ಮಧುಮೇಹ ನಿಯಂತ್ರಣ ಹಾಗೂ ದೇಹದ ತೂಕ ಇಳಿಕೆಗೆ ಇಲ್ಲಿದೆ ಬೆಸ್ಟ್​ ಫುಡ್​ ಟಿಪ್ಸ್​

ಆಲ್ಕೋಹಾಲ್​ ತ್ಯಜಿಸುವುದು ಮತ್ತು ಆರೋಗ್ಯಯುತ ಆಹಾರವನ್ನು ಸೇವಿಸುವುದು. ಇದರ ಹೊರತಾಗಿಯೂ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿ ದೇಹದ ತೂಕ ಇಳಿಸುವ ಆಹಾರಗಳನ್ನ ನೀವು ಸೇವಿಸಬಹುದು. ಅವು ಯಾವೆಲ್ಲಾ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಮಧುಮೇಹ ನಿಯಂತ್ರಣ ಹಾಗೂ ದೇಹದ ತೂಕ ಇಳಿಕೆಗೆ ಇಲ್ಲಿದೆ ಬೆಸ್ಟ್​ ಫುಡ್​ ಟಿಪ್ಸ್​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Feb 11, 2022 | 12:32 PM

ಮಧುಮೇಹ, ದೇಹದ ಅತಿಯಾದ ತೂಕ ಏರಿಕೆ ಇತ್ತೀಚಿನ ದಿನಗಳಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಇದರ ತಡೆಗೆ ಇಂದಿನ ಜನತೆ ಮಾಡದ ಕೆಲಸಗಳಿಲ್ಲ, ಪಡದ ಪ್ರಯತ್ನಗಳಿಲ್ಲ. ಪ್ರತೀ ಬಾರಿ ವ್ಯಾಯಾಮ, ಯೋಗಸಾನಗಳಿಂದ ದೇಹದ ತೂಕ ಇಳಿಸಲು ಕಷ್ಟಪಡುತ್ತಾರೆ. ಇದಕ್ಕೆ ಸರಳ ಪರಿಹಾರ ಎಂದರೆ ಆಲ್ಕೋಹಾಲ್ (Alcohol)​ ತ್ಯಜಿಸುವುದು ಮತ್ತು ಆರೋಗ್ಯಯುತ ಆಹಾರವನ್ನು ಸೇವಿಸುವುದು. ಇದರ ಹೊರತಾಗಿಯೂ ಮಧುಮೇಹವನ್ನು (Diabetes) ನಿಯಂತ್ರಣದಲ್ಲಿರಿಸಿ ದೇಹದ ತೂಕ ಇಳಿಸುವ (Weight Loss) ಆಹಾರಗಳನ್ನ ನೀವು ಸೇವಿಸಬಹುದು. ಅವು ಯಾವೆಲ್ಲಾ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಈ ಆಹಾರ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಸಕ್ಕರೆ ಪ್ರಮಾಣವನ್ನೂ ಕೂಡ ಕಡಿಮೆ ಹೊಂದಿದೆ. ಇದರಿಂದ  ದೇಹದ ತೂಕವನ್ನು  ಇಳಿಸಿ, ಮಧುಮೇಹವನ್ನೂ ಕೂಡ ನಿಯಂತ್ರಿಸುತ್ತದೆ.

ಕ್ಯಾರೆಟ್​: ಕಣ್ಣಿನ ಆರೋಗ್ಯ ಸೇರಿದಂತೆ ದೇಹದ ಎಲ್ಲಾ ಅಂಗಗಳ ಆರೋಗ್ಯ ಕಾಪಾಡಿಕೊಳ್ಳಲು ಕ್ಯಾರೆಟ್​ ನೆರವಾಗುತ್ತದೆ. 100 ಗ್ರಾಂ ಕ್ಯಾರೆಟ್​ನಲ್ಲಿ 4.7 ಗ್ರಾಂನಷ್ಟು ಸಕ್ಕರೆ ಅಂಶವಿರುತ್ತದೆ ಎಂದು ಹೇಳಲಾಗಿದೆ. ಕ್ಯಾರೆಟ್​ ಸೇವನೆಯಿಂದ ಮಧುಮೇಹವೂ ನಿಯಂತ್ರದಲ್ಲಿರುತ್ತದೆ. ಜತೆಗೆ ದೇಹದ ತೂಕವೂ ಇಳಿಕೆಯಾಗುತ್ತದೆ. ಮಧ್ಯಾಹ್ನದ ಊಟದ ಬದಲು ನೀವು ಕ್ಯಾರೆಟ್​ ಸ್ಲೈಸ್​ಗಳನ್ನು ಮಾಡಿ ತಿನ್ನಬಹುದು.

ಸೌತೆಕಾಯಿ: ಯಥೇಚ್ಛ ನೀರಿನ ಅಂಶವಿರುವ ಸೌತೆಕಾಯಿ ದೇಹದ ತೂಕ ಇಳಿಕೆಗೆ ಉತ್ತಮ ಆಹಾರವಾಗಿದೆ. ಮಧುಮೇಹವನ್ನು ನಿಯಂತ್ರಿಸಿ ದೇಹದ ಹಸಿವನ್ನೂ ತಡೆಯುತ್ತದೆ. ಹೀಗಾಗಿ ಸೌತೆಕಾಯಿಯನ್ನು ಸಮೃದ್ಧ ಆಹಾರ ಎಂದೇ ಕರೆಯಲಾಗುತ್ತದೆ. ಸಮೃದ್ಧ ಫೈಬರ್​ ಅಂಶವಿರುವ ಸೌತೆಕಾಯಿ  ದೇಹವನ್ನು ತಂಪಾಗಿರಿಸಿ, ಅನಗತ್ಯ ಕೊಬ್ಬನ್ನು ಕರಗಿಸುತ್ತದೆ.

ಬ್ರೌನ್​​ ರೈಸ್​: ಸಾಮಾನ್ಯವಾಗಿ ಅನ್ನದ  ಸೇವನೆ ದೇಹದ ತೂಕವನ್ನು ಹೆಚ್ಚಿಸುತ್ತದೆ, ಮಧುಮೇಹಿಗಳಿಗೂ ಅಷ್ಟೊಂದು ಉಪಯುಕ್ತವಲ್ಲ ಎನ್ನಲಾಗುತ್ತದೆ. ಆದರೆ ಬ್ರೌನ್​ ರೈಸ್​ ದೇಹದ ಅತಿಯಾದ ತೂಕವನ್ನು ಇಳಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜತೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನೂ ಕೂಡ ನಿಯಂತ್ರಿಸುತ್ತದೆ.

ಗ್ರೀಕ್​ ಮೊಸರು: ದೇಹವನ್ನು ತಂಪಾಗಿರಿಸಲು ಮೊಸರು ಸಹಕಾರಿ. ಅದರಲ್ಲೂ ಗ್ರೀಕ್​ ಮೊಸರು ಆರೋಗ್ಯಕ್ಕೆ ಇನ್ನಷ್ಟು ಉಪಕಾರಿಯಾಗಿದೆ. 100 ಗ್ರಾಂ ಗ್ರೀಕ್​ ಮೊಸರಿನಲ್ಲಿ 3.2ಗ್ರಾಂನಷ್ಟು ಮಾತ್ರ ಸಕ್ಕರೆ ಅಂಶ ಇರುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಮಧುಮೇಹಿಗಳಿಗೂ ಗ್ರೀಕ್​ ಮೊಸರು ಉತ್ತಮ ಆಹಾರವಾಗಿದೆ. ಇದರಲ್ಲಿ ಕ್ಯಾಲೊರಿಗಳೂ ಕೂಡ ಕಡಿಮೆ ಇರುವುದರಿಂದ ದೇಹದ ತೂಕವೂ ಹೆಚ್ಚುವುದಿಲ್ಲ.

ಅಣಬೆ: ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ಅಣಬೆಯಲ್ಲಿ ಹಲವು ವಿಧಗಳಿವೆ. ಹೀಗಾಗಿ ಅಣಬೆ ಸೇವನೆ ಮುನ್ನ ಎಚ್ಚರವಹಿಸಿ. ಕೆಲವೊಂದು ಅಣಬೆಗಳು ಜೀವಕ್ಕೆ ಕುತ್ತು ತರುತ್ತದೆ. ವರದಿಯ ಪ್ರಕಾರ 100 ಗ್ರಾಂ ಬಿಳಿ ಅಣಬೆಯಲ್ಲಿ 2 ಗ್ರಾಂನಷ್ಟು ಮಾತ್ರ ಸಕ್ಕರೆ ಅಂಶವಿರುತ್ತದೆ ಎನ್ನಲಾಗಿದೆ. ಹೀಗಾಗಿ ಮಧುಮೇಹಿಗಳಿಗೆ ಅಣಬೆ ಉತ್ತಮ ಆಹಾರವಾಗಿದೆ.

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್​ನೌನ ವರದಿ ಆಧರಿಸಿ ಮಾಹಿತಿ ನೀಡಲಾಗಿದೆ.)​

ಇದನ್ನೂ ಓದಿ:

Horse Gram health benefits: ಮಧುಮೇಹವನ್ನು ನಿಯಂತ್ರಿಸುವಲ್ಲಿ ಹುರುಳಿ ಕಾಳು ಸಹಾಯಕ! ಹೇಗೆ ಅಂತೀರಾ?