AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Breastfeeding Week: ಹಾಲುಣಿಸುವ ತಾಯಂದಿರಿಗೆ ತಪ್ಪದೆ ಅಗತ್ಯವಿರುವ 5 ಪೋಷಕಾಂಶಗಳು

ಹಾಲುಣಿಸುವ ತಾಯಂದಿರು ತಮ್ಮ ಆಹಾರದಲ್ಲಿ ತಪ್ಪದೆ ಸೇರಿಸಬೇಕಾದ ಪ್ರಮುಖ ಐದು ಪೋಷಕಾಂಶಗಳ ಕುರಿತು ಮಾಹಿತಿ ಇಲ್ಲಿವೆ.

World Breastfeeding Week: ಹಾಲುಣಿಸುವ ತಾಯಂದಿರಿಗೆ ತಪ್ಪದೆ ಅಗತ್ಯವಿರುವ 5 ಪೋಷಕಾಂಶಗಳು
ಸಾಂದರ್ಭಿಕ ಚಿತ್ರ
ಅಕ್ಷತಾ ವರ್ಕಾಡಿ
|

Updated on: Aug 03, 2023 | 7:06 PM

Share

ಆಗಸ್ಟ್ ಮೊದಲ ವಾರವನ್ನು ವಿಶ್ವ ಸ್ತನ್ಯಪಾನ ವಾರ (World Breastfeeding Week) ಎಂದು ಆಚರಿಸಲಾಗುತ್ತದೆ. ಆರು ತಿಂಗಳ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಶಿಶುವಿಗೆ ಎದೆಹಾಲು ಅತ್ಯಗತ್ಯವಾಗಿರುವುದರಿಂದ ಹಾಲುಣಿಸುವ ತಾಯಂದಿರಿಗೆ ಸಾಕಷ್ಟು ಪೋಷಕಾಂಶಗಳು ಅಗತ್ಯವಿರುತ್ತದೆ. ನವಜಾತ ಶಿಶುವಿಗೆ ಜೀವನದಲ್ಲಿ ಆ ಆರಂಭಿಕ ಹಂತದಲ್ಲಿ ಮತ್ತು ನಂತರವೂ ಎದೆ ಹಾಲು ಅಗತ್ಯವಾಗಿರುತ್ತದೆ. ಆದರೆ ಎದೆಹಾಲಿನ ವಿಷಯಕ್ಕೆ ಬಂದಾಗ, ಬಾಣಂತಿಯರ ಆಹಾರದಲ್ಲಿನ ಪೋಷಕಾಂಶಗಳು ಎದೆ ಹಾಲಿನ ಗುಣಮಟ್ಟ ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಹಾಲುಣಿಸುವ ತಾಯಂದಿರು ತಮ್ಮ ಆಹಾರದಲ್ಲಿ ತಪ್ಪದೆ ಸೇರಿಸಬೇಕಾದ ಪ್ರಮುಖ ಐದು ಪೋಷಕಾಂಶಗಳು ಇಲ್ಲಿವೆ.

ಪ್ರೋಟೀನ್​​​​ಗಳು:

ಪ್ರೋಟೀನ್ಗಳು ತಾಯಿ ಮತ್ತು ಮಗುವಿಗೆ ಅತ್ಯಗತ್ಯವಾಗಿರುತ್ತದೆ. ಗರ್ಭಾವಸ್ಥೆಯ ನಂತರದ ತೂಕವನ್ನು ಕಳೆದುಕೊಳ್ಳಲು ಮತ್ತು ಶಕ್ತಿಯನ್ನು ಮರಳಿ ಪಡೆಯಲು ಪ್ರೋಟೀನ್​​​​ಗಳು ಅತ್ಯಂತ ಅಗತ್ಯವಾಗಿರುತ್ತದೆ. ತಾಯಿಯ ಆಹಾರದಲ್ಲಿ ಮೊಟ್ಟೆ, ಹಾಲು ಮತ್ತು ಕೋಳಿ ಮಾಂಸ ಸೇರಿಸಿಕೊಳ್ಳುವುದು ಅತ್ಯಂತ ಅಗತ್ಯ.

ಕಬ್ಬಿಣಾಂಶ:

ಹೆರಿಗೆಯು ಮಹಿಳೆಯ ರಕ್ತದ ನಷ್ಟಕ್ಕೆ ಕಾರಣವಾಗಬಹುದು. ಈ ಕಾರಣಕ್ಕಾಗಿ, ಕಬ್ಬಿಣಾಂಶವು ಅತ್ಯಗತ್ಯವಾಗಿರುತ್ತದೆ. ಏಕೆಂದರೆ ಹಿಮೋಗ್ಲೋಬಿನ್ ಮಟ್ಟವು ತೀವ್ರವಾಗಿ ಕುಸಿಯಬಹುದು ಮತ್ತು ರಕ್ತಹೀನತೆಯ ಅಪಾಯವು ಹೆಚ್ಚಾಗುತ್ತದೆ. ಆದ್ದರಿಂದ, ದೈನಂದಿನ ಆಹಾರದಲ್ಲಿ ಸೊಪ್ಪು ತರಕಾರಿಗಳು ಅತ್ಯಗತ್ಯವಾಗಿರುತ್ತದೆ.

ಕ್ಯಾಲ್ಸಿಯಂ:

ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ, ಹಾಲುಣಿಸುವ ತಾಯಿಯು ಆಹಾರದಲ್ಲಿ ಕ್ಯಾಲ್ಸಿಯಂ-ಭರಿತ ಆಹಾರಗಳನ್ನು ಸೇರಿಸಲು ಖಚಿತವಾಗಿರಬೇಕು. ಅದೇ ಮೂಳೆಗಳನ್ನು ಬಲಪಡಿಸುವ ಮೂಲಕ ಮಗುವಿಗೆ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ: ಊಟದ ಬಳಿಕ ಹೊಟ್ಟೆ ಉಬ್ಬರದ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಈ ಸಮಸ್ಯೆಗೆ ಇಂದೇ ವಿದಾಯ ಹೇಳಿ

ಅಯೋಡಿನ್:

ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆ ದೈನಂದಿನ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಅಯೋಡಿನ್ ಹೊಂದಿರುವುದಿಲ್ಲ. ಆದ್ದರಿಂದ, ಮೊಟ್ಟೆ, ಚಿಕನ್ ಮತ್ತು ಡೈರಿ ಮುಂತಾದ ಆಹಾರಗಳನ್ನು ಶಿಫಾರಸು ಮಾಡಲಾಗುತ್ತದೆ. ಅಯೋಡಿನ್ ಪೂರಕಗಳನ್ನು ಸಹ ತೆಗೆದುಕೊಳ್ಳಬಹುದು.

ವಿಟಮಿನ್ ಡಿ:

ವಿಟಮಿನ್ ಡಿ ಅಥವಾ ಸನ್ಶೈನ್ ಪೋಷಕಾಂಶವು ರೋಗನಿರೋಧಕ ಶಕ್ತಿ ಮತ್ತು ಬಲವಾದ ಮೂಳೆಗಳಿಗೆ ಅತ್ಯಗತ್ಯವಾಗಿರುತ್ತದೆ. ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದರಿಂದ ತಾಯಿ ಮತ್ತು ಮಗು ಇಬ್ಬರೂ ಇದರಿಂದ ಪ್ರಯೋಜನ ಪಡೆಯಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ