AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Updates: ಟೀ ಬ್ಯಾಗ್ ಕ್ಯಾನ್ಸರ್ ಗೆ ಕಾರಣವಾಗಬಹುದು. ಆ ಅಭ್ಯಾಸವನ್ನು ತಪ್ಪಿಸುವುದು ನಿಮಗೆ ಬಿಟ್ಟದ್ದು, ಇದು ತಜ್ಞರ ಎಚ್ಚರಿಕೆ

ಬೆಳಗ್ಗೆ ಎದ್ದಾಗ ಟೀ (ಚಹಾ) ಕುಡಿಯುವುದರಿಂದ ಸಿಗುವ ಅನುಭೂತಿಯೇ ಬೇರೆ. ಕುರ್ಚಿಯಲ್ಲಿ ಕುಳಿತು, ಪೇಪರ್ ಓದುತ್ತಾ ಬಿಸಿ ಬಿಸಿ ಚಹಾ ಹೀರುತ್ತಾ... ಓಹ್ ಎಷ್ಟು ಮಧುರ, ಚೆನ್ನ. ನಿಜ.. ಟೀ ಕುಡಿಯುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳಿವೆ... ಆದರೆ?

Health Updates: ಟೀ ಬ್ಯಾಗ್ ಕ್ಯಾನ್ಸರ್ ಗೆ ಕಾರಣವಾಗಬಹುದು. ಆ ಅಭ್ಯಾಸವನ್ನು ತಪ್ಪಿಸುವುದು ನಿಮಗೆ ಬಿಟ್ಟದ್ದು, ಇದು ತಜ್ಞರ ಎಚ್ಚರಿಕೆ
ಟೀ ಬ್ಯಾಗ್ ಕ್ಯಾನ್ಸರ್ ಗೆ ಕಾರಣವಾಗಬಹುದು. ಆ ಅಭ್ಯಾಸವನ್ನು ತಪ್ಪಿಸುವುದು ನಿಮಗೆ ಬಿಟ್ಟದ್ದು, ಇದು ತಜ್ಞರ ಎಚ್ಚರಿಕೆ
TV9 Web
| Updated By: ಸಾಧು ಶ್ರೀನಾಥ್​|

Updated on: Sep 05, 2022 | 6:15 PM

Share

ಬೆಳಗ್ಗೆ ಎದ್ದಾಗ ಟೀ (ಚಹಾ) ಕುಡಿಯುವುದರಿಂದ ಸಿಗುವ ಅನುಭೂತಿಯೇ ಬೇರೆ. ಕುರ್ಚಿಯಲ್ಲಿ ಕುಳಿತು, ಪೇಪರ್ ಓದುತ್ತಾ ಬಿಸಿ ಬಿಸಿ ಚಹಾ ಹೀರುತ್ತಾ… ಓಹ್ ಎಷ್ಟು ಮಧುರ, ಚೆನ್ನ. ನಿಜ.. ಟೀ ಕುಡಿಯುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳಿವೆ… ಆದರೆ?

ಬೆಳಗ್ಗೆ ಎದ್ದಾಗ ಟೀ (ಚಹಾ -Tea) ಕುಡಿಯುವುದರಿಂದ ಸಿಗುವ ಅನುಭೂತಿಯೇ ಬೇರೆ. ಕುರ್ಚಿಯಲ್ಲಿ ಕುಳಿತು, ಪೇಪರ್ ಓದುತ್ತಾ ಬಿಸಿ ಬಿಸಿ ಚಹಾ ಹೀರುತ್ತಾ… ಓಹ್ ಎಷ್ಟು ಮಧುರ, ಚೆನ್ನ. ನಿಜ.. ಟೀ ಕುಡಿಯುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳಿವೆ… ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ? ಸಾಮಾನ್ಯವಾಗಿ ನಮಗೆ ಬಿಸಿನೀರು ಅಥವಾ ಬಿಸಿ ಹಾಲಿನಲ್ಲಿ ಟೀ ಪುಡಿಯ ಡಿಕಾಕ್ಷನ್ ಹಾಕಿ ಕುಡಿಯುವ ಅಭ್ಯಾಸವಿದೆ. ಆದರೆ ಕೆಲವು ಸಂದರ್ಭಗಳಲ್ಲಿ ನಾವು ಗರಂ ಗರಂ ಚಾಯ್‌ಗಾಗಿ ಟೀ ಬ್ಯಾಗ್‌ಗಳನ್ನು ಅವಲಂಬಿಸಿರುತ್ತೇವೆ. ನಮಗೆ ಸಮಯವಿಲ್ಲದ ಕಾರಣ ಅಥವಾ ಅದು ಬೇಗನೆ ಖಾಲಿಯಾಗುವುದರಿಂದ ತುರ್ತಾಗಿ ನಾವು ಟೀ ಬ್ಯಾಗ್‌ಗಳನ್ನು ಬಳಸುತ್ತೇವೆ.

ಆದರೆ, ಈ ರೀತಿ ಮಾಡುವುದರಿಂದ ಆರೋಗ್ಯಕ್ಕಿಂತ ಹೆಚ್ಚಿನ ಸಮಸ್ಯೆಗಳು ಎದುರಾಗುತ್ತವೆ ಎಂದು ಮಾಂಟ್ರಿಯಲ್‌ನ ಮರ್ಗಿಲ್ ವಿಶ್ವವಿದ್ಯಾಲಯದ ಸಂಶೋಧನಾ ತಂಡದ ಆರೋಗ್ಯ ತಜ್ಞರು (Health Experts) ಎಚ್ಚರಿಸಿದ್ದಾರೆ.

ಅಧ್ಯಯನದ ಪ್ರಕಾರ.. ಪ್ಲಾಸ್ಟಿಕ್ ಟೀ ಬ್ಯಾಗ್ ಹಾನಿಕಾರಕ ಕಣಗಳನ್ನು ಬಿಡುಗಡೆ ಮಾಡುತ್ತದೆ. ಟೀ ಬ್ಯಾಗ್‌ಗಳು ಶತಕೋಟಿ ಸೂಕ್ಷ್ಮ ಮತ್ತು ನ್ಯಾನೊ ಪ್ಲಾಸ್ಟಿಕ್‌ಗಳನ್ನು ಬಿಸಿ ನೀರಿನಲ್ಲಿ ಕರಗಿಸುತ್ತದೆ. ಪೇಪರ್ ಟೀ ಬ್ಯಾಗ್ ನಲ್ಲಿ ಎಪಿಕ್ಲೋರೋಹೈಡ್ರಿನ್ ಎಂಬ ರಾಸಾಯನಿಕ ಇರುತ್ತದೆ. ಇದು ಟೀ ಬ್ಯಾಗ್‌ ಹರಿದು ಹೋಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಟೀ ಬ್ಯಾಗ್‌ಗಳನ್ನು ಡಯಾಕ್ಸಿನ್ ಅಥವಾ ಎಪಿಕ್ಲೋರೋಹೈಡ್ರಿನ್‌ನಿಂದ ಲೇಪಿಸಲಾಗುತ್ತದೆ. ಹಾಗಾಗಿ ಟೀ ಬ್ಯಾಗ್ ಅನ್ನು ಬಿಸಿನೀರಿನಲ್ಲಿ ಅಥವಾ ಬಿಸಿ ಹಾಲಿನಲ್ಲಿ ಮುಳುಗಿಸಿದಾಗ ಕವರ್‌ನಲ್ಲಿರುವ ಕಣಗಳು ಕರಗುತ್ತವೆ. ನಮಗೆ ಗೊತ್ತಿಲ್ಲದೆ ಕುಡಿಯುವುದರಿಂದ ಆರೋಗ್ಯದ ಸಮಸ್ಯೆಯೂ ಉಂಟಾಗುತ್ತದೆ. ಈ ಜೀವಕೋಶಗಳು ಕ್ಯಾನ್ಸರ್ ಗೆ ದಾರಿ ಆಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಅದಕ್ಕಾಗಿಯೇ ಟೀ ಬ್ಯಾಗ್‌ಗಳ ಬದಲಿಗೆ ಒಣ ಅಥವಾ ಸಡಿಲವಾದ ಡಬ್ಬಗಳಲ್ಲಿರುವ ಚಹಾ ಎಲೆಗಳನ್ನು ಬಳಸಲು ತಜ್ಞರು ಸಲಹೆ ನೀಡುತ್ತಾರೆ. ತೀರಾ ತುರ್ತಾಗಿ ಟೀ ಬ್ಯಾಗ್ ಬಳಸಬೇಕಾದರೆ ಬಟ್ಟೆಯಿಂದ ಮಾಡಿದ ಟೀ ಬ್ಯಾಗ್ ಗಳನ್ನೇ ಆಯ್ಕೆ ಮಾಡಿಕೊಳ್ಳಿ ಎನ್ನುತ್ತಾರೆ. ಅದರಿಂದ ಆರೋಗ್ಯ ಪ್ರಯೋಜನವನ್ನೂ ಪಡೆಯಬಹುದು ಎನ್ನುತ್ತಾರೆ. ನಾವು ಮಾಡುವ ಕೆಲವು ಬದಲಾವಣೆಗಳು ನಮ್ಮ ಆರೋಗ್ಯವನ್ನು ಸುಧಾರಿಸಬಹುದು ಎಂದು ತಜ್ಞರು ಹೀಗೆ ವಿವರಿಸುತ್ತಾರೆ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?