ಅಡುಗೆ ಮಾಡುವಾಗಲೋ, ಬಿಸಿ ನೀರು ಬಳಸುವಾಗಲೋ, ಇಸ್ತ್ರಿ ಪೆಟ್ಟಿಗೆಯಿಂದಲೋ ಅಥವಾ ಇನ್ಯಾವುದೋ ಸಂದರ್ಭದಲ್ಲಿ ಮೈಮೇಲೆ ಸುಟ್ಟ ಗಾಯಗಳಾದಾಗ ಆ ಉರಿಯನ್ನು ಕಡಿಮೆ ಮಾಡಿಕೊಳ್ಳಲು ಪರದಾಡುತ್ತೇವೆ. 3 ಇಂಚುಗಳಿಗಿಂತ ಕಡಿಮೆ ಆಳದ ಸುಟ್ಟ ಗಾಯಗಳಾಗಿದ್ದರೆ ಕೆಲವು ಮನೆಮದ್ದುಗಳನ್ನು ಬಳಸಿ ಚಿಕಿತ್ಸೆ ನೀಡಬಹುದು. ಹೆಚ್ಚಿನ ಮಟ್ಟದ ಸುಟ್ಟಗಾಯಗಳಾದಾಗ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಸುಟ್ಟ ಜಾಗದಲ್ಲಿ ಕೆಂಪಾದರೆ, ಗುಳ್ಳೆಯಾದರೆ, ಸಿಪ್ಪೆ ಸುಲಿದರೆ ಮನೆಯಲ್ಲೇ ಅದಕ್ಕೆ ಔಷಧಿ ಮಾಡಿಕೊಳ್ಳಬಹುದು.
ಸೌಮ್ಯವಾದ ಸುಟ್ಟ ಗಾಯಗಳು ಸಂಪೂರ್ಣವಾಗಿ ಗುಣವಾಗಲು ಸಾಮಾನ್ಯವಾಗಿ 1 ವಾರ ಅಥವಾ 2 ವಾರಗಳನ್ನು ತೆಗೆದುಕೊಳ್ಳುತ್ತದೆ. ಸುಟ್ಟಗಾಯಗಳಿಗೆ ಅತ್ಯುತ್ತಮ ಮನೆಮದ್ದುಗಳು ಇಲ್ಲಿವೆ.
1. ತಂಪಾದ ನೀರು:
ನಿಮಗೆ ಸಣ್ಣ ಸುಟ್ಟಗಾಯವಾದಾಗ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಸುಮಾರು 20 ನಿಮಿಷಗಳ ಕಾಲ ಸುಟ್ಟ ಜಾಗದ ಮೇಲೆ ತಂಪಾದ (ಐಸ್ ಅಲ್ಲ) ನೀರನ್ನು ಹಾಕಿಕೊಳ್ಳುವುದು. ನಂತರ ಸುಟ್ಟ ಜಾಗವನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ.
2. ತಣ್ಣನೆಯ ಬಟ್ಟೆ:
ಸುಟ್ಟ ಪ್ರದೇಶದ ಮೇಲೆ ಇರಿಸಲಾಗುವ ಸ್ವಚ್ಛವಾದ ಒದ್ದೆಯಾದ ಬಟ್ಟೆಯು ನೋವು ಮತ್ತು ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು 5ರಿಂದ 15 ನಿಮಿಷಗಳ ಕಾಲ ಈ ಬಟ್ಟೆಯನ್ನು ಸುಟ್ಟ ಗಾಯದ ಮೇಲೆ ಇಟ್ಟುಕೊಳ್ಳಬಹುದು. ಅತಿಯಾದ ಕೋಲ್ಡ್ ಆಗಿರುವ ಬಟ್ಟೆಯನ್ನು ಬಳಸಬೇಡಿ. ಅದು ಉರಿಯುವಿಕೆಯನ್ನು ಹೆಚ್ಚು ಕೆರಳಿಸಬಹುದು.
ಇದನ್ನೂ ಓದಿ: ನೀವು ಗರ್ಭಿಣಿಯಾಗಿದ್ದರೆ ಈ 10 ಅಂಶಗಳನ್ನೆಂದೂ ಮರೆಯಬೇಡಿ
3. ಮುಲಾಮುಗಳು:
ಆಂಟಿಬಯೋಟಿಕ್ ಮುಲಾಮುಗಳು ಮತ್ತು ಕ್ರೀಮ್‌ಗಳು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ನಿಮ್ಮ ಸುಟ್ಟಗಾಯಕ್ಕೆ ಬ್ಯಾಸಿಟ್ರಾಸಿನ್ ಅಥವಾ ನಿಯೋಸ್ಪೊರಿನ್ ನಂತಹ ಬ್ಯಾಕ್ಟೀರಿಯಾ ವಿರೋಧಿ ಮುಲಾಮನ್ನು ಹಚ್ಚಿಕೊಳ್ಳಿ. ನಂತರ ಅದನ್ನು ಬಟ್ಟೆ ಅಥವಾ ಹತ್ತಿಯಿಂದ ಸುತ್ತಿಕೊಳ್ಳಿ.
4. ಅಲೋವೆರಾ:
ಅಲೋವೆರಾ ಸಾಮಾನ್ಯವಾಗಿ ಸುಟ್ಟ ಗಾಯಕ್ಕೆ ಅತ್ಯುತ್ತಮವಾದ ಔಷಧಿ. ಅಲೋವೆರಾ ಗಾಯದ ನೋವನ್ನು ಕಡಿಮೆ ಮಾಡುತ್ತದೆ. ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಅಲೋವೆರಾ ಗಿಡದ ಎಲೆಯಿಂದ ತೆಗೆದ ಶುದ್ಧ ಅಲೋವೆರಾ ಜೆಲ್ ಅನ್ನು ಸುಟ್ಟ ಗಾಯದ ಮೇಲೆ ಹಚ್ಚಿಕೊಳ್ಳಿ.
5. ಜೇನುತುಪ್ಪ:
ಜೇನುತುಪ್ಪವನ್ನು ಸುಟ್ಟ ಗಾಯದ ಮೇಲೆ ಹಚ್ಚಿಕೊಂಡಾಗ ನೋವು ಕಡಿಮೆಯಾಗುತ್ತದೆ. ಜೇನುತುಪ್ಪವು ಉರಿಯೂತದ ಮತ್ತು ನೈಸರ್ಗಿಕವಾಗಿ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಆಗಿದೆ.
6. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಡಿ:
ನೇರ ಸೂರ್ಯನ ಬೆಳಕಿಗೆ ಬರ್ನ್ ಆದ ಜಾಗವನ್ನು ಒಡ್ಡುವುದನ್ನು ತಪ್ಪಿಸಿ. ಸುಟ್ಟ ಚರ್ಮವು ಬಹಳ ಸೂಕ್ಷ್ಮವಾಗಿರುತ್ತದೆ. ಬಿಸಿಲಿಗೆ ಹೋಗುವಾಗ ಆ ಜಾಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ.
ಇದನ್ನೂ ಓದಿ: ಸ್ತನ ಕ್ಯಾನ್ಸರ್ ಬಗ್ಗೆ ಇರುವ 15 ತಪ್ಪು ಕಲ್ಪನೆಗಳಿವು
ಏನನ್ನು ಬಳಸಬಾರದು?:
1. ಬೆಣ್ಣೆ:
ಸುಟ್ಟ ಗಾಯದ ಮೇಲೆ ಬೆಣ್ಣೆಯನ್ನು ಬಳಸಬೇಡಿ. ಬೆಣ್ಣೆ ನಿಮ್ಮ ಸುಡುವಿಕೆಯನ್ನು ಇನ್ನಷ್ಟು ಹದಗೆಡಿಸಬಹುದು. ಬೆಣ್ಣೆಯು ಶಾಖವನ್ನು ಉಳಿಸಿಕೊಳ್ಳುತ್ತದೆ. ಇದು ಸುಟ್ಟ ಚರ್ಮಕ್ಕೆ ಸೋಂಕು ತಗುಲಿಸುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಸಹ ಹೊಂದಿರಬಹುದು.
2. ಆಯಿಲ್:
ಎಲ್ಲರೂ ಅಂದುಕೊಂಡಂತೆ ತೆಂಗಿನ ಎಣ್ಣೆಯು ಎಲ್ಲವನ್ನೂ ಗುಣಪಡಿಸುವುದಿಲ್ಲ. ಹೀಗಾಗಿ ನೀವು ನಿಮ್ಮ ಸುಟ್ಟಗಾಯಗಳಿಗೆ ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಮತ್ತು ಅಡುಗೆ ಎಣ್ಣೆಗಳಂತಹ ಆಯಿಲ್ ಅನ್ನು ಹಚ್ಚಬೇಡಿ. ಎಣ್ಣೆಗಳು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದು ಚರ್ಮವು ಸುಡುವುದನ್ನು ಹೆಚ್ಚಿಸಬಹುದು.
3. ಮೊಟ್ಟೆಯ ಬಿಳಿಭಾಗ:
ಬೇಯಿಸದ ಮೊಟ್ಟೆಯ ಬಿಳಿಭಾಗವು ಬ್ಯಾಕ್ಟೀರಿಯಾದ ಸೋಂಕಿನ ಅಪಾಯವನ್ನು ಹೊಂದಿರುತ್ತದೆ. ಅದನ್ನು ಸುಟ್ಟ ಗಾಯದ ಮೇಲೆ ಇಡಬಾರದು. ಮೊಟ್ಟೆಗಳು ಸಹ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು.
4. ಟೂತ್‌ಪೇಸ್ಟ್:
ಸುಟ್ಟ ಗಾಯಕ್ಕೆ ಟೂತ್‌ಪೇಸ್ಟ್ ಅನ್ನು ಎಂದಿಗೂ ಹಚ್ಚಬೇಡಿ. ಇದು ಯಾವುದೇ ಪುರಾವೆಗಳಿಲ್ಲದ ಮತ್ತೊಂದು ನಂಬಿಕೆಯಾಗಿದೆ. ಟೂತ್‌ಪೇಸ್ಟ್ ಸುಟ್ಟ ಗಾಯವನ್ನು ಕೆರಳಿಸಬಹುದು. ಇದು ಕ್ರಿಮಿನಾಶಕವಲ್ಲ ಎಂಬುದು ನೆನಪಿರಲಿ.
5. ಐಸ್:
ಸುಟ್ಟ ಗಾಯಕ್ಕೆ ಐಸ್ ಇಟ್ಟರೆ ಬೇಗ ಆರಾಮ ಸಿಗುತ್ತದೆ ಎಂಬ ನಂಬಿಕೆಯಿದೆ. ಆದರೆ ಐಸ್ ಮತ್ತು ತಣ್ಣನೆಯ ನೀರು ನಿಮ್ಮ ಸುಟ್ಟ ಜಾಗವನ್ನು ಹೆಚ್ಚು ಕೆರಳಿಸಬಹುದು.