Health Tips: ಮಧುಮೇಹಿಗಳು ಯಾವ ಸಮಯದಲ್ಲಿ ವ್ಯಾಯಾಮ ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ
ಮಧುಮೇಹಿಗಳು ವ್ಯಾಯಾಮದ ಜೊತೆಗೆ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಅಸಡ್ಡೆ ತೋರಬಾರದು. ಇದರ ಜೊತೆಗೆ ನಿಮ್ಮ ದಿನಚರಿಯನ್ನು ಸರಿಯಾದ ರೀತಿಯಲ್ಲಿ ರೂಢಿಸಿಕೊಂಡಲ್ಲಿ ನೀವು ಆರೋಗ್ಯವಾಗಿರಬಹುದು. ಹಾಗಾದರೆ ದಿನನಿತ್ಯ ನೀವು ಯಾವ ರೀತಿಯ ಚಟುವಟಿಕೆಗಳನ್ನು ಮಾಡಬೇಕು? ಅದಕ್ಕೆ ಸರಿಯಾದ ಸಮಯವಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.
ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಇದೆಲ್ಲವೂ ಸಮತೋಲನದಲ್ಲಿ ಇದ್ದಾಗ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಆದರೆ ಮಧುಮೇಹಿಗಳು ವ್ಯಾಯಾಮದ ಜೊತೆಗೆ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಅಸಡ್ಡೆ ತೋರಬಾರದು. ಇದರ ಜೊತೆಗೆ ನಿಮ್ಮ ದಿನಚರಿಯನ್ನು ಸರಿಯಾದ ರೀತಿಯಲ್ಲಿ ರೂಢಿಸಿಕೊಂಡಲ್ಲಿ ನೀವು ಆರೋಗ್ಯವಾಗಿರಬಹುದು. ಹಾಗಾದರೆ ದಿನನಿತ್ಯ ನೀವು ಯಾವ ರೀತಿಯ ಚಟುವಟಿಕೆಗಳನ್ನು ಮಾಡಬೇಕು? ಅದಕ್ಕೆ ಸರಿಯಾದ ಸಮಯವಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.
ಭಾರತದಲ್ಲಿ 10 ಕೋಟಿಗೂ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಆರಂಭವಾದರೆ ಅದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಆದರೆ ನಿಯಂತ್ರಣದಲ್ಲಿಡಬಹುದು. ಹಾಗಾಗಿ ಮಧುಮೇಹಿಗಳು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸ್ವಲ್ಪ ಸಮಯ ವ್ಯಾಯಾಮ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ಇದರ ಜೊತೆಗೆ ನಡಿಗೆ ಮಾಡುವುದು ಕೂಡ ಸಕ್ಕರೆ ಮಟ್ಟದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮಗೆ ಮಧ್ಯಾಹ್ನದ ಊಟದ ನಂತರ ವಾಕಿಂಗ್ ಮಾಡಲು ಸಾಧ್ಯವಾಗದಿದ್ದರೆ, ರಾತ್ರಿ ಊಟದ ನಂತರ ಮಾಡಬಹುದು. ವಾಸ್ತವದಲ್ಲಿ, ಊಟದ ಬಳಿಕ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿರುತ್ತದೆ ಹಾಗಾಗಿ ವ್ಯಾಯಾಮದ ಮೂಲಕ ಇದನ್ನು ನಿಯಂತ್ರಿಸಬಹುದಾಗಿದೆ.
ಇದನ್ನೂ ಓದಿ: ಚಾಕೊಲೇಟ್ ಸೇವನೆಯಿಂದ ಹೃದಯಾಘಾತ, ಕ್ಯಾನ್ಸರ್ ತಡೆಯಬಹುದು
ವ್ಯಾಯಾಮ ಮಾಡಲು ಸರಿಯಾದ ಸಮಯವಿದೆಯೇ?
ಮಧುಮೇಹ ರೋಗಿಗಳಿಗೆ ಕೂಡ ವ್ಯಾಯಾಮ ಮಾಡಲು ಸರಿಯಾದ ಸಮಯವಿದೆ ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಮಧುಮೇಹ ಇರುವವರು ಊಟವಾದ ನಂತರ ನಡೆಯಬೇಕು ಎಂದು ವೈದ್ಯರು ಹೇಳುತ್ತಾರೆ. ರಾತ್ರಿ ಊಟದ ನಂತರ ವಾಕಿಂಗ್ ಅಥವಾ ವ್ಯಾಯಾಮ ಮಾಡುವುದು ಮಧುಮೇಹ ರೋಗಿಗಳಿಗೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅನೇಕ ಅಧ್ಯಯನಗಳಲ್ಲಿಯೂ ಈ ಸಮಯ ಸೂಕ್ತ ಎಂಬುದು ಸಾಬೀತಾಗಿದೆ. ಇದೆಲ್ಲದರ ಜೊತೆಗೆ ಮಧುಮೇಹ ಪೀಡಿತರು ದಿನವಿಡೀ ದೈಹಿಕವಾಗಿ ಸಕ್ರಿಯವಾಗಿರಲು ಪ್ರಯತ್ನಿಸಬೇಕು. ಊಟದ ನಂತರ ಅಥವಾ ಅವರಿಗೆ ಅವಕಾಶ ಸಿಕ್ಕಾಗ ಸಾಕಷ್ಟು ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು.
(ಸೂಚನೆ: ಇಲ್ಲಿ ನೀಡಿದ ಸೂಚನೆಗಳನ್ನು ಪ್ರಯತ್ನಿಸುವ ಮೊದಲು ಸಂಬಂಧಿತ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ.)
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ