AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post Pregnancy Diet: ಮೊದಲ ಹೆರಿಗೆಯ ಭಯವೇಕೆ?; ಬಾಣಂತಿಯರ ಡಯಟ್ ಹೇಗಿರಬೇಕು? ಇಲ್ಲಿದೆ ಮಾಹಿತಿ

Health Tips: ಮೊದಲ ಡೆಲಿವರಿಯಾದಾಗ ಮಹಿಳೆಯರಿಗೆ ಯಾವ ಆಹಾರವನ್ನು ತಿನ್ನಬೇಕು, ಯಾವ ರೀತಿಯ ವ್ಯಾಯಾಮಗಳನ್ನು ಮಾಡಬೇಕೆಂಬ ಬಗ್ಗೆ ಅರಿವು ಇರುವುದಿಲ್ಲ. ಆಯುರ್ವೇದ ತಜ್ಞರು ಹೇಳಿರುವ ಪ್ರಕಾರ ಬಾಣಂತಿಯರು ತುಪ್ಪ, ಹಾಲು, ಅನ್ನ, ತರಕಾರಿಗಳು, ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು.

Post Pregnancy Diet: ಮೊದಲ ಹೆರಿಗೆಯ ಭಯವೇಕೆ?; ಬಾಣಂತಿಯರ ಡಯಟ್ ಹೇಗಿರಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on:Sep 23, 2021 | 4:31 PM

Share

ಗರ್ಭಿಣಿಯರು ತಮ್ಮ ಆರೋಗ್ಯ, ಆಹಾರದ ಬಗ್ಗೆ ಎಷ್ಟು ಎಚ್ಚರ ವಹಿಸಬೇಕೋ ಬಾಣಂತಿಯರು ಕೂಡ ಅಷ್ಟೇ ಎಚ್ಚರಿಕೆಯಿಂದ ಇರಬೇಕು. ತಾಯ್ತನವೆಂಬುದು ಹೆಣ್ಣಿನ ಜೀವನದಲ್ಲಿ ಮುಖ್ಯವಾದ ಘಟ್ಟ. ತಮ್ಮ ತಾಯ್ತನದ ಖುಷಿಯನ್ನು ಅನುಭವಿಸುವ ಮಹಿಳೆಯರು ಅಷ್ಟೇ ಎಚ್ಚರಿಕೆ ವಹಿಸಬೇಕಾದುದು ಕೂಡ ಅಗತ್ಯ. ತಾಯಿ ಆರೋಗ್ಯವಾಗಿದ್ದರೆ ಮಗು ಕೂಡ ಆರೋಗ್ಯವಾಗಿರುತ್ತದೆ. ಮೊದಲ ಡೆಲಿವರಿಯಾದಾಗ ಮಹಿಳೆಯರಿಗೆ ಯಾವ ಆಹಾರವನ್ನು ತಿನ್ನಬೇಕು, ಯಾವ ರೀತಿಯ ವ್ಯಾಯಾಮಗಳನ್ನು ಮಾಡಬೇಕೆಂಬ ಬಗ್ಗೆ ಅರಿವು ಇರುವುದಿಲ್ಲ. ಆಯುರ್ವೇದ ತಜ್ಞರು ಹೇಳಿರುವ ಪ್ರಕಾರ ಬಾಣಂತಿಯರು ತುಪ್ಪ, ಹಾಲು, ಅನ್ನ, ತರಕಾರಿಗಳು, ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು.

ಬಾಣಂತಿಯರು ವಿಶ್ರಾಂತಿ ಪಡೆಯುವುದು, ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು, ವ್ಯಾಯಾಮ ಮಾಡುವುದು ಬಹಳ ಮುಖ್ಯ. ಆದರೆ, ಮಗು ಹುಟ್ಟಿದಾಗ ಅದರ ಬಗ್ಗೆಯೇ ಪೂರ್ತಿ ಗಮನ ಕೊಡಬೇಕಾದ ಅನಿವಾರ್ಯತೆ ಇರುವುದರಿಂದ ತಾಯಿಗೆ ವಿಶ್ರಾಂತಿ ಪಡೆಯಲು ಕಷ್ಟ. ಆದರೂ ತಾಯಿ ನಿದ್ರೆ, ಸರಿಯಾದ ಸಮಯಕ್ಕೆ ಊಟ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸುವುದನ್ನು ಮರೆಯಬಾರದು. ಹಾಗೇ, ಬಿಸಿ ಬಿಸಿಯಾದ ಊಟವನ್ನೇ ಮಾಡಬೇಕು. ಫ್ರಿಜ್​ನಲ್ಲಿಟ್ಟ, ಹಿಂದಿನ ದಿನದ ಆಹಾರವನ್ನು ಸೇವಿಸದೇ ಇರುವುದು ಉತ್ತಮ.

ಬಾಣಂತಿಯರು ಕನಿಷ್ಠ 3ರಿಂದ 4 ಲೀಟರ್ ನೀರು ಕುಡಿಯಬೇಕು. ನೀರು ಕಡಿಮೆ ಕುಡಿದರೆ ಮಲ ವಿಸರ್ಜನೆ ಕಷ್ಟವಾಗುತ್ತದೆ. ಅಲ್ಲದೆ, ನೀರು ಕುಡಿಯುವುದರಿಂದ ಎದೆ ಹಾಲು ಹೆಚ್ಚಾಗುತ್ತದೆ. ಹಾಲನ್ನು ಕೂಡ ಹೆಚ್ಚಾಗಿ ಸೇವಿಸಬೇಕು. ದಿನಕ್ಕೆ ಒಂದಾದರೂ ಹಣ್ಣು ಸೇವಿಸಿ. ದ್ರಾಕ್ಷಿ, ಬಾದಾಮಿ, ಖರ್ಜೂರದಂತಹ ಒಣ ಹಣ್ಣುಗಳನ್ನು ತಿನ್ನಬಹುದು. ಹಸಿರು ತರಕಾರಿಗಳು, ಸೊಪ್ಪುಗಳು ಬಾಣಂತಿಯರಿಗೆ ಬಹಳ ಉತ್ತಮವಾದ ಪಥ್ಯವಾಗಿದೆ.

ಬಾಣಂತಿಯರು ಆಲ್ಕೋಹಾಲ್ ಸೇವನೆ ಮಾಡಲೇಬಾರದು. ತಾಯಿ ಸೇವಿಸುವ ಆಹಾರವೇ ಎದೆ ಹಾಲಿನ ರೂಪದಲ್ಲಿ ಮಗುವಿನ ಹೊಟ್ಟೆ ಸೇರುವುದರಿಂದ ಉತ್ತಮ ಆಹಾರವನ್ನು ಆಯ್ಕೆ ಮಾಡಿಕೊಂಡು ಸೇವಿಸಿ. ಸಿಗರೇಟ್, ಆಲ್ಕೋಹಾಲ್​ನಂತಹ ದುಶ್ಚಟಗಳಿಂದ ದೂರ ಇರಿ.

ಗರ್ಭಿಣಿಯರು ಆಲ್ಕೋಹಾಲ್ ಸೇವಿಸಿದರೆ ಅದರಲ್ಲಿರುವ ನಂಜು ಅಥವಾ ವಿಷಕಾರಿ ಅಂಶ ಭ್ರೂಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗರ್ಭವತಿ ತಾಯಿಯ ಮೇಲೆ ಆಲ್ಕೋಹಾಲ್ ಸೇವನೆ ಹಸಿವು ಕಡಿಮೆ ಮಾಡಿ ಅಪೌಷ್ಟಿಕತೆ ಹೆಚ್ಚಿಸುತ್ತದೆ. ಕಾಕ್ಟೈಲ್ ಗಳಲ್ಲಿ ಅಥವಾ ಇತರ ಆಹಾರ ಪದಾರ್ಥಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕೂಡ ಆಲ್ಕೋಹಾಲ್ ಸೇವಿಸಬಾರದು.

ಹಣ್ಣುಗಳನ್ನು ತಿನ್ನುವಾಗ ಸ್ವಚ್ಛವಾಗಿ ತೊಳೆಯಲು ಮರೆಯದಿರಿ. ಇದರಿಂದ ಸೋಂಕು ಹರಡುವುದನ್ನು ತಡೆಯಬಹುದು. ಹಸಿ ತರಕಾರಿಗಳ ಬದಲು ಬೇಯಿಸಿದ ಬಿಸಿ ತರಕಾರಿಗಳನ್ನು ತಿನ್ನುವುದು ಕೂಡ ಒಳ್ಳೆಯದು. ಬಾಳೆಹಣ್ಣು, ಕಿತ್ತಳೆ, ಮೂಸಂಬಿ, ಕಲ್ಲಂಗಡಿ ಹಣ್ಣನ್ನು ಹೆಚ್ಚು ಸೇವಿಸಿ. ಕಾಫಿ, ಟೀ, ಶಕ್ತಿವರ್ಧಕ ಪಾನೀಯಗಳು, ಪೆಪ್ಸಿ, ಕೋಕಾ ಕೋಲಾದಂತಹ ಪಾನೀಯಗಳನ್ನು ಸೇವಿಸದಿರುವುದು ಒಳಿತು.

ಇದನ್ನೂ ಓದಿ: Health Tips: ಗರ್ಭಿಣಿಯರು ಆರೋಗ್ಯ ಸುಧಾರಣೆಗೆ ಸೇವಿಸಬೇಕಾದ ಪೋಷಕಾಂಶಗಳು

Health Tips: ಸೂರ್ಯ ನಮಸ್ಕಾರದ ಜತೆಗೆ ಈ 5 ವ್ಯಾಯಾಮ; ಆರೋಗ್ಯಯುತ ಜೀವನಕ್ಕಾಗಿ ಈ ಅಭ್ಯಾಸ ಮುಂದುವರಿಸಿ

(Health Tips Post pregnancy diet Nutrition tips for new mothers as per Ayurveda what to Eat after Pregnancy)

Published On - 4:26 pm, Thu, 23 September 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ