AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಈ ಯೋಗಾಸನಗಳನ್ನು ಮಾಡಿ, ಥೈರಾಯ್ಡ್ ಸಮಸ್ಯೆಯಿಂದ ದೂರವಿರಿ

ಭಾರತದಲ್ಲಿ ಪ್ರತಿ ಹತ್ತರಲ್ಲಿ ಒಬ್ಬರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಹಾರ ಸೇವನೆಯಲ್ಲಿ ಅಯೋಡಿನ್ ಕೊರತೆ, ಕಲುಷಿತ ನೀರು, ಕೀಟನಾಶಕಗಳು, ಕಳಪೆ ಆಹಾರ ಪದ್ಧತಿ, ಒತ್ತಡ ಮತ್ತು ಉದ್ವೇಗ ಇವುಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

Health Tips: ಈ ಯೋಗಾಸನಗಳನ್ನು ಮಾಡಿ, ಥೈರಾಯ್ಡ್ ಸಮಸ್ಯೆಯಿಂದ ದೂರವಿರಿ
Health Tips
TV9 Web
| Updated By: ಅಕ್ಷತಾ ವರ್ಕಾಡಿ|

Updated on: Oct 30, 2022 | 10:44 AM

Share

ಯೋಗಾಸನಗಳು  ಥೈರಾಯ್ಡ್ ಸಮಸ್ಯೆಗಳನ್ನು ಗುಣಪಡಿಸುವುದು ಮಾತ್ರವಲ್ಲದೆ, ನಿಮ್ಮ ಬೆನ್ನು ಮೂಳೆಗೆ ಶಕ್ತಿಯನ್ನು ನೀಡುತ್ತದೆ. ಥೈರಾಯ್ಡ್ ಗ್ರಂಥಿಗಳನ್ನು ಸಕ್ರಿಯಗೊಳಿಸುತ್ತವೆ ಮತ್ತು ಮೆದುಳಿಗೆ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತವೆ, ಹೀಗಾಗಿ ನಿಮ್ಮನ್ನು ಮಾನಸಿಕವಾಗಿ ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ ಎಂದು ಯೋಗ ಗುರು ಕಾಮಿನಿ ಬೋಬ್ಡೆ ಹೇಳುತ್ತಾರೆ.

ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯಿಡ್ ಆಮ್ಲ ರೋಗ ಲಕ್ಷಣಗಳು ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಪ್ರತಿ ಹತ್ತರಲ್ಲಿ ಒಬ್ಬರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಹಾರ ಸೇವನೆಯಲ್ಲಿ ಅಯೋಡಿನ್ ಕೊರತೆ, ಕಲುಷಿತ ನೀರು, ಕೀಟನಾಶಕಗಳು, ಕಳಪೆ ಆಹಾರ ಪದ್ಧತಿ, ಒತ್ತಡ ಮತ್ತು ಉದ್ವೇಗ ಇವುಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ ಪ್ರತಿ ದಿನ ಯೋಗ ಹಾಗು ಸರಿಯಾದ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳುವುದರಿಂದ ಈ ಸಮಸ್ಯೆಯ ಮಟ್ಟವನ್ನು ನಿರ್ವಹಿಸಬಹುದಾದ ಮಟ್ಟಕ್ಕೆ ತರಬಹುದು.

ಕತ್ತಿನ ಭಾಗಲ್ಲಿ ಇರುವ ಚಿಟ್ಟೆಯ ಆಕಾರದ ಥೈರಾಯ್ಡ್ ಗ್ರಂಥಿಗಳು T3 ಮತ್ತು T4 ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಈ ಹಾರ್ಮೋನುಗಳು ನಮ್ಮ ದೇಹದಲ್ಲಿನ ಸಂತಾನೋತ್ಪತ್ತಿ, ನರಗಳ ಬೆಳವಣಿಗೆ ಮತ್ತು ಇತರ ಕಾರ್ಯ ಚಟುವಟಿಕೆ ಸಹಕಾರಿಯಾಗಿದೆ. ಆದರೆ ಹೈಪೋಥೈರಾಯ್ಡಿಸಮ್ ಸಮಸ್ಯೆಯಿಂದ ಬಳಲುತ್ತಿದ್ದವರಲ್ಲಿ ಈ ಹಾರ್ಮೋನ್ ಕಡಿಮೆ ಉತ್ಪಾದನೆಯಾಗುತ್ತದೆ, ಇದು ಬೊಜ್ಜು, ಹೃದಯ ಸಮಸ್ಯೆಗಳು ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ. ಹೈಪರ್ ಥೈರಾಯ್ಡಿಸಮ್ನಲ್ಲಿ, ಈ ಹಾರ್ಮೋನ್ ಅಧಿಕವಾಗಿ ಬಿಡುಗಡೆಯಾಗುತ್ತದೆ, ಇದರ ಪರಿಣಾಮವಾಗಿ ಹೈಪರ್ಆಕ್ಟಿವಿಟಿ, ಕಿರಿಕಿರಿ, ತೂಕ ನಷ್ಟ, ಚರ್ಮ ಮತ್ತು ಸಮಸ್ಯೆಗಳಂತಹ ಲಕ್ಷಣಗಳು ಕಂಡುಬರುತ್ತದೆ.

ಯೋಗದಲ್ಲಿ, ಥೈರಾಯ್ಡ್ ಗ್ರಂಥಿಯನ್ನು ಸಕ್ರಿಯಗೊಳಿಸಲು ಮತ್ತು ನಿಯಂತ್ರಿಸಲು ಸಹಾಯ ಮಾಡುವ ಮಹತ್ವದ ಅಭ್ಯಾಸಗಳಿವೆ. ಇದಕ್ಕಿಂತ ಹೆಚ್ಚಾಗಿ, ಈ ಆಸನಗಳು ಥೈರಾಯ್ಡ್ ಸಮಸ್ಯೆಗಳನ್ನು ಗುಣಪಡಿಸುವುದು ಮಾತ್ರವಲ್ಲದೆ ನಿಮ್ಮನ್ನು ಮಾನಸಿಕವಾಗಿ ಯೌವನದಿಂದಿರುವಂತೆ ಮಾಡುತ್ತದೆ. ಥೈರಾಯ್ಡ್ ಗ್ರಂಥಿಗಳನ್ನು ಸಕ್ರಿಯಗೊಳಿಸುತ್ತವೆ ಮತ್ತು ಮೆದುಳಿಗೆ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತವೆ, ಹೀಗಾಗಿ ನಿಮ್ಮನ್ನು ವಯೋ ಸಹಜ ಕಾಯಿಲೆಯಿಂದ ದೂರಮಾಡಿ, ಚುರಿಕಿನಿಂದಿರುವಂತೆ ಮಾಡುತ್ತದೆ ಎಂದು ಸ್ವಾಮಿ ಸತ್ಯಾನಂದ ಸರಸ್ವತಿ ಹೇಳುತ್ತಾರೆ.

ಪದ್ಮಾಸನ ಅಥವಾ ವಜ್ರಾಸನದಂತಹ ಯಾವುದೇ ಧ್ಯಾನ ಭಂಗಿಯಲ್ಲಿ ಬೆನ್ನುಮೂಳೆಯನ್ನು ನೇರವಾಗಿ ಮತ್ತು ದೇಹವನ್ನು ಸಡಿಲಿಸಿ ಕುಳಿತುಕೊಳ್ಳಿ. ನಿಮ್ಮ ಕಣ್ಣುಗಳನ್ನು ನಿಧಾನವಾಗಿ ಮುಚ್ಚಿ. ಕನಿಷ್ಠ 50 ಸುತ್ತುಗಳನ್ನು ಮಾಡಿ, ನಂತರ ನಿಲ್ಲಿಸಿ ಮತ್ತು ನಿಮ್ಮ ಉಸಿರಾಟವನ್ನು ಸ್ಥಿರಗೊಳಿಸಲು ಬಿಡಿ. ನಂತರ ನಿಮ್ಮ ಅಂಗೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ, ಮೊಣಕೈಗಳನ್ನು ನೇರವಾಗಿ ಇರಿಸಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಧಾನವಾಗಿ ಉಸಿರು ಬಿಡಿ.

ನಿಮ್ಮ ಪ್ರತಿದಿನದ ಯೋಗಾಭ್ಯಾಸದಲ್ಲಿ ಭ್ರಾಮರಿ ಪ್ರಾಣಾಯಾಮದೊಂದಿಗೆ ಕೊನೆಗೊಳಿಸಿ. ಇದರಲ್ಲಿ, ನೀವು ನಿಮ್ಮ ಕಿವಿಗಳನ್ನು ಮುಚ್ಚಿ ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ಉಸಿರು ಬಿಡುವಾಗ ಓಂ ಮಂತ್ರವನ್ನು ಪಠಿಸುತ್ತಿರಿ ಮತ್ತು ಸಾಧ್ಯವಾದಷ್ಟು ಕಾಲ ಪಠಿಸಿ.

ಇದನ್ನು ಓದಿ: ಕೇವಲ 5 ನಿಮಿಷದಲ್ಲಿ ತಯಾರಿಸಬಹುದು ಓಟ್ಸ್ ಪೀನಟ್ ಬಟರ್ ಸ್ಮೂದಿ

ನಿಮ್ಮ ದೇಹದಲ್ಲಿ ಥೈರಾಯ್ಡ್ ಗ್ರಂಥಿಗಳು ತಯಾರಿಸಲು T3 ಮತ್ತು T4 ಹಾರ್ಮೋನುಗಳಿಗೆ ಆಹಾರದಲ್ಲಿ ಅಯೋಡಿನ್ ಅತ್ಯಂತ ಅಗತ್ಯವಾಗಿದೆ. ಆದ್ದರಿಂದ, ನೇರಳೆ ಹಣ್ಣು, ಅಯೋಡಿನ್ ಸಮೃದ್ಧವಾಗಿರುವ ಆಹಾರವನ್ನು ಆದಷ್ಟು ಸೇವಿಸಿ. ಒಣ ದ್ರಾಕ್ಷಿ, ಖರ್ಜೂರ ಮುಂತಾದವುಗಳನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಸೇವಿಸಿ. ಸಂಸ್ಕರಿಸಿದ ಸಕ್ಕರೆ, ಕಾರ್ಬೋಹೈಡ್ರೇಟ್‌ಗಳು, ಸೋಡಾಯುಕ್ತ ಪಾನೀಯಗಳು ಮುಂತಾದವುಗಳನ್ನು ತ್ಯಜಿಸಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ