Health Tips: ರೋಗನಿರೋಧಕ ಶಕ್ತಿ ಹೆಚ್ಚಿಸುವ ಹುಣಸೆಹಣ್ಣು, ಬೆಳ್ಳುಳ್ಳಿಯ ರಸಂ ಮಾಡುವ ಸುಲಭ ವಿಧಾನ ಇಲ್ಲಿದೆ

| Updated By: ಸುಷ್ಮಾ ಚಕ್ರೆ

Updated on: Jan 06, 2022 | 2:04 PM

ದೇಹದಲ್ಲಿ ರೋಗನಿರೋಧ ಶಕ್ತಿಯನ್ನು ಹೆಚ್ಚಿಸಲು ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ಕರಿಬೇವಿನ ಎಲೆಗಳಂತಹ ಪದಾರ್ಥಗಳೊಂದಿಗೆ ತಯಾರಿಸಿದ ರಸಂ ಬಹಳ ಸಹಕಾರಿ. ಇದು ಕರುಳಿಗೆ ಒಳ್ಳೆಯದು ಮಾತ್ರವಲ್ಲದೆ ರುಚಿಕರವಾಗಿಯೂ ಇರುತ್ತದೆ.

Health Tips: ರೋಗನಿರೋಧಕ ಶಕ್ತಿ ಹೆಚ್ಚಿಸುವ ಹುಣಸೆಹಣ್ಣು, ಬೆಳ್ಳುಳ್ಳಿಯ ರಸಂ ಮಾಡುವ ಸುಲಭ ವಿಧಾನ ಇಲ್ಲಿದೆ
ರಸಂ
Follow us on

ಕೊರೊನಾವೈರಸ್ ಸಾಂಕ್ರಾಮಿಕದ ಎರಡನೇ ಅಲೆಯ ವಿರುದ್ಧ ದೇಶ ಇನ್ನೂ ಹೋರಾಡುತ್ತಿದೆ. ಮಾರಣಾಂತಿಕ ವೈರಸ್‌ನಿಂದ ರಕ್ಷಿಸಿಕೊಳ್ಳಲು ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳೊಂದಿಗೆ ಆರೋಗ್ಯಕರ ಆಹಾರವನ್ನು ತಿನ್ನುವುದು ಕೂಡ ಅತ್ಯಗತ್ಯ. ನಿಮ್ಮ ದೇಹದಲ್ಲಿ ರೋಗನಿರೋಧ ಶಕ್ತಿಯನ್ನು ಹೆಚ್ಚಿಸಲು ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ಕರಿಬೇವಿನ ಎಲೆಗಳಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳೊಂದಿಗೆ ತಯಾರಿಸಿದ ರಸಂ ಬಹಳ ಸಹಕಾರಿ. ಇದು ಕರುಳಿಗೆ ಒಳ್ಳೆಯದು ಮಾತ್ರವಲ್ಲದೆ ರುಚಿಕರವಾಗಿಯೂ ಇರುತ್ತದೆ. ಕೋವಿಡ್ ವಿರುದ್ಧ ಹೋರಾಡಲು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಅಡುಗೆಯಲ್ಲಿ ಈ ರಸಂ ಬಳಸಿ.

ಈ ಕುರಿತು ಆಹಾರ ತಜ್ಞರಾದ ಪ್ರಿಯಾಂಕಾ ಸಿಂಗ್ ಮಾಹಿತಿ ನೀಡಿದ್ದು, ನಮ್ಮ ದೇಹದ ರೋಗನಿರೋಧ ಶಕ್ತಿಯನ್ನು ಹೆಚ್ಚಿಸಲು ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಭಾರತೀಯ ಮಸಾಲೆಗಳಿಂದ ರುಚಿಕರವಾದ ರಸಂ ಮಾಡುವುದು ಹೇಗೆಂದು ಅವರು ತಿಳಿಸಿಕೊಟ್ಟಿದ್ದಾರೆ. ಹುಣಸೆಹಣ್ಣಿನ ತಿರುಳು, ಟೊಮ್ಯಾಟೋ, ಕರಿಬೇವಿನ ಎಲೆಗಳು, ಬೆಳ್ಳುಳ್ಳಿ ಮತ್ತು ಕರಿಮೆಣಸುಗಳಿಂದ ಈ ರಸಂ ತಯಾರಿಸಬಹುದು. ಹಾಗಾದರೆ, ಈ ರಸಂ ತಯಾರಿಸುವ ವಿಧಾನ ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ರಸಂಗೆ ಬೇಕಾಗುವ ಪದಾರ್ಥಗಳು:
ಹುಣಸೆ ಹಣ್ಣಿನ ತಿರುಳು – 1 ಟೇಬಲ್ ಚಮಚ
ಕತ್ತರಿಸಿದ ಟೊಮ್ಯಾಟೊ – 1
ಕರಿಬೇವಿನ ಎಲೆಗಳು – 10ರಿಂದ 12
ಕಾಳು ಮೆಣಸು – 1ರಿಂದ 2 ಟೇಬಲ್ ಸ್ಪೂನ್
ಬೆಳ್ಳುಳ್ಳಿ – 4ರಿಂದ5 ಎಸಳು
ಅರಿಶಿನ ಪುಡಿ – ಅರ್ಧ ಟೀ ಸ್ಪೂನ್
ಒಣ ಕೆಂಪು ಮೆಣಸಿನಕಾಯಿ – 2
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ – 1 ಟೀ ಸ್ಪೂನ್
ಇಂಗು – ಅರ್ಧ ಟೀ ಸ್ಪೂನ್
ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಚಮಚ
ಎಣ್ಣೆ – 1 ಚಮಚ
ಸಾಸಿವೆ ಬೀಜ – 1 ಟೀ ಸ್ಪೂನ್

ರಸಂ ತಯಾರಿಸುವ ವಿಧಾನ:
2 ಕೆಂಪು ಮೆಣಸಿನಕಾಯಿ, ಕರಿಮೆಣಸು, ಜೀರಿಗೆ, ಬೆಳ್ಳುಳ್ಳಿ ಮತ್ತು 4-5 ಕರಿಬೇವಿನ ಎಲೆಗಳನ್ನು ಬಾಣಲೆಯಲ್ಲಿ ಹುರಿದು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ. ಆ ಮಿಶ್ರಣವನ್ನು ಪಕ್ಕಕ್ಕೆ ಇರಿಸಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕತ್ತರಿಸಿದ ಟೊಮ್ಯಾಟೊ, ಉಳಿದ ಕರಿಬೇವಿನ ಎಲೆಗಳು, ಅರಿಶಿನ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಮತ್ತು 3-4 ನಿಮಿಷ ಬೇಯಿಸಿ. ಈಗ ಒರಟಾಗಿ ರುಬ್ಬಿದ ಮಸಾಲಾ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಹುಣಸೆ ಹಣ್ಣಿನ ತಿರುಳು ಮತ್ತು 2 ಕಪ್ ನೀರು ಸೇರಿಸಿ. ಮುಚ್ಚಳವನ್ನು ಮುಚ್ಚಿ ಮತ್ತು ಕನಿಷ್ಠ 10 ನಿಮಿಷಗಳ ಕಾಲ ಕುದಿಸಲು ಬಿಡಿ. ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ (ಅಥವಾ ತುಪ್ಪ) ಹಾಕಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, 1 ಕೆಂಪು ಮೆಣಸಿನಕಾಯಿ ಮತ್ತು ಇಂಗನ್ನು ಹಾಕಿ ಮತ್ತು ಬೀಜಗಳು ಸಿಡಿಯಲು ಪ್ರಾರಂಭವಾದ ನಂತರ ರಸಂಗೆ ಒಗ್ಗರಣೆ ಕೊಡಿ. ನಂತರ ಸ್ಟೌವ್ ಆಫ್ ಮಾಡಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಗೂ ಸ್ವಲ್ಪ ಕಾಳು ಮೆಣಸಿನ ಪುಡಿಯನ್ನು ಹಾಕಿ ಮಿಕ್ಸ್​ ಮಾಡಿ.

ಈ ರಸಂ ಅನ್ನು ನೀವು ಕಪ್​ನಲ್ಲಿ ಹಾಗೇ ಕುಡಿಯಬಹುದು ಅಥವಾ ಊಟದಲ್ಲಿ ಅನ್ನದೊಂದಿಗೆ ಕೂಡ ಸೇವಿಸಬಹುದು.

ಈ ರಸಂನ ಪ್ರಯೋಜನಗಳು:
ರಸಂ ತಯಾರಿಸಲು ಬಳಸುವ ಪದಾರ್ಥಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ. ಹುಣಸೆಹಣ್ಣು, ಅರಿಶಿಣ ಮತ್ತು ಕರಿಬೇವಿನ ಎಲೆಗಳು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿವೆ. ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸಾಮಾನ್ಯ ಶೀತ ಸೇರಿದಂತೆ ಅನಾರೋಗ್ಯದ ವಿರುದ್ಧ ಹೋರಾಡುತ್ತದೆ.

ಇದನ್ನೂ ಓದಿ: Health Tips: ದೇಹದ ಅತಿಯಾದ ತೂಕ ಇಳಿಸಲು ಈ ಆಹಾರವನ್ನು ಸೇವಿಸಿ

Winter Health Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಈ 5 ಆಹಾರ ಸೇವಿಸಿ