ಚುನಾವಣೆ ಯಾವಾಗಲು ಬೇಸಿಗೆಯಲ್ಲಿ ಬರುತ್ತದೆ ಹಾಗಾಗಿ ಬಿಸಿಲಿನಿಂದ ಆಗುವಂಥ ಎಲ್ಲ ತೊಂದರೆಗಳ ಮುಂಜಾಗ್ರತೆ ಇಟ್ಟುಕೊಳ್ಳುವುದು ಅವಶ್ಯ ಇದರಲ್ಲಿ ಮುಖ್ಯವಾಗಿ ನೀರು. ಸಾಧ್ಯವಾದಷ್ಟು ತಮ್ಮ ಮನೆಯಿಂದಲೇ ನೀರನ್ನು ತೆಗೆದುಕೊಂಡು ಹೋಗಿ . ಮೂಲಸ್ಥಳದಿಂದ ಹೊರಡುವಾಗ ಸಕ್ಕರೆ, ಉಪ್ಪು, ನೀರು ಸೇವಿಸಿ ಹೊರಡುವ ರೂಢಿ ಈಗಿಂದಲೇ ರೂಢಿಸಿ. ಹೆಚ್ಚಿನ ಉಪ್ಪು ಸೇವನೆ ಆರೋಗ್ಯಕ್ಕೆ ಉತ್ತಮ ಅಲ್ಲ ಆದರೆ ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಹಿಡಿದಿಟ್ಟುಕೊಳ್ಳಲು ಅವಶ್ಯಕ.
ಒಂದು ಲೀಟರ್ ನೀರಿಗೆ 20 ಗ್ರಾಂನಷ್ಟು ಹವೀಜ(ಕೊತ್ತಂಬರಿ ಬೀಜ,ಧನಿಯಾ) ಪುಡಿಯನ್ನು ಹಾಕಿ 15ರಿಂದ 20 ನಿಮಿಷಗಳವರೆಗೆ ಕುದಿಸಿ, ಅದಕ್ಕೆ 6 ಚಮಚ ಸಕ್ಕರೆ 2 ಚಮಚೆಯಷ್ಟು ಉಪ್ಪನ್ನು ಹಾಕಿ ಇದನ್ನ ಆಗಾಗ ಸೇವಿಸಬಹುದು. 3-4 ಬಾಟಲಿ ನೀರು ತೆಗೆದುಕೊಂಡು ಹೋಗುವುದು ತಪ್ಪಿಸಿ 2 ಲೀಟರ್ ನಿಂದ ಅವಶ್ಯಕತೆಯನ್ನು ಪೂರೈಸುವಂತೆ ಮಾಡುತ್ತದೆ. ಇದು ಮಾಡುವ ವಿಧಾನವನ್ನು ಯೂಟ್ಯೂಬ್ನಲ್ಲಿ ಡಾ ರವಿ ಪಟವರ್ಧನ್ ಓಆರೆಸ್ ಎಂದು ಹುಡುಕಿದಾಗ ಮಾಹಿತಿ ಲಭ್ಯವಿದೆ. ರಕ್ತದೊತ್ತಡವಿದ್ದವರು ,ಮಧುಮೇಹದ ರೋಗಿಗಳು ಅದರ ತಕ್ಕಹಾಗೆ ಸೂಕ್ತ ಜಾಗ್ರತೆಯನ್ನು ಯೋಚಿಸಿ ಈ ಮೇಲಿನ ಉಪಾಯಗಳನ್ನು ವೈದ್ಯರ ಸಲಹೆ ಮೇರೆಗೆ ಉಪಯೋಗಿಸಿ.
ಒಂದು ಉದಾಹರಣೆಯ ಘಟನೆ ಕೇಂದ್ರ ಸಚಿವರು ಒಂದು ಸಭೆಯಲ್ಲಿ ಮಾತನಾಡುತ್ತಲೇ ಕುಸಿದದ್ದು ಇದು ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಆದಂತಹ ಪರಿಣಾಮ. ಆಗ ಸಮಾರಂಭದಲ್ಲಿ ಇಟ್ಟಂತಹ ಒಣಹಣ್ಣು ಅವರಿಗೆ ನೀಡಲಾಯಿತು. ಇದು ಭಾರಿ ಪ್ರಮಾದಕ್ಕೆ ಕಾರಣವಾಗಬಹುದಾಗಿತ್ತು.ಇಂತಹ ಸಂದರ್ಭದಲ್ಲಿ ಸಕ್ಕರೆ ಪುಡಿ ನೀಡುವುದು ಸುರಕ್ಷಿತ.ಕಾರಣ ಒಂದಿಷ್ಟು ಸಕ್ಕರೆ ಪುಡಿ, ಉಪ್ಪು ಇಟ್ಟುಕೊಳ್ಳುವುದು ಇಂತಹ ಸಂದರ್ಭದಲ್ಲಿ ಉತ್ತಮ. ಇದನ್ನು ವಿಶೇಷವಾಗಿ ಈ ಗಣ್ಯ ವ್ಯಕ್ತಿಗಳ ಅಂಗರಕ್ಷಕರು ತಮ್ಮ ಕಿಸೆಯಲ್ಲಿಯೇ ಸಂಗ್ರಹಿಸಿ ಇಟ್ಟುಕೊಳ್ಳುವುದು ಅವಶ್ಯ. ಗಣ್ಯರಿಗೆ ಗಣ್ಯರಿಗೆ ಏನೇ ತೊಂದರೆ ತಾಪತ್ರೆಯ ಕಂಡರು ಮೊಟ್ಟ ಮೊದಲು ಗಲಿಬಿಲಿ ಕೊಳ್ಳುವವರು ಅಂಗರಕ್ಷಕ ಪಡೆಯ ಸಿಬ್ಬಂದಿ.
ತಮ್ಮ ಸಂಗ್ರಹದಲ್ಲಿ ಸ್ಪಟಿಕ ಅಂದರೆ ಪೊಟಾಷ್ ಆಲ್ಲಂ( alum) ಇರಲಿ. ನಿಯೋಜನೆ ಇರುವ ಸ್ಥಳದ ನೀರು ಮಣ್ಣುಯುಕ್ತ ವಾಗಿದ್ದರೆ ಈ ಸ್ಫಟಿಕದ ಬಳಕೆಯಿಂದ ನೀರು ಶುದ್ಧವಾಗುತ್ತದೆ.ಅಲ್ಲದೇ ಯಾವುದೇ ಕಾರಣಕ್ಕೆ ಗಾಯ ಆಗಿ ರಕ್ತಸ್ರಾವ ಆದರೆ ಈ ಸ್ಫಟಿಕದ ಸ್ವಲ್ಪ ಪುಡಿ ರಕ್ತಸ್ರಾವದ ಭಾಗಕ್ಕೆ ಹಾಕಿದರೆ ರಕ್ತಸ್ರಾವ ತಕ್ಷಣ ನಿಲ್ಲುತ್ತದೆ.
ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ