ಯಾವ ರೀತಿಯ ಎದೆನೋವು ಅಪಾಯಕಾರಿ? ಹೃದಯದ ತೊಂದರೆಯೆಂದು ತಿಳಿಯೋದು ಹೇಗೆ?
ಎದೆನೋವು ಬಂದಾಗ ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ. ತೀವ್ರವಾದ ಅಥವಾ ಹಿಸುಕಿದಂತಹ ಎದೆನೋವು ಉಂಟಾದರೆ ಅದು ಹೃದಯದ ಸಮಸ್ಯೆಗಳ ಸೂಚಕವಾಗಿರಬಹುದು. ನಿಮ್ಮ ಎದೆಯ ಮೇಲೆ ಆನೆ ಕುಳಿತಂತೆ ಭಾಸವಾದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ.
ಎದೆ ನೋವು ಪ್ರತಿಯೊಬ್ಬರಿಗೂ ಆತಂಕ ಮೂಡಿಸುವುದು ಸಹಜ. ಆದರೆ, ಎದೆನೋವೆಲ್ಲವೂ ಹೃದಯದ ಸಮಸ್ಯೆಯ ಅಥವಾ ಹೃದಯಾಘಾತದ (Heart Attack) ಲಕ್ಷಣವೇ ಆಗಿರಬೇಕೆಂದೇನೂ ಇಲ್ಲ. ಇದು ಕೇವಲ ಅಜೀರ್ಣ ಅಥವಾ ಸ್ನಾಯು ಸೆಳೆತದಿಂದ ಆಗುವ ನೋವು ಕೂಡ ಆಗಿರಬಹುದು. ಹಾಗಾದರೆ ಯಾವ ರೀತಿಯ ಎದೆನೋವಿಗೆ ತಲೆ ಕೆಡಿಸಿಕೊಳ್ಳಬೇಕು? ಎದೆನೋವಾ ಅಥವಾ ಹೃದಯದ ನೋವಾ (Heart Pain) ಎಂದು ಕಂಡುಹಿಡಿಯುವುದು ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಎದೆ ನೋವಿನ ಗಂಭೀರ ಚಿಹ್ನೆಗಳು ಯಾವುವು?:
ಎಲ್ಲಾ ಎದೆ ನೋವು ಒಂದೇ ರೀತಿ ಇರುವುದಿಲ್ಲ. ತೀವ್ರವಾದ ಅಥವಾ ಹಿಸುಕಿದಂತಹ ಎದೆನೋವು ಸಾಮಾನ್ಯವಾಗಿ ಹೃದಯ ಸಮಸ್ಯೆಗಳೊಂದಿಗೆ ಸಂಬಂಧಿಸಿದೆ. ನಿಮ್ಮ ಎದೆಯ ಮೇಲೆ ಆನೆ ಕುಳಿತಂತೆ ಭಾಸವಾದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಹೃದಯದ ನೋವು ನಿಮ್ಮ ತೋಳುಗಳು, ಕುತ್ತಿಗೆ, ದವಡೆ, ಅಥವಾ ಬೆನ್ನಿಗೆ ಕೂಡ ಹರಡಬಹುದು. ನಿಮ್ಮ ಸಮಸ್ಯೆಯು ನಿಮ್ಮ ಎದೆಯನ್ನು ಮೀರಿ ಅದರಲ್ಲೂ ವಿಶೇಷವಾಗಿ ಎಡಭಾಗಕ್ಕೆ ಚಲಿಸಿದರೆ ಅದು ಹೃದಯದ ತೊಂದರೆಯ ಸಿಗ್ನಲ್ ಆಗಿರಬಹುದು.
ಬೇರೆ ಯಾವ ಕಾರಣಕ್ಕೆ ಎದೆನೋವು ಬರುತ್ತದೆ?:
ಎದೆ ನೋವಿನ ಜೊತೆಗೆ ನಿಮಗೆ ಉಸಿರಾಟಕ್ಕೆ ಕಷ್ಟವಾಗಿದ್ದರೆ ಅದು ನಿಮ್ಮ ಹೃದಯದ ಸಮಸ್ಯೆಯನ್ನು ಸೂಚಿಸುತ್ತದೆ. ಉಸಿರಾಟದ ತೊಂದರೆಯು ನೀವು ಕೂಡಲೇ ಎಚ್ಚರ ವಹಿಸಬೇಕಾದ ಸಮಸ್ಯೆಯಾಗಿದೆ.
ಇದನ್ನೂ ಓದಿ: ಇತ್ತೀಚೆಗೆ ಯುವಕರಿಗೆ ಹೆಚ್ಚು ಹೃದಯಾಘಾತ; ಇದಕ್ಕೆ ಕಾರಣ ಏನು? ವೈದ್ಯರು ಹೇಳಿದ್ದಿಷ್ಟು
ಹೃದಯಾಘಾತದ ಲಕ್ಷಣಗಳನ್ನು ಗುರುತಿಸುವುದು ಹೇಗೆ?:
ಹೃದಯಾಘಾತದ ರೋಗಲಕ್ಷಣಗಳ ಪೈಕಿ ಎದೆ ನೋವು, ಉಸಿರಾಟದ ತೊಂದರೆ ಮತ್ತು ಬೆವರುವುದನ್ನು ನಿರ್ಲಕ್ಷ್ಯ ಮಾಡಲೇಬೇಡಿ. ನೀವು ಇದನ್ನು ಏಕಕಾಲದಲ್ಲಿ ಅನುಭವಿಸಿದರೆ ತಕ್ಷಣ ಸಹಾಯಕ್ಕಾಗಿ ಆಸ್ಪತ್ರೆಗೆ ಕರೆ ಮಾಡಿ. ಹಾಗೇ, ವಾಕರಿಕೆ ಅಥವಾ ತಲೆತಿರುಗುವಿಕೆ, ವಿಶೇಷವಾಗಿ ಎದೆಯ ಸಮಸ್ಯೆ ಉಂಟಾದರೆ ಅದು ಹೃದಯದ ಸಮಸ್ಯೆಯನ್ನು ಸೂಚಿಸುತ್ತದೆ. ನಿಮ್ಮ ದೇಹ ನೀಡುವ ಸಂಕೇತಗಳಿಗೆ ಗಮನ ಕೊಡಿ.
ಕಾರಣವಿಲ್ಲದೆ ನೀವು ಇದ್ದಕ್ಕಿದ್ದಂತೆ ದಣಿದಿದ್ದರೆ ಅದು ನಿಮ್ಮ ಹೃದಯವು ನಿಮಗೆ ನೀಡುತ್ತಿರುವ ಸೂಚನೆಯಾಗಿರಬಹುದು. ವಿವರಿಸಲಾಗದ ಆಯಾಸ, ವಿಶೇಷವಾಗಿ ಮಹಿಳೆಯರಲ್ಲಿ ಅತಿಯಾದ ಆಯಾಸ ಉಂಟಾದರೆ ವೈದ್ಯರನ್ನು ಭೇಟಿಯಾಗಿ. ಹೃದಯಾಘಾತದ ಸಮಯದಲ್ಲಿ ಪ್ರತಿ ಸೆಕೆಂಡ್ ಕೂಡ ಮುಖ್ಯವಾಗಿರುತ್ತದೆ ಎಂದು ಅರ್ಥಮಾಡಿಕೊಳ್ಳಿ. ನೀವು ಎಷ್ಟು ಬೇಗನೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತೀರೋ ಅಷ್ಟು ನಿಮ್ಮ ಚೇತರಿಕೆಯ ಸಾಧ್ಯತೆಗಳು ಹೆಚ್ಚು.
ಇದನ್ನೂ ಓದಿ: ವಾಯು ಮಾಲಿನ್ಯದಿಂದ ಕ್ಯಾನ್ಸರ್, ಹೃದಯಾಘಾತ ಹೆಚ್ಚಳ; ಏನಿದು ಶಾಕಿಂಗ್ ವಿಷಯ?
ಜೀರ್ಣಕಾರಿ ತೊಂದರೆ: ಆಸಿಡ್ ರಿಫ್ಲಕ್ಸ್ ಮತ್ತು ಅಜೀರ್ಣವು ಹೃದಯದ ನೋವನ್ನು ತರಬಲ್ಲದು. ನಿಮ್ಮ ಸಮಸ್ಯೆ ಬರ್ಪಿಂಗ್, ಆಮ್ಲದ ರುಚಿ ಅಥವಾ ಸುಡುವ ಸಂವೇದನೆಯೊಂದಿಗೆ ಇರುತ್ತದೆಯೇ ಎಂದು ಗಮನಿಸಿ.
ಮಸ್ಕ್ಯುಲೋಸ್ಕೆಲಿಟಲ್ ನೋವು: ಸ್ನಾಯು ಸೆಳೆತ ಅಥವಾ ಪಕ್ಕೆಲುಬಿನ ಉರಿಯೂತವು ಎದೆ ನೋವಿಗೆ ಕಾರಣವಾಗಬಹುದು. ಎದೆಯ ಮೇಲೆ ಒತ್ತಡದಿಂದ ನೋವು ಹೆಚ್ಚಾದರೆ ಅದು ಹೃದಯಕ್ಕೆ ಸಂಬಂಧಿಸಿಲ್ಲ ಎಂದು ಅರ್ಥ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ