AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು? ಮಗುವಿನ ಆರೋಗ್ಯಕ್ಕೆ ಈ ಆಹಾರ ಬಳಸಿ

ಗರ್ಭಾವಸ್ಥೆಯಲ್ಲಿ ನಿಮ್ಮ ಮಗುವಿನ ಅಗತ್ಯಗಳನ್ನು ಪೂರೈಸಲು ನಿಮಗೆ ಹೆಚ್ಚುವರಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಇದಕ್ಕಾಗಿ ಹಾಲು, ಚೀಸ್ ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಸಿ.

ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು? ಮಗುವಿನ ಆರೋಗ್ಯಕ್ಕೆ ಈ ಆಹಾರ ಬಳಸಿ
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
| Edited By: |

Updated on: Sep 01, 2023 | 2:46 PM

Share

ಗರ್ಭಿಣಿಯರಿಗೆ ಆರಂಭದಲ್ಲಿ ಯಾವ ರೀತಿಯ ಆಹಾರ ತಿನ್ನಬೇಕು, ಏನನ್ನು ತಿನ್ನಬಾರದು, ಯಾವ ಆಹಾರ ಸೇವಿಸಿದರೆ ಮಗುವಿನ ಬೆಳವಣಿಗೆ ಚೆನ್ನಾಗಿರುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಆತಂಕ, ಗೊಂದಲಗಳಿರುವುದು ಸಾಮಾನ್ಯ. ಈಗ ತರಕಾರಿ, ಸೊಪ್ಪುಗಳಿಗೂ ರಾಸಾಯನಿಕಗಳನ್ನು ಹಾಕುವುದರಿಂದ ಅದು ಕೂಡ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಆದಷ್ಟೂ ರಾಸಾಯನಿಕಮುಕ್ತ ಆಹಾರ ಸೇವಿಸುವುದು ಉತ್ತಮ. ಕೆಲವು ಗರ್ಭಿಣಿಯರು 9 ತಿಂಗಳ ಕಾಲ ತಮಗೆ ಹಾಗೂ ತಮ್ಮ ಮಗುವಿಗೂ ಸೇರಿಸಿ ದುಪ್ಪಟ್ಟು ಊಟ, ತಿಂಡಿ ಮಾಡುತ್ತಾರೆ. ಮನೆಯಲ್ಲಿರುವ ಅಮ್ಮ, ಅಜ್ಜಿಯಂದಿರೂ ‘ನೀನೀಗ ಇಬ್ಬರಿಗೂ ಸೇರಿಸಿ ತಿನ್ನಬೇಕೆಂದು’ ತಟ್ಟೆ ತುಂಬ ಅನ್ನ ಹಾಕಿ ಕೊಡುತ್ತಾರೆ. ಆದರೆ, ವಾಸ್ತವದ ಸಂಗತಿಯೆಂದರೆ ಗರ್ಭಿಣಿಯರು ರಾಶಿ ರಾಶಿ ತಿನ್ನಬೇಕೆಂದೇನೂ ಇಲ್ಲ. ಆದರೆ, ಅವರು ಸ್ವಲ್ಪವೇ ಆಹಾರ ಸೇವಿಸಿದರೂ ಅದರಲ್ಲಿ ಪ್ರೋಟೀನ್, ವಿಟಮಿನ್, ಕ್ಯಾಲ್ಷಿಯಂ, ಕೊಬ್ಬಿನಾಂಶ, ಐರನ್ ಅಂಶಗಳು ಇರುವಂತೆ ನೋಡಿಕೊಳ್ಳಬೇಕು.

ಗರ್ಭಿಣಿಯಾಗಿರುವಾಗ ಮಹಿಳೆಯರ ದೇಹಕ್ಕೆ ಹೆಚ್ಚುವರಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣದ ಅಂಶ ಹೆಚ್ಚೇ ಬೇಕಾಗುತ್ತದೆ. ತಾಯಿಯ ಆಹಾರದಿಂದಲೇ ಮಗು ತನಗೆ ಬೇಕಾಗಿದ್ದನ್ನು ಪಡೆದುಕೊಂಡು, ಬೆಳವಣಿಗೆಯಾಗುವುದರಿಂದ ಮಗುವಿನ ಮೂಳೆ, ಮಾಂಸಖಂಡಗಳು, ಕಣ್ಣು, ಕೈ-ಕಾಲುಗಳ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಸೇವಿಸುವುದು ಅತ್ಯಗತ್ಯ. ಹೀಗಾಗಿ, ಹಸಿ ತರಕಾರಿ, ಹಸಿರು ಸೊಪ್ಪುಗಳಾದ ಪಾಲಕ್, ಸಬ್ಬಸಿಗೆ, ಬಸಳೆ, ಬ್ರೊಕೊಲಿ, ಧಾನ್ಯಗಳು, ಹಣ್ಣು, ಹಾಲು, ಬೆರ್ರಿ, ಡ್ರೈ ಫ್ರೂಟ್ಸ್, ಹಾಲಿನ ಉತ್ಪನ್ನಗಳಾದ ಮೊಸರು, ಪನೀರ್, ಚೀಸ್, ತುಪ್ಪ, ತಿನ್ನಲು ಮರೆಯದಿರಿ.

ಇದನ್ನೂ ಓದಿ: ಬ್ಲ್ಯಾಕ್ ಕಾಫಿಯಿಂದ ಆರೋಗ್ಯ ಪ್ರಯೋಜನಗಳೇನು? ಇದನ್ನು ಯಾವಾಗ ಸೇವಿಸಿದರೆ ಉತ್ತಮ?

ನೀವು ಮಾಂಸಾಹಾರಿಗಳಾದರೆ ಸೀ ಫುಡ್, ಮೊಟ್ಟೆ, ಬಯಸುತ್ತೀರಿ. ವಿವಿಧ ಬಗೆಯ ಬೇಯಿಸಿದ ಮಾಂಸವನ್ನು ಸೇವಿಸಬಹುದು.

ಗರ್ಭಾವಸ್ಥೆಯಲ್ಲಿ ನಿಮ್ಮ ಮಗುವಿನ ಅಗತ್ಯಗಳನ್ನು ಪೂರೈಸಲು ನಿಮಗೆ ಹೆಚ್ಚುವರಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಇದಕ್ಕಾಗಿ ಹಾಲು, ಚೀಸ್ ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಸಿ. ಡೈರಿ ಉತ್ಪನ್ನಗಳು ರಂಜಕ, ಬಿ ಜೀವಸತ್ವಗಳು, ಮೆಗ್ನೀಸಿಯಂ ಮತ್ತು ಸತುವನ್ನು ದೇಹಕ್ಕೆ ಒದಗಿಸುತ್ತದೆ. ಮೊಸರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಮಗುವಿನ ಬೆಳವಣಿಗೆಗೆ ವಿಟಮಿನ್ ಎ ಅತ್ಯಗತ್ಯ. ಹಾಗೇ, ಫೈಬರ್ ಕೂಡ ಅಗತ್ಯ. ಗೆಣಸು, ಓಟ್ಸ್, ಸೊಪ್ಪುಗಳು, ಬೇಯಿಸಿದ ಧಾನ್ಯಗಳಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಫೈಬರ್ ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಗರ್ಭಾವಸ್ಥೆಯ ಮಲಬದ್ಧತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಬಿಯರ್ ಮಿತ ಪ್ರಮಾಣದ ಸೇವನೆ ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ; ಅಧ್ಯಯನ

ಹಣ್ಣುಗಳಲ್ಲಿ ಸೇಬು, ಕಿತ್ತಳೆ, ಬಾಳೆಹಣ್ಣು ಹಾಗೂ ಬಟರ್ ಫ್ರೂಟ್ ಗರ್ಭಿಣಿಯರಿಗೆ ಹಾಗೂ ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಬಹಳ ಉಪಯುಕ್ತವಾದುದು.

ಮೊಟ್ಟೆಗಳು ಆರೋಗ್ಯಕರ ಆಹಾರವಾಗಿದೆ. ಏಕೆಂದರೆ, ಅವು ನಿಮಗೆ ಅಗತ್ಯವಿರುವ ಪ್ರತಿಯೊಂದು ಪೋಷಕಾಂಶಗಳನ್ನು ಹೊಂದಿರುತ್ತವೆ. ಒಂದು ದೊಡ್ಡ ಮೊಟ್ಟೆಯು ಸುಮಾರು 71 ಕ್ಯಾಲೋರಿಗಳನ್ನು ಹೊಂದಿದೆ.

ಡ್ರೈಫ್ರೂಟ್ಸ್​ಗಳಲ್ಲಿ ವಾಲ್​ನಟ್, ಒಣದ್ರಾಕ್ಷಿ, ಖರ್ಜೂರ, ಅಂಜೂರವನ್ನು ಹೆಚ್ಚಾಗಿ ಸೇವಿಸಿ. ಇವುಗಳು ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ, ಮಗುವಿನ ಮೆದುಳಿನ ಬೆಳವಣಿಗೆಯನ್ನು ಉತ್ತಮಗೊಳಿಸುತ್ತವೆ. ಗರ್ಭಿಣಿಯರಲ್ಲಿ ರಕ್ತಹೀನತೆ ಉಂಟಾದರೆ ಹೆರಿಗೆ ಸಮಯದಲ್ಲಿ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ, ರಕ್ತ ಹೆಚ್ಚಿಸುವ ಆಹಾರವನ್ನು ಸೇವಿಸಿ.

ಇದನ್ನೂ ಓದಿ:  ಕ್ಯಾನ್ಸರ್ ಚಿಕಿತ್ಸೆ ಇನ್ನಷ್ಟು ಸರಳ; 7 ನಿಮಿಷಗಳಲ್ಲಿ ನೀಡಬಹುದಾದ ವಿಶ್ವದ ಮೊದಲ ಇಂಜೆಕ್ಷನ್ ಅಭಿವೃದ್ಧಿಪಡಿಸಿದ ಬ್ರಿಟನ್

ಬೆರ್ರಿ ಹಣ್ಣುಗಳು ದೇಹಕ್ಕೆ ನೀರು, ಆರೋಗ್ಯಕರ ಕಾರ್ಬೋಹೈಡ್ರೇಟ್‌, ವಿಟಮಿನ್ ಸಿ, ಫೈಬರ್ ಅನ್ನು ಒದಗಿಸುತ್ತದೆ. ಹೀಗಾಗಿ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಬೆರ್ರಿ ಹಣ್ಣು ಬಹಳ ಒಳ್ಳೆಯ ಆಹಾರವಾಗಿದೆ.

ಎಲ್ಲದಕ್ಕಿಂತ ಮುಖ್ಯವಾಗಿ ಗರ್ಭಿಣಿಯರಿಗೆ ನೀರು ಅತ್ಯಂತ ಅಗತ್ಯವಾದುದು. ದಿನಕ್ಕೆ ನಾಲ್ಕೈದು ಲೀಟರ್ ನೀರು ಸೇವಿಸಿದರೆ ಮಗು ಆರೋಗ್ಯವಾಗಿರುತ್ತದೆ. ಹಾಗೇ, ಗರ್ಭಿಣಿಯರ ಮಲಬದ್ಧತೆ ಸಮಸ್ಯೆಯೂ ನಿವಾರಣೆ ಆಗುತ್ತದೆ. ನೀರು ಹೆಚ್ಚಾಗಿ ಸೇವಿಸುವುದರಿಂದ ಗರ್ಭಿಣಿಯರು ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ