರಸದಲ್ಲಿ ತೇಯ್ದು ತಿಂದರೆ ಕೆಲವೇ ದಿನಗಳಲ್ಲಿ ಮಕ್ಕಳು ಮಾತನಾಡುತ್ತಾರೆ ಜೊತೆಗೆ ಸರಿಯಾಗಿ ಉಚ್ಚರಿಸುತ್ತಾರೆ. ಅಲ್ಲದೆ ಇದು ಮಗುವಿನ ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರೂ ಕೂಡ ಬಜೆ ಬೇರನ್ನು ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಜೊತೆಗೆ ದೇಹದಲ್ಲಿ ಚುರುಕುತನ ಹೆಚ್ಚಾಗುತ್ತದೆ. ಜೊತೆಗೆ ಇದು ಹಸಿವನ್ನು ಕೂಡ ಹೆಚ್ಚಿಸುತ್ತದೆ.

ಇದನ್ನೂ ಓದಿ: ಹಾವು ಕಚ್ಚುವುದರಿಂದ ಹಿಡಿದು, ಜ್ವರ ನಿವಾರಣೆ ಮಾಡುವವರೆಗೆ ಎಲ್ಲಾ ರೋಗಕ್ಕೂ ಈ ಸೊಪ್ಪು ರಾಮಬಾಣ!

ಇದರ ಕಷಾಯ ತಯಾರಿಸಲು ಬೇಕಾಗುವ ಪದಾರ್ಥಗಳು:

4 ಅಥವಾ 5 ಗ್ರಾಂ ಬೇರಿನ ಪುಡಿ,

4 ಕಾಳು ಮೆಣಸು

2 ಏಲಕ್ಕಿ

ಸಣ್ಣ ತುಂಡು ಶುಂಠಿ

ಜೇನುತುಪ್ಪ

ಮೊದಲಿಗೆ, ಒಂದು ಬಟ್ಟಲಿನಲ್ಲಿ ಎರಡು ಕಪ್ ನೀರನ್ನು ಹಾಕಿ, ಬೇರಿನ ಪುಡಿ, ಶುಂಠಿ, ಕಾಳು ಮೆಣಸು ಮತ್ತು ಏಲಕ್ಕಿ ಸೇರಿಸಿ ನೀರನ್ನು ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.

(ಸೂಚನೆ: ಇದನ್ನು ಪ್ರಯತ್ನಿಸುವ ಮೊದಲು ನಿಮ್ಮ ತಜ್ಞರ ಸಲಹೆಯನ್ನು ಅನುಸರಿಸಿ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ