Health Tips: ಆರೋಗ್ಯಕರ ಓಟ್ಸ್ ಆರೇಂಜ್ ಪುಡಿಂಗ್ ಒಮ್ಮೆ ಟ್ರೈ ಮಾಡಿ ನೋಡಿ

| Updated By: ಅಕ್ಷತಾ ವರ್ಕಾಡಿ

Updated on: Oct 30, 2022 | 12:18 PM

ಇಲ್ಲಿದೆ ಓಟ್ಸ್ ಆರೇಂಜ್ ಪುಡಿಂಗ್ ರೆಸಿಪಿ. ಸಾಮಾನ್ಯವಾಗಿ ಓಟ್ಸ್ ಬೆರೆಸಿದ ಸಾಕಷ್ಟು ಉಪಹಾರಗಳನ್ನು ನೀವು ತಿಂದಿರುತ್ತೀರಿ. ಆದರೆ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ.

Health Tips: ಆರೋಗ್ಯಕರ ಓಟ್ಸ್ ಆರೇಂಜ್ ಪುಡಿಂಗ್ ಒಮ್ಮೆ ಟ್ರೈ ಮಾಡಿ ನೋಡಿ
Health Tips
Follow us on

ಬೆಳಗಿನ ಉಪಹಾರ ತಯಾರಿಸಲು ಸಾಕಷ್ಟು ಸಮಯ ತಗಲುತ್ತಿದ್ದೇಯೇ? ಒತ್ತಡದ ಜೀವನದ ಮಧ್ಯೆ ಯಾವತ್ತೂ ಬೆಳಗಿನ ತಿಂಡಿಯನ್ನು ಸ್ಕಿಪ್ ಮಾಡಲು ಹೋಗದಿರಿ ಇಲ್ಲಿದೆ ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದಾದ ಆರೋಗ್ಯಕರ ಉಪಹಾರ.

ನಿಮ್ಮ ದಿನವನ್ನು ಪ್ರಾರಂಭಿಸಲು ಆರೋಗ್ಯಕರ ಪಾಕವಿಧಾನವನ್ನು ಹುಡುಕುತ್ತಿದ್ದರೆ, ಇಲ್ಲಿದೆ ಓಟ್ಸ್ ಆರೇಂಜ್ ಪುಡಿಂಗ್. ಸಾಮಾನ್ಯವಾಗಿ ಓಟ್ಸ್ ಬೆರೆಸಿದ ಸಾಕಷ್ಟು ಉಪಹಾರಗಳನ್ನು ನೀವು ತಿಂದಿರುತ್ತೀರಿ. ಆದರೆ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ. ಓಟ್ಸ್, ಕಿತ್ತಳೆ ರಸ, ದಾಳಿಂಬೆ, ದ್ರಾಕ್ಷಿ, ಗೋಡಂಬಿ, ಖರ್ಜೂರ ಮುಂತಾದ ಪೌಷ್ಟಿಕಾಂಶಗಳನ್ನು ಹೊಂದಿರುವ ಆರೋಗ್ಯಕರವಾದ ಉಪಹಾರವಾಗಿದೆ.

ಇದು ಕೇವಲ ರುಚಿಕರ ಮಾತ್ರವಲ್ಲದೇ ಆರೋಗ್ಯವನ್ನು ಸಮೃದ್ಧಗೊಳಿಸುವ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ಗಳಿಂದ ತುಂಬಿರುತ್ತದೆ. ಆದ್ದರಿಂದ, ನೀವು ಸಹ ಆರೋಗ್ಯಕರವಾಗಿ ತಿನ್ನಲು ಯೋಜಿಸುತ್ತಿದ್ದರೆ, ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:

  • ಓಟ್ಸ್ -1/2 ಕಪ್
  • ಕಿತ್ತಳೆ ರಸ – 3/4 ಕಪ್
  • ದಾಳಿಂಬೆ ಬೀಜಗಳು – 2 ಟೇಬಲ್ ಸ್ಪೂನ್
  • ಒಣದ್ರಾಕ್ಷಿ – 2 ಟೀ ಚಮಚ
  • ಸಕ್ಕರೆ – 1ಟೇಬಲ್ ಸ್ಪೂನ್
  • ನೀರು – 1/2 ಕಪ್

ಮಾಡುವ ವಿಧಾನ:

  • ಒಂದು ಪಾತ್ರೆಯಲ್ಲಿ ಓಟ್ಸ್ ಅನ್ನು ಬೇಯಿಸಿ.
  • ಅದಕ್ಕೆ 1/2 ಕಪ್ ನೀರು ಮತ್ತು ಕಿತ್ತಳೆ ರಸವನ್ನು ಸೇರಿಸಿ.
  • 3-4 ನಿಮಿಷಗಳ ಕಾಲ ಬೇಯಿಸಿ.
  • ಈಗ ಸ್ಟವ್ ಆಫ್ ಮಾಡಿ ದಾಳಿಂಬೆ ಕಾಳು, ಕಿತ್ತಳೆ ಸಿಪ್ಪೆ, ಒಣದ್ರಾಕ್ಷಿ, ಸ್ವಲ್ಪ ಸಕ್ಕರೆ ಹಾಕಿ ಚೆನ್ನಾಗಿ ಕಲಸಿ.
  • ಅಷ್ಟೇ ರುಚಿಕರವಾದ ಆರೋಗ್ಯಕರವಾದ ಆರೆಂಜ್ ಪುಡ್ಡಿಂಗ್ ಸವಿಯಲು ಸಿದ್ದ.
  • ಇದನ್ನು ಇನ್ನೂ ಹೆಚ್ಚು ಆರೋಗ್ಯಕರವಾಗಿಸಲು, ನೀವು ಸಕ್ಕರೆ ಬದಲಾಗಿ ಜೇನುತುಪ್ಪ ಅಥವಾ ಬೆಲ್ಲ ಅಥವಾ ಮೇಪಲ್ ಸಿರಪ್‌ಗಳನ್ನು ಸೇರಿಸಬಹುದು.
  • ಜೊತೆಗೆ ಆಕರ್ಷಕವಾಗಿ ಕಾಣಲು ಓಟ್ಸ್ ಆರೇಂಜ್ ಪುಡಿಂಗ್ ಮೇಲೆ ಒಂದಿಷ್ಟು ದಾಳಿಂಬೆ ಕಾಳು, ಒಣದ್ರಾಕ್ಷಿಗಳಿಂದ ಅಲಂಕರಿಸಿ.

ಇದನ್ನು ಓದಿ: ಕೇವಲ 5 ನಿಮಿಷದಲ್ಲಿ ತಯಾರಿಸಬಹುದು ಓಟ್ಸ್ ಪೀನಟ್ ಬಟರ್ ಸ್ಮೂದಿ

ಕಿತ್ತಳೆ ಹಣ್ಣಿನಲ್ಲಿ ಅತ್ಯಧಿಕ ಫೈಬರನ್ನು ಹೊಂದಿದ್ದು, ಇದು ತೂಕ ಇಳಿಸಲು ಮಾತ್ರವಲ್ಲ, ಜೀರ್ಣಕ್ರೀಯೆಯನ್ನು ಕೂಡ ಸುಧಾರಿಸುತ್ತದೆ. ಜೊತೆಗೆ ಬೇಗನೆ ಹಸಿವಾಗುವಾಗದಂತೆ ತಡೆಯುತ್ತದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: