Health Tips: ಬೇಗ ಕೋಪ ಬರುತ್ತಾ? ಈ ಎಲ್ಲಾ ಕಾಯಿಲೆಯೂ ಬರುತ್ತೆ ಎಚ್ಚರ

ನೀವು ಕೂಡ ತಕ್ಷಣಕ್ಕೆ ಕೋಪ ಮಾಡಿಕೊಳ್ಳುತ್ತೀರಾ? ಹಾಗಾದರೆ ನೀವು ಹಲವಾರು ರೀತಿಯ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿಯೂ ಕೋಪ ಮಾಡಿಕೊಳ್ಳುವುದರಿಂದ ಬೇರೆಯವರಗಿಂತ ನಮಗೇ ಹೆಚ್ಚು ಹಾನಿ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅರ್ಧ ಕೋಪವನ್ನು ಕಡಿಮೆ ಮಾಡಬಹುದು

Health Tips: ಬೇಗ ಕೋಪ ಬರುತ್ತಾ? ಈ ಎಲ್ಲಾ ಕಾಯಿಲೆಯೂ ಬರುತ್ತೆ ಎಚ್ಚರ
Edited By:

Updated on: May 28, 2024 | 2:21 PM

ಕೋಪದಿಂದ ಕೊಯ್ದ ಕೊಂಡ ಮೂಗು ಮತ್ತೆ ಬರುವುದಿಲ್ಲ ಎಂಬ ಮಾತಿದೆ. ಇದು ಅಕ್ಷರಶಃ ಸತ್ಯ. ಕೋಪಗೊಂಡ ಆವೇಶದಲ್ಲಿ ನಾವು ನಿಯಂತ್ರಣ ಕಳೆದುಕೊಳ್ಳುತ್ತೇವೆ. ಕೋಪಗೊಳ್ಳುವ ವಿಷಯಕ್ಕೆ ಕೋಪ ಮಾಡಿಕೊಳ್ಳುವುದು ಸಹಜ ಹಾಗಂತ ಚಿಕ್ಕ, ಪುಟ್ಟ ವಿಷಯಗಳಿಗೆ ರೇಗುತ್ತಿದ್ದರೆ ಅದು ಒಳ್ಳೆಯದಲ್ಲ. ಆಗ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಬೇಕು. ಅದಕ್ಕಾಗಿ ನೀವು ಧ್ಯಾನ, ಪ್ರಾಣಯಾಮ, ಯೋಗ, ದೀರ್ಘ ಉಸಿರಾಟ ಮತ್ತಿತರ ವಿಧಾನಗಳಿಂದ ಕೋಪ ಕಡಿಮೆ ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ಕೋಪ ಮಾಡಿಕೊಂಡು ವ್ಯಕ್ತಿತ್ವ ಮಾತ್ರವಲ್ಲ, ಆರೋಗ್ಯಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ.

ನೀವು ಕೂಡ ತಕ್ಷಣಕ್ಕೆ ಕೋಪ ಮಾಡಿಕೊಳ್ಳುತ್ತೀರಾ? ಹಾಗಾದರೆ ನೀವು ಹಲವಾರು ರೀತಿಯ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿಯೂ ಕೋಪ ಮಾಡಿಕೊಳ್ಳುವುದರಿಂದ ಬೇರೆಯವರಗಿಂತ ನಮಗೇ ಹೆಚ್ಚು ಹಾನಿ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅರ್ಧ ಕೋಪವನ್ನು ಕಡಿಮೆ ಮಾಡಬಹುದು.

ಕೋಪ ಮಾಡಿಕೊಂಡರೆ ಏನೆಲ್ಲಾ ತೊಂದರೆಯಾಗುತ್ತೆ?

*ಕೋಪ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಖಿನ್ನತೆ ಕಾಣಿಸಿಕೊಳ್ಳುತ್ತದೆ.

*ಬೇಗನೆ ಕೋಪ ಬರುವವರಿಗೆ ಬಿಪಿ ಜಾಸ್ತಿ ಎನ್ನುತ್ತಾರೆ. ಈ ಮಾತು ನಿಜ. ಕೋಪ ಮಾಡಿಕೊಳ್ಳುವುದರಿಂದ ರಕ್ತ ಸಂಚಾರದಲ್ಲಿ ಏರಳಿತ ಉಂಟಾಗುತ್ತದೆ ಜೊತೆಗೆ ರಕ್ತದೊತ್ತಡ ಅಧಿಕವಾಗುತ್ತದೆ ಇದರಿಂದ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ಬರಬಹುದು.

*ಕೆಲವರಿಗೆ ಕೋಪ ಬಂದರೆ ತಲೆನೋವು ಕೂಡ ಬರುತ್ತದೆ. ಜೊತೆಗೆ ದೇಹದಲ್ಲಿ ನಿಶಕ್ತಿಯಾಗಿ ತಲೆತಿರುಗಬಹುದು.

*ಕೋಪಗೊಂಡು ಮಲಗಿದರೆ ತುಂಬಾ ಹೊತ್ತು ನಿದ್ದೆ ಬರುವುದಿಲ್ಲ, ಮನಸ್ಸಿನಲ್ಲಿ ಒಳ್ಳೆ ಆಲೋಚನೆ ಬರುವುದಿಲ್ಲ. ಸಾಮಾನ್ಯವಾಗಿ ನಿದ್ದೆ ಸರಿಯಾಗಿ ಬರದಿದ್ದರೆ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ.

*ಅಧಿಕ ಕೋಪಗೊಂಡಾಗ ಕೆಲವರಿಗೆ ಮೆದುಳಿಗೆ ರಕ್ತ ಸಂಚಾರ ಮಾಡುವ ರಕ್ತನಾಳಗಳು ಒಡೆಯುತ್ತದೆ. ಇದರಿಂದ ಮೆದುಳಿಗೆ ಸರಿಯಾದ ರಕ್ತ ಹಾಗೂ ಆಮ್ಲಜನಕ ಪೂರೈಕೆಯಾಗದೆ ಪಾರ್ಶ್ವವಾಯು ಉಂಟಾಗಬಹುದು.

ಇದನ್ನೂದ ಓದಿ: ಬುದ್ಧಿವಂತಿಕೆ, ಮೆದುಳಿನ ಶಕ್ತಿಯನ್ನು ಹೆಚ್ಚಿಸುವ 5 ಆರೋಗ್ಯಕರ ಅಭ್ಯಾಸಗಳನ್ನು ಪಾಲನೆ ಮಾಡಿ

ಹಾಗಾಗಿ ಕೋಪಗೊಳ್ಳುವಾಗ ನೂರು ಬಾರಿ ಯೋಚಿಸಿ. ನಿಮ್ಮ ಆರೋಗ್ಯಕ್ಕೆ ಹಾನಿಯಾಗುವ ಕೆಲಸವನ್ನು ಎಂದಿಗೂ ಮಾಡಬೇಡಿ. ಒಳ್ಳೆಯದಲ್ಲ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us