AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾದ ಬದಲು ತುಳಸಿ-ಶುಂಠಿ ನೀರನ್ನು ಕುಡಿಯಿರಿ

ತುಳಸಿ ಮತ್ತು ಶುಂಠಿ ಎರಡೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಇವೆರಡೂ ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಪ್ರತಿದಿನ ಬೆಳಿಗ್ಗೆ ತುಳಸಿ ಮತ್ತು ಶುಂಠಿ ನೀರನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯುತ್ತೀರಿ ಎಂದು ತಿಳಿಯೋಣ.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾದ ಬದಲು ತುಳಸಿ-ಶುಂಠಿ ನೀರನ್ನು ಕುಡಿಯಿರಿ
ಅಕ್ಷತಾ ವರ್ಕಾಡಿ
|

Updated on: Jun 27, 2024 | 6:51 PM

Share

ನೀವು ದಿನದ ಆರಂಭದಲ್ಲಿ ಕೆಲವು ಆರೋಗ್ಯಕರ ಆಹಾರವನ್ನು ಸೇವಿಸಿದರೆ, ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸಲ್ಪಡುತ್ತೀರಿ. ಇದಕ್ಕಾಗಿ ನೀವು ಪ್ರತಿದಿನ ಬೆಳಿಗ್ಗೆ ಹಾಲಿನ ಟೀ ಅಥವಾ ಕಾಫಿಯ ಬದಲಿಗೆ ತುಳಸಿ ಮತ್ತು ಶುಂಠಿಯ ನೀರನ್ನು ಕುಡಿಯಬಹುದು. ತುಳಸಿ ಮತ್ತು ಶುಂಠಿ ಎರಡೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಪ್ರತಿದಿನ ಬೆಳಿಗ್ಗೆ ತುಳಸಿ ಮತ್ತು ಶುಂಠಿ ನೀರನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯುತ್ತೀರಿ ಎಂದು ತಿಳಿಯೋಣ.

ತುಳಸಿ ಮತ್ತು ಶುಂಠಿ ಎರಡೂ ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಮತ್ತು ಶುಂಠಿ ನೀರನ್ನು ಕುಡಿಯುವುದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಶುಂಠಿ ಮತ್ತು ತುಳಸಿ ನೀರನ್ನು ಕುಡಿಯುವುದು ನಿಮಗೆ ಇನ್ನೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಅವುಗಳ ಬಗ್ಗೆ ತಿಳಿಯೋಣ.

ಖಾಲಿ ಹೊಟ್ಟೆಯಲ್ಲಿ ತುಳಸಿ ಮತ್ತು ಶುಂಠಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು

ಆಂಟಿಫಂಗಲ್ ಗುಣಲಕ್ಷಣಗಳು:

ತುಳಸಿಯಲ್ಲಿ ಆ್ಯಂಟಿ ಫಂಗಲ್, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಕೊಲೆಸ್ಟ್ರಾಲ್ ಗುಣಗಳಿವೆ. ಇದು ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲವಾಗಿರಿಸುತ್ತದೆ ಹಾಗೂ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.

ಇದನ್ನೂ ಓದಿ: ಮಲಗಿದ್ದಲೇ ನಿಮಗೆ ಗೊತ್ತಿಲ್ಲದೆ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ಇದ್ಯಾ? ಈ ಸಮಸ್ಯೆಯಾಗಿರಬಹುದು

ತೂಕ ನಷ್ಟದಲ್ಲಿ ಪರಿಣಾಮಕಾರಿ:

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಮತ್ತು ಶುಂಠಿ ನೀರನ್ನು ಕುಡಿದರೆ ತೂಕ ಇಳಿಸುವುದು ಸುಲಭ. ಇದು ನಿಮ್ಮ ಹೊಟ್ಟೆಯಲ್ಲಿರುವ ಹೆಚ್ಚುವರಿ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉತ್ತಮ ಜೀರ್ಣಕ್ರಿಯೆ:

ತುಳಸಿಯು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುವ ಯುಜೆನಾಲ್ ಅನ್ನು ಹೊಂದಿರುತ್ತದೆ. ಶುಂಠಿಯಲ್ಲಿ ಜಿಂಜರಾಲ್ ಇದ್ದು ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮಾತ್ರವಲ್ಲದೆ ಕೊಬ್ಬು ನಷ್ಟಕ್ಕೂ ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: