Health Tips: ಕೇವಲ 5 ನಿಮಿಷದಲ್ಲಿ ತಯಾರಿಸಬಹುದು ಓಟ್ಸ್ ಪೀನಟ್ ಬಟರ್ ಸ್ಮೂದಿ

ಇದು ಅತ್ಯಂತ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಹಣ್ಣುಗಳಿಂದ ಆಕರ್ಷಕವಾಗಿ ಅಲಂಕರಿಸುವುದರಿಂದ ಮಕ್ಕಳಿಗೂ ಇಷ್ಟವಾಗುತ್ತದೆ.

Health Tips: ಕೇವಲ 5 ನಿಮಿಷದಲ್ಲಿ ತಯಾರಿಸಬಹುದು ಓಟ್ಸ್ ಪೀನಟ್ ಬಟರ್ ಸ್ಮೂದಿ
Health Tips
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Oct 30, 2022 | 10:17 AM

ಓಟ್ಸ್ ಪೀನಟ್ ಬಟರ್ ಸ್ಮೂದಿ ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಪೌಷ್ಟಿಕ ಪಾನೀಯಗಳಲ್ಲಿ ಒಂದಾಗಿದೆ.

ಸಾಮಾನ್ಯವಾಗಿ ಜನರು ಸ್ಮೂದಿಗಳನ್ನು ತಮ್ಮ ಬಿಡುವಿನ ಸಮಯದಲ್ಲಿ ತಿನ್ನುವ ಲಘು ಉಪಹಾರವಾಗಿ ಪರಿಗಣಿಸಿದ್ದಾರೆ. ಹೆಚ್ಚಾಗಿ ತಮ್ಮ ತೂಕ ಕಡಿಮೆ ಮಾಡಲು ಬಯಸುವವರಿಗೆ ಇದು ಉಪಯುಕ್ತವಾಗಿದೆ. ನೀವು ನಿಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನಹರಿಸಿದ್ದರೆ, ಇದರ ಜೊತೆಗೆ ಪ್ರೋಟೀನ್ ಪೌಡರ್ ಅನ್ನು ಕೂಡ ಸೇರಿಸಬಹುದು. ಈ ಸ್ಮೂದಿ ಇನಷ್ಟು ರುಚಿ ಹಾಗು ಪೌಷ್ಟಿಕಾಂಶಕ್ಕಾಗಿ ಪುಡಿಮಾಡಿದ ಕಡಲೆಕಾಯಿಯನ್ನು ಸೇರಿಸಬಹುದು.

ಬೇಕಾಗುವ ಪದಾರ್ಥಗಳು:

  • ಪೀನಟ್ ಬಟರ್– 2ಚಮಚ
  • ಬಾಳೆಹಣ್ಣು– 1
  • ಚಿಯಾ(ಕಾಮ ಕಸ್ತೂರಿ)- 1 ಚಮಚ
  • ಓಟ್ಸ್– 1/2 ಕಪ್
  • ಸೋಯ ಮಿಲ್ಕ್– 1/2 ಕಪ್
  • ಕಡಲೆ ಬೀಜ– 1/2 ಕಪ್

ಮಾಡುವ ವಿಧಾನ :

  • ಓಟ್ಸ್ ಮತ್ತು ಪೀನಟ್ ಬಟರ್ ಅನ್ನು ಮಿಕ್ಸಿ ಜಾರಿಗೆ ಹಾಕಿ.
  • ನಂತರ ಅದಕ್ಕೆ ಸೋಯಾ ಹಾಲು ಸೇರಿಸಿ.
  • ಬಾಳೆಹಣ್ಣು ಮತ್ತು ಚಿಯಾ ಬೀಜಗಳನ್ನು ಒಟ್ಟಿಗೆ ಸೇರಿಸಿ.
  • ನಂತರ ನಯವಾದ ಪೇಸ್ಟ್ ಆಗುವ ವರೆಗೆ ರುಬ್ಬಿ.
  • ನಂತರ ಗಾಜಿನ ಗ್ಲಾಸಿನೊಳಗೆ ಸುರಿಯಿರಿ.
  • ಪುಡಿ ಮಾಡಿದ ಕಡಲೆ ಬೀಜ,ಬೆರ್ರಿ ಹಣ್ಣುಗಳಿಂದ ಅಲಂಕರಿಸಿ.
  • ಈಗ ನಿಮ್ಮ ಓಟ್ಸ್ ಪೀನಟ್ ಬಟರ್ ಸ್ಮೂದಿ ಸರ್ವ್ ಮಾಡಲು ರೆಡಿ.

ಇದನ್ನು ಓದಿ: ಸುಲಭವಾಗಿ ತಯಾರಿಸಿ ಆವಕಾಡೊ ಬನಾನಾ ಸ್ಮೂಥಿ

ಇದು ಅತ್ಯಂತ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಹಣ್ಣುಗಳಿಂದ ಆಕರ್ಷಕವಾಗಿ ಅಲಂಕರಿಸುವುದರಿಂದ ಮಕ್ಕಳಿಗೂ ಇಷ್ಟವಾಗುತ್ತದೆ. ಮಕ್ಕಳ ದೇಹದಲ್ಲಿನ ಪೌಷ್ಟಿಕಾಂಶ ಹೆಚ್ಚಾಗಲು ಇದು ಸಹಾಯಕವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 10:07 am, Sun, 30 October 22