ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು, ಬಿಳಿಭಾಗ ಮಾತ್ರ ಸೇವಿಸಬೇಕೇ? ತಜ್ಞರು ಹೇಳುವುದೇನು?

| Updated By: ಅಕ್ಷತಾ ವರ್ಕಾಡಿ

Updated on: Jan 14, 2023 | 4:29 PM

ನಿಮ್ಮಲ್ಲಿ ಸಾಕಷ್ಟು ಜನರಿಗೆ ದಿನದಲ್ಲಿ ಎಷ್ಟು ಮೊಟ್ಟೆ ಸೇವಿಸುಬೇಕು? ಮೊಟ್ಟೆ ಸೇವನೆ ತೂಕ ಹೆಚ್ಚಾಗಲು ಕಾರಣವಾಗಬಹುದೇ? ಎಂಬ ಸಾಕಷ್ಟು ಪ್ರಶ್ನೆಗಳಿರುತ್ತವೆ.

ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು, ಬಿಳಿಭಾಗ ಮಾತ್ರ ಸೇವಿಸಬೇಕೇ? ತಜ್ಞರು ಹೇಳುವುದೇನು?
ಸಾಂದರ್ಭಿಕ ಚಿತ್ರ
Follow us on

ಪ್ರೋಟೀನ್‌(Protein)ಗಳು ಮತ್ತು ವಿಟಮಿನ್ ಡಿ(Vitamin D) ಸಮೃದ್ದವಾಗಿರುವ ಮೊಟ್ಟೆಯನ್ನು ಸಾಕಷ್ಟು ಆಹಾರ ಕ್ರಮಗಳಲ್ಲಿ ಬಳಸಲಾಗುತ್ತದೆ. ಆದರೆ ನಿಮ್ಮಲ್ಲಿ ಸಾಕಷ್ಟು ಜನರಿಗೆ ದಿನದಲ್ಲಿ ಎಷ್ಟು ಮೊಟ್ಟೆ ಸೇವಿಸುಬೇಕು? ಮೊಟ್ಟೆ ಸೇವನೆ ತೂಕ ಹೆಚ್ಚಾಗಲು ಕಾರಣವಾಗಬಹುದೇ? ಎಂಬ ಸಾಕಷ್ಟು ಪ್ರಶ್ನೆಗಳಿರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ. ಮ್ಯಾಕ್‌ಮಾಸ್ಟರ್ ವಿಶ್ವವಿದ್ಯಾಲಯ ಮತ್ತು ಹ್ಯಾಮಿಲ್ಟನ್ ಹೆಲ್ತ್ ಸೈನ್ಸಸ್‌ನ ಸಂಶೋಧಕರ ತಂಡವು ದಿನಕ್ಕೆ ಒಂದು ಮೊಟ್ಟೆಯನ್ನು ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಯಾವುದೇ ಹಾನಿ ಮಾಡುವುದಿಲ್ಲ ಮತ್ತು ಅದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ ಎಂದು ಸಲಹೆ ನೀಡಿದೆ.

ಇದಲ್ಲದೇ ಮೊಟ್ಟೆ ಸೇವಿಸುವಾಗ ಸಾಕಷ್ಟು ಜನರು ಮೊಟ್ಟೆಯ ಹಳದಿ ಭಾಗವನ್ನು ಮಾತ್ರ ತಿನ್ನುತ್ತಾರೆ. ಆದ್ದರಿಂದ ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದರಿಂದ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಕ್ಯಾಲಿಫೋರ್ನಿಯಾ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಪಳನಿಯಪ್ಪನ್ ಮಾಣಿಕ್ಕಂ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಿದ್ರೆಯ ಕೊರತೆಯು ಅಧಿಕ ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗಬಹುದು

ಜನರಲ್ಲಿ ಪ್ರತಿ ಸಲ ಆಹಾರ ತೆಗೆದುಕೊಳ್ಳುವಾಗ ಕಾಡುವ ಭಯ ಕೊಲೆಸ್ಟ್ರಾಲ್. ಇದರಿಂದಾಗಿ ಮೊಟ್ಟೆಯ ಹಳದಿ ಭಾಗವನ್ನು ತಿನ್ನಲು ಜನರು ಹಿಂಜರಿಯುತ್ತಾರೆ. ಯಾಕೆಂದರೆ ಮೊಟ್ಟೆಯ ಹಳದಿ ಭಾಗ 200 ಮಿಲಿಗ್ರಾಂ ಕೊಲೆಸ್ಟ್ರಾಲ್​​ನ್ನು ಹೊಂದಿದೆ. ಇದರಿಂದಾಗಿ ಮೊಟ್ಟೆ ಪ್ರತಿಬಾರಿ ಚರ್ಚೆಯಲ್ಲಿರುತ್ತದೆ ಎಂದು ಪೌಷ್ಟಿಕ ತಜ್ಞರಾದ ಪಳನಿಯಪ್ಪನ್ ಹೇಳುತ್ತಾರೆ.

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಮೊಟ್ಟೆಯನ್ನು ಸೇವಿಸುವುದು ಉತ್ತಮ. ಆದ್ದರಿಂದ ಪ್ರತಿದಿನ ಒಂದು ಮೊಟ್ಟೆಯನ್ನು ಸೇವಿಸಿ ಎಂದು ಹೇಳುತ್ತದೆ. ಪ್ರತಿದಿನ ಒಂದು ಮೊಟ್ಟೆಯ ಸೇವನೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಪ್ರತಿದಿನ ಒಂದು ಮೊಟ್ಟೆಯು ಬಹಳಷ್ಟು ಪೋಷಕಾಂಶಗಳಿಂದ ತುಂಬಿರುತ್ತದೆ. ಮೊಟ್ಟೆಯ ಬಿಳಿಭಾಗವು ಬಹಳಷ್ಟು ಪ್ರೋಟೀನ್‌ಗಳನ್ನು ಹೊಂದಿರುತ್ತದೆ ಮತ್ತು ಹಳದಿ ಲೋಳೆಯು ಪ್ರೋಟೀನ್‌ಗಳನ್ನು ಹೊಂದಿರುತ್ತದೆ ಎಂದು ತಿಳಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 4:26 pm, Sat, 14 January 23