ಪುರುಷರ ಈ ಅಭ್ಯಾಸಗಳು ಮಹಿಳೆಯರ ಆರೋಗ್ಯವನ್ನೇ ಹಾಳುಮಾಡುತ್ತೆ! ನೀವು ಈ ರೀತಿ ಮಾಡ್ತಿರಾ?

ಪ್ರತಿನಿತ್ಯ ಪುರುಷರು ಮಾಡುವಂತಹ ಕೆಲವು ಅಭ್ಯಾಸಗಳು, ಅವರ ಸಂಗಾತಿ ಅಂದರೆ ಮಹಿಳೆಯರ ಆರೋಗ್ಯವನ್ನು ಹಾಳು ಮಾಡುತ್ತದೆ. ಹೌದು. ಪುರುಷರು ತಮ್ಮ ವೈಯಕ್ತಿಕ ನೈರ್ಮಲ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದಲ್ಲಿ, ಮಹಿಳೆಯರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಈ ವಿಚಾರವಾಗಿ ಆರೋಗ್ಯ ತಜ್ಞ ಡಾ. ಮನನ್ ವೋರಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಆ ಅಭ್ಯಾಸಗಳು ಯಾವುವು? ಯಾಕೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪುರುಷರ ಈ ಅಭ್ಯಾಸಗಳು ಮಹಿಳೆಯರ ಆರೋಗ್ಯವನ್ನೇ ಹಾಳುಮಾಡುತ್ತೆ! ನೀವು ಈ ರೀತಿ ಮಾಡ್ತಿರಾ?
Men's Habits Affecting Women's Health

Updated on: Sep 12, 2025 | 4:00 PM

ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿ, ನಮ್ಮ ಆಹಾರ ಪದ್ಧತಿ ಮತ್ತು ಮಾಲಿನ್ಯದಿಂದಾಗಿ, ಅನೇಕ ರೀತಿಯ ಆರೋಗ್ಯ (Health) ಸಮಸ್ಯೆಗಳು ಉದ್ಭವವಾಗುತ್ತಿದೆ. ಹಾಗಾಗಿ ಈ ದಿನಗಳಲ್ಲಿ, ಆರೋಗ್ಯವಾಗಿರುವುದು ಒಂದು ರೀತಿಯ ಸವಾಲಾಗಿ ಪರಿಣಮಿಸಿದೆ. ವಿವೇಚನೆಯಿಲ್ಲದೆ ಏನನ್ನಾದರೂ ಸೇವನೆ ಮಾಡುವುದು ಮತ್ತು ಕೆಟ್ಟ ಅಭ್ಯಾಸಗಳು ಆರೋಗ್ಯವನ್ನು ಹಾಳುಮಾಡಬಹುದು. ಮಾತ್ರವಲ್ಲ, ಪುರುಷರ ಕೆಲವು ಅಭ್ಯಾಸಗಳು ಕೂಡ ಮಹಿಳೆಯರ ಆರೋಗ್ಯದ (Women’s Health) ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಪುರುಷರು ತಮ್ಮ ವೈಯಕ್ತಿಕ ನೈರ್ಮಲ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದಲ್ಲಿ, ಅದು ಅವರ ಸಂಗಾತಿಯ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಅವರ ಕೆಲವು ಅಭ್ಯಾಸಗಳು ಗಮನಾರ್ಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ಪೂರಕವೆಂಬಂತೆ ಮುಂಬೈನ ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ (dr.mananvora) ತಮ್ಮ ಇನ್ಸ್ಟಾ ಖಾತೆಯಲ್ಲಿ ಪುರುಷರ ಐದು ಅಭ್ಯಾಸಗಳ ಬಗ್ಗೆ ಚರ್ಚಿಸಿದ್ದು ಇವು ಸಂಗಾತಿಯ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮಾತ್ರವಲ್ಲ ತೀವ್ರವಾದ ಸೋಂಕುಗಳಿಗೂ ಕಾರಣವಾಗಬಹುದು ಎಂದಿದ್ದಾರೆ. ಹಾಗಾದರೆ ಆ ಅಭ್ಯಾಸಗಳು ಯಾವುವು? ಯಾಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಹತ್ತಿರ ಬರುವ ಮೊದಲು ಕೈ ತೊಳೆಯದಿರುವುದು

ಪುರುಷರು ತಮ್ಮ ಸಂಗಾತಿಯ ಹತ್ತಿರ ಬರುವ ಮೊದಲು ತಮ್ಮ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ಆದರೆ ಪುರುಷರು ಇದರ ಬಗ್ಗೆ ಗಮನ ಹರಿಸುವುದಿಲ್ಲ. ಪರಿಣಾಮವಾಗಿ, ಮಹಿಳೆಯರಲ್ಲಿ ಮೂತ್ರನಾಳದ ಸೋಂಕಿನ (UTI) ಅಪಾಯ ಹೆಚ್ಚಾಗುತ್ತದೆ. ಪುರುಷರ ಕೈಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಧೂಳಿನ ಅಂಶ ಕೆಲವೊಮ್ಮೆ ಮಹಿಳೆಯ ಯೋನಿಯೊಳಗೆ ಪ್ರವೇಶಿಸಿ ಸೋಂಕುಗಳಿಗೆ ಕಾರಣವಾಗಬಹುದು. ಇದು ಸುಡುವಿಕೆ, ನೋವು ಮತ್ತು ಆಗಾಗ ಮೂತ್ರ ವಿಸರ್ಜನೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ
ತುಪ್ಪದಿಂದ ಪಾದ ಮಸಾಜ್ ಮಾಡುವ ಪದ್ಧತಿ ಎಷ್ಟು ಪ್ರಯೋಜನಕಾರಿ ನೋಡಿ!
ಈ ಒಂದು ಹಣ್ಣಿನಲ್ಲಿ ಅದೆಷ್ಟು ಪ್ರಯೋಜನವಿದೆ ನೋಡಿ!
ಆರೋಗ್ಯವಾಗಿರಲು ಏನು ಮಾಡಬೇಕು? ಸದ್ಗುರು ತಿಳಿಸಿರುವ ಈ ಟಿಪ್ಸ್ ಪಾಲನೆ ಮಾಡಿ
ಯಾವ ಡ್ರೈ ಫ್ರೂಟ್ಸ್ ಯಾವೆಲ್ಲಾ ಆರೋಗ್ಯ ಸಮಸ್ಯಗೆ ಪರಿಹಾರ?

ಶೌಚಾಲಯದ ಸೀಟಿನಲ್ಲಿ ಮೂತ್ರ ವಿಸರ್ಜನೆ

ಸಾಮಾನ್ಯವಾಗಿ ಸ್ನಾನಗೃಹದ ಸ್ವಚ್ಛತೆಯನ್ನು ನಿರ್ಲಕ್ಷಿಸುವುದು ಮಹಿಳೆಯರ ಆರೋಗ್ಯಕ್ಕೆ ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ. ಪುರುಷರು ಶೌಚಾಲಯದ ಸೀಟಿನ ಮೇಲೆ ಮೂತ್ರ ವಿಸರ್ಜಿಸಿ ಅದನ್ನು ಸ್ವಚ್ಛಗೊಳಿಸದಿದ್ದರೆ, ಅಲ್ಲಿನ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ವೇಗವಾಗಿ ದ್ವಿಗುಣಗೊಳ್ಳುತ್ತದೆ. ಮಾತ್ರವಲ್ಲ ಮಹಿಳೆ ಇದನ್ನು ಬಳಸುವುದರಿಂದ ಆಕೆಯ ಚರ್ಮ ಅಥವಾ ಜನನಾಂಗಗಳು ಈ ಸೋಂಕುಗಳೊಂದಿಗೆ ನೇರ ಸಂಪರ್ಕಕ್ಕೆ ಬರುತ್ತವೆ. ಇದು ಯುಟಿಐ, ಶಿಲೀಂಧ್ರ ಸೋಂಕುಗಳು ಅಥವಾ ಚರ್ಮದ ದದ್ದುಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು, ಬಳಕೆಯ ನಂತರ ಯಾವಾಗಲೂ ಶೌಚಾಲಯದ ಸೀಟನ್ನು ಟಿಶ್ಯೂ ಅಥವಾ ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿ.

ವೈದ್ಯರು ಏನು ಹೇಳಿದ್ದಾರೆ ನೋಡಿ;

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ

ಧೂಮಪಾನವು ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ ನಿಮ್ಮ ಸಂಗಾತಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನೀವು ಧೂಮಪಾನ ಮಾಡಿದಾಗ, ನಿಮ್ಮ ಸುತ್ತ ಇರುವವರು ಪರೋಕ್ಷವಾಗಿ ಆ ಹೊಗೆಗೆ ಬಲಿಯಾಗುತ್ತಾರೆ. ಇದು ಉಸಿರಾಟದ ಕಾಯಿಲೆಗಳು, ಹಾರ್ಮೋನುಗಳ ಅಸಮತೋಲನ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವವರು ಅಥವಾ ಗರ್ಭಿಣಿಯರು ನಿಯಮಿತವಾಗಿ ಹೊಗೆಗೆ ಒಡ್ಡಿಕೊಂಡರೆ, ಅದು ಭ್ರೂಣದ ಬೆಳವಣಿಗೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: ಪುರುಷರ ಫಲವತ್ತತೆಯನ್ನು ಹೆಚ್ಚಿಸಲು ಇಲ್ಲಿವೆ 4 ಸಲಹೆಗಳು

ದಿನಕ್ಕೆ ಎರಡು ಬಾರಿ ಸ್ನಾನ ಮಾಡದಿರುವುದು

ಪ್ರತಿನಿತ್ಯ ಪುರುಷರು ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುತ್ತಾರೆ. ಅದರಲ್ಲಿಯೂ ಹೆಚ್ಚಾಗಿ ಹೊರಾಂಗಣದಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಪರಿಣಾಮವಾಗಿ, ಅವರ ದೇಹದ ಮೇಲೆ ಬೆವರು ಮತ್ತು ಕೊಳಕು ಸಂಗ್ರಹವಾಗಿರುತ್ತದೆ. ಪುರುಷರು ಸ್ನಾನ ಮಾಡುವುದಕ್ಕೆ ನಿರ್ಲಕ್ಷ ಮಾಡಿದರೆ, ಅದು ಅವರ ಸಂಗಾತಿಯ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ದಿನಕ್ಕೆ ಒಂದು ಬಾರಿಯೂ ಸ್ನಾನ ಮಾಡದಿರುವುದು ಅವರ ಚರ್ಮದ ಮೇಲೆ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗಬಹುದು. ದಂಪತಿಗಳು ಒಂದೇ ಹಾಸಿಗೆ ಅಥವಾ ಬೆಡ್ ಶಿಟ್ ಹಂಚಿಕೊಂಡಾಗ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ದೇಹದ ಕೊಳೆ ಮಹಿಳೆಯರ ಚರ್ಮಕ್ಕೆ ವರ್ಗಾವಣೆಯಾಗಿ ಇದು ಶಿಲೀಂಧ್ರಗಳ ಸೋಂಕು, ದದ್ದುಗಳು ಅಥವಾ ತುರಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸುವುದು ಬಹಳ ಒಳ್ಳೆಯದು.

ಉಗುರುಗಳಲ್ಲಿ ಕಂಡು ಬರುವ ಕೊಳಕು

ಸಾಮಾನ್ಯವಾಗಿ ಪುರುಷರ ಉದ್ದ ಉಗುರುಗಳಲ್ಲಿ, ವಿವಿಧ ರೀತಿಯ ಬ್ಯಾಕ್ಟೀರಿಯಾ ಮತ್ತು ಧೂಳು ಸಂಗ್ರಹವಾಗಿರುತ್ತದೆ. ಈ ಉಗುರುಗಳು ಮಹಿಳೆಯರೊಂದಿಗೆ ಸಂಪರ್ಕಕ್ಕೆ ಬಂದಾಗ, ಅದು ಸಾಮೀಪ್ಯ ಅಥವಾ ಚರ್ಮದ ಸಂಪರ್ಕದ ಮೂಲಕ, ಅವರಿಗೆ ಸೋಂಕುಗಳು ಬರುವ ಅಪಾಯವನ್ನು ಹೆಚ್ಚಿಸಬಹುದು ಮಾತ್ರವಲ್ಲ ಚರ್ಮ ರೋಗಗಳಿಗೆ ಕಾರಣವಾಗಬಹುದು. ಇದನ್ನು ತಡೆಗಟ್ಟಲು, ಸಮಯಕ್ಕೆ ಸರಿಯಾಗಿ ಉಗುರುಗಳನ್ನು ಟ್ರಿಮ್ ಮಾಡಿ, ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಟ್ರೈ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ