ಚಳಿಗಾಲದಲ್ಲಿ ಬರುವ ಹಲ್ಲು, ಗಂಟಲು ನೋವಿನಿಂದ ಪರಿಹಾರ ಕಂಡುಕೊಳ್ಳಲು ಈ ಸುಲಭ ಟ್ರಿಕ್ ಪಾಲಿಸಿ
ಡಿಸೆಂಬರ್ ಆರಂಭವಾಗುತ್ತಿದ್ದಂತೆ ಚಳಿ ಇನ್ನಷ್ಟು ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಅದರಲ್ಲಿಯೂ ಹವಾಮಾನದಲ್ಲಿನ ಬದಲಾವಣೆ ಹಲ್ಲು ಮತ್ತು ಗಂಟಲು ನೋವು ಮತ್ತು ಕೆರತಕ್ಕೆ ಕಾರಣವಾಗುತ್ತದೆ. ಈ ರೀತಿಯಾದಾಗ ಔಷಧಿಗಳ ಮೊರೆ ಹೋಗುವ ಬದಲು ಸುಲಭವಾಗಿ ಸಿಗುವ ಕೆಲವು ನೈಸರ್ಗಿಕ ವಸ್ತುಗಳನ್ನು ಔಷಧಿಯಂತೆ ಬಳಸಿಕೊಳ್ಳಬಹುದು ಇದು ಗಂಟಲು ನೋವನ್ನು ನಿವಾರಿಸುವುದಲ್ಲದೆ, ಕೆಮ್ಮು ಮತ್ತು ಶೀತದಿಂದ ಪರಿಹಾರ ನೀಡುತ್ತವೆ. ಹಾಗಾದರೆ ಹಲ್ಲು ಮತ್ತು ಗಂಟಲು ನೋವಿನಿಂದ ಪರಿಹಾರ ಕಂಡುಕೊಳ್ಳಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಿಸೆಂಬರ್ ಆರಂಭವಾಗುತ್ತಿದ್ದಂತೆ ಚಳಿ ಇನ್ನಷ್ಟು ಹೆಚ್ಚಾಗಲು ಪ್ರಾರಂಭಿಸಿದೆ. ಹವಾಮಾನದಲ್ಲಿನ ಈ ಬದಲಾವಣೆಯು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲ, ಇದು ದೀರ್ಘಕಾಲದ ಹಲ್ಲು, ಗಂಟಲು ನೋವು ಮತ್ತು ಕೆರತಕ್ಕೆ (Sore Throat) ಕಾರಣವಾಗಬಹುದು ಅಥವಾ ಲೋಳೆ ಶೇಖರಣೆಯಾಗುವುದರಿಂದ ಎದೆ ನೋವು ಕೂಡ ಪ್ರಾರಂಭವಾಗಬಹುದು. ಈ ರೀತಿಯಾದಾಗ ಔಷಧಿಗಳ ಮೊರೆ ಹೋಗುವ ಬದಲು ಸುಲಭವಾಗಿ ಸಿಗುವ ಕೆಲವು ನೈಸರ್ಗಿಕ ವಸ್ತುಗಳನ್ನು ಔಷಧಿಯಂತೆ ಬಳಸಿಕೊಳ್ಳಬಹುದು ಇದು ಗಂಟಲು ನೋವನ್ನು ನಿವಾರಿಸುವುದಲ್ಲದೆ, ಕೆಮ್ಮು ಮತ್ತು ಶೀತದಿಂದ (Cold) ಪರಿಹಾರ ನೀಡುತ್ತವೆ.
ಲೈಕೋರೈಸ್
ಇದೊಂದು ಬೇರಾಗಿದ್ದು ಗಂಟಲು ನೋವು, ಸಂಗ್ರಹವಾದ ಕಫ ಮತ್ತು ಶೀತವನ್ನು ನಿವಾರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದನ್ನು ತುಪ್ಪ ಅಥವಾ ಜೇನುತುಪ್ಪದೊಂದಿಗೆ ತಿನ್ನಬಹುದು. ಹೆಚ್ಚುವರಿಯಾಗಿ, ಲೈಕೋರೈಸ್ ಸೇರಿಸಿ ಚಹಾ ಅಥವಾ ಕಷಾಯ ಮಾಡಿ ಕುಡಿಯಬಹುದು ಇದರಿಂದ ಗಮನಾರ್ಹ ಪರಿಹಾರ ಸಿಗುತ್ತದೆ.
ತುಳಸಿ ರಸ
ಸಾಮಾನ್ಯವಾಗಿ ತುಳಸಿ ಗಿಡ ಎಲ್ಲರ ಮನೆಯಲ್ಲಿಯೂ ಇದ್ದೆ ಇರುತ್ತದೆ. ಇದರ ರಸವನ್ನು ಕುಡಿಯುವುದರಿಂದ ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಇದನ್ನೂ ಓದಿ: ಪದೇ ಪದೇ ಒಣ ಕೆಮ್ಮು ಬರುವುದಕ್ಕೆ ಈ ಮನೆಮದ್ದನ್ನು ಪ್ರಯತ್ನಿಸಿ
ಶುಂಠಿ ಅಥವಾ ಒಣಗಿದ ಶುಂಠಿ
ಚಳಿಗಾಲದಲ್ಲಿ, ಬಹುತೇಕ ಎಲ್ಲರ ಮನೆಯಲ್ಲಿಯೂ ಶುಂಠಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದರಿಂದ ಚಹಾ ತಯಾರಿಸಿ ಕುಡಿಯುವುದೇ ಕೆಲವರಿಗೆ ಖುಷಿ ಕೊಡುತ್ತದೆ. ತಾಜಾ ಶುಂಠಿ ಲಭ್ಯವಿಲ್ಲದಿದ್ದರೆ, ಒಣಗಿದ ಶುಂಠಿಯನ್ನು ಸಹ ಬಳಸಬಹುದು. ನಿಮಗೆ ಹಲ್ಲುನೋವು ಇದ್ದರೆ, ನೀವು ಒಣಗಿದ ಶುಂಠಿಯ ಸಣ್ಣ ತುಂಡನ್ನು ಹಲ್ಲಿಗೆ ಒತ್ತಿ ಹಿಡಿದರೆ ಅದರ ರಸ ನಿಧಾನವಾಗಿ ಹಲ್ಲಿಗೆ ತಲುಪುತ್ತದೆ ಮತ್ತು ನಿಮಗೆ ಪರಿಹಾರ ಸಿಗುತ್ತದೆ. ಹೆಚ್ಚುವರಿಯಾಗಿ, ಪುಡಿಮಾಡಿದ ಶುಂಠಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವನೆ ಮಾಡುವುದು ಕೂಡ ಇಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಅರಿಶಿನ
ಹಲ್ಲುನೋವು ಅಥವಾ ಚಳಿಗಾಲದಲ್ಲಿ ಕಾಡುವ ಗಂಟಲು ನೋವಿನಿಂದ ಮುಕ್ತಿ ಪಡೆಯಲು, ತಾಜಾ ಅರಿಶಿನವನ್ನು ಸ್ವಲ್ಪ ಪುಡಿಮಾಡಿ, ಉಪ್ಪು ನೀರಿನೊಂದಿಗೆ ಬೆರೆಸಿ ಬಳಿಕ ನೀರನ್ನು ಫಿಲ್ಟರ್ ಮಾಡಿ, ದಿನಕ್ಕೆ ಎರಡರಿಂದ ಮೂರು ಬಾರಿ ಈ ನೀರಿನಿಂದ ಬಾಯಿ ಮುಕ್ಕಳಿಸಿ. ಇದು ಹಲ್ಲುನೋವು ಕಡಿಮೆ ಮಾಡುವುದಲ್ಲದೆ, ಬಾಯಿಯ ದುರ್ವಾಸನೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
