AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಬಯಸುವಿರಾ?

ತೂಕ ನಷ್ಟದಲ್ಲಿ ಆಹಾರವು ಒಂದು ಪ್ರಮುಖ ಭಾಗವಾಗಿದೆ. ಪೌಷ್ಟಿಕಾಂಶವುಳ್ಳ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಮಿತವಾಗಿ ಸೇವಿಸಿ. ಆಹಾರ ಪದ್ಧತಿಯ ಹೊರತಾಗಿ, ನೀವು ಅದನ್ನು ತಿನ್ನುವ ವಿಧಾನಕ್ಕೂ ಗಮನ ಕೊಡಬೇಕು. ಮಲಗುವ ಎರಡು ಮೂರು ಗಂಟೆಗಳ ಮೊದಲು ರಾತ್ರಿಯ ಊಟವನ್ನು ಮುಗಿಸಿ. ಅಂತೆಯೇ, ತಿನ್ನುವಾಗ ನಿಧಾನವಾಗಿ ತಿನ್ನಿರಿ.

Health Tips: ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಬಯಸುವಿರಾ?
ಅಕ್ಷತಾ ವರ್ಕಾಡಿ
|

Updated on: Jun 26, 2024 | 7:41 PM

Share

ಸರಿಯಾದ ಆಹಾರ ಪದ್ಧತಿಯ ಕೊರತೆಯು ಅನೇಕ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ಅದರಲ್ಲಿ ಪ್ರಮುಖವಾದದ್ದು ಬೊಜ್ಜು. ಹೆಚ್ಚಿನ ದೈಹಿಕ ಚಟುವಟಿಕೆಯಿಲ್ಲದೆ ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳುವುದು, ತಡವಾದ ಸಮಯದಲ್ಲಿ ತಿನ್ನುವುದು, ಸರಿಯಾದ ನಿದ್ರೆಯ ಕೊರತೆ ಮುಂತಾದ ಪ್ರತಿಯೊಂದು ಸಣ್ಣ ವಿಷಯವೂ ನಿಮ್ಮನ್ನು ಸ್ಥೂಲಕಾಯದಂತಹ ಕೆಟ್ಟ ಪರಿಣಾಮಗಳಿಗೆ ಕಾರಣವಾಗಬಹುದು.

ತೂಕ ನಷ್ಟದಲ್ಲಿ ಆಹಾರವು ಒಂದು ಪ್ರಮುಖ ಭಾಗವಾಗಿದೆ. ಅನಾರೋಗ್ಯಕರ ತ್ವರಿತ ಆಹಾರವನ್ನು ಸೇವಿಸಬೇಡಿ. ಬದಲಿಗೆ ಪೌಷ್ಟಿಕಾಂಶವುಳ್ಳ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಮಿತವಾಗಿ ಸೇವಿಸಿ. ಆಹಾರ ಪದ್ಧತಿಯ ಹೊರತಾಗಿ, ನೀವು ಅದನ್ನು ತಿನ್ನುವ ವಿಧಾನಕ್ಕೂ ಗಮನ ಕೊಡಬೇಕು. ಅತಿಯಾಗಿ ತಿನ್ನಬೇಡಿ. ಮಲಗುವ ಎರಡು ಮೂರು ಗಂಟೆಗಳ ಮೊದಲು ರಾತ್ರಿಯ ಊಟವನ್ನು ಮುಗಿಸಿ. ಅಂತೆಯೇ, ತಿನ್ನುವಾಗ ನಿಧಾನವಾಗಿ ತಿನ್ನಿರಿ. ಬಾಯಿ ಮುಚ್ಚಿ ಆಹಾರವನ್ನು ಚೆನ್ನಾಗಿ ಅಗಿದು ನುಂಗಿದಾಗ ಮಾತ್ರ ಜೀರ್ಣಕ್ರಿಯೆಯೂ ಸರಿಯಾಗುತ್ತದೆ.

ಇದನ್ನೂ ಓದಿ: ಒಂದೇ ದಿನದಲ್ಲಿ ಬಾಯಿ ಹುಣ್ಣಿನಿಂದ ಮುಕ್ತಿ, ಈ ಮನೆಮದ್ದು ಟ್ರೈ ಮಾಡಿ

ಸರಿಯಾದ ಸಮಯಕ್ಕೆ ಮಲಗುವುದು ಮತ್ತು ಏಳುವುದು ಕೂಡ ನಿಮ್ಮ ತೂಕ ಇಳಿಕೆಯನ್ನು ವೇಗಗೊಳಿಸುತ್ತದೆ. ರಾತ್ರಿ 10 ಗಂಟೆಯ ನಂತರ ಏಳುವುದನ್ನು ತಪ್ಪಿಸಿ ಮತ್ತು ಸಾಧ್ಯವಾದರೆ ಸೂರ್ಯೋದಯವನ್ನು ನೋಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅಲ್ಲದೆ ದಿನಕ್ಕೆ ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: