ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳೇನು?; ಇದನ್ನು ಆರಂಭದಲ್ಲೇ ಪತ್ತೆ ಹಚ್ಚುವುದು ಹೇಗೆ?

Prostate Cancer: ಪುರುಷರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಯ ಭಾಗವಾಗಿರುವ ಪ್ರಾಸ್ಟೇಟ್ ಗ್ರಂಥಿಯು ಸೆಮಿನಲ್ ದ್ರವವನ್ನು ಉತ್ಪಾದಿಸುವ ಸಣ್ಣ ಆಕ್ರೋಡು ಆಕಾರದ ಅಂಗವಾಗಿದೆ. ಇದು ವೀರ್ಯ ಉತ್ಪಾದನೆಗೆ ಅತ್ಯಗತ್ಯವಾದ ಅಂಶವಾಗಿದೆ. ಪ್ರಾಸ್ಟೇಟ್ ಗ್ರಂಥಿಯು ಅದರ ದ್ರವದ ಮೂಲಕ ವೀರ್ಯವನ್ನು ಉತ್ಪಾದಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್​ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಹೇಗೆ?

ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳೇನು?; ಇದನ್ನು ಆರಂಭದಲ್ಲೇ ಪತ್ತೆ ಹಚ್ಚುವುದು ಹೇಗೆ?
ಪ್ರಾಸ್ಟೇಟ್ ಕ್ಯಾನ್ಸರ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 29, 2024 | 11:57 AM

ಪ್ರಾಸ್ಟೇಟ್ ಕ್ಯಾನ್ಸರ್ (prostate cancer) prostate cancerprostate cancerಪುರುಷರಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವ ಕ್ಯಾನ್ಸರ್ ವಿಧವಾಗಿದೆ. ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಗುದನಾಳದಂತಹ ಹತ್ತಿರದ ಅಂಗಗಳಿಗೆ ಸುಲಭವಾಗಿ ಹರಡುತ್ತದೆ. ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಈ ಕ್ಯಾನ್ಸರ್​ಗೆ ಚಿಕಿತ್ಸೆ ನೀಡಲು ಕಷ್ಟವಾಗಬಹುದು. ಹಲವಾರು ಪುರುಷರು ಈ ಕ್ಯಾನ್ಸರ್​​ನ ಆರಂಭಿಕ ಚಿಹ್ನೆಗಳನ್ನು ನಿರ್ಲಕ್ಷಿಸುತ್ತಾರೆ.

ಪ್ರಾಸ್ಟೇಟ್ ಮೂತ್ರಕೋಶದ ಕೆಳಗೆ (ಮೂತ್ರವನ್ನು ಸಂಗ್ರಹಿಸುವ ಟೊಳ್ಳಾದ ಅಂಗ) ಮತ್ತು ಗುದನಾಳದ ಮುಂಭಾಗದಲ್ಲಿ ಕಾಣಿಸಿಕೊಳ್ಳುವ ಒಂದು ಅಂಗ. ಪ್ರಾಸ್ಟೇಟ್ ಹಿಂಭಾಗದಲ್ಲಿ ಸೆಮಿನಲ್ ವೆಸಿಕಲ್ಸ್ ಎಂದು ಕರೆಯಲ್ಪಡುವ ಗ್ರಂಥಿಗಳಿವೆ. ಇದು ಮೂತ್ರ ಮತ್ತು ವೀರ್ಯವನ್ನು ದೇಹದಿಂದ ಶಿಶ್ನದ ಮೂಲಕ ಹೊರಹಾಕುತ್ತದೆ. ಇದು ಪ್ರಾಸ್ಟೇಟ್ ಕೇಂದ್ರದ ಮೂಲಕ ಸಾಗುತ್ತದೆ. ಪ್ರಾಸ್ಟೇಟ್ ಮನುಷ್ಯನಿಗೆ ವಯಸ್ಸಾದಂತೆ ಬೆಳೆಯುತ್ತಾ ಹೋಗುತ್ತದೆ. ಕಿರಿಯ ವಯಸ್ಸಿನ ಪುರುಷರಲ್ಲಿ ಇದು ಆಕ್ರೋಡು ಗಾತ್ರದಲ್ಲಿರುತ್ತದೆ. ವಯಸ್ಸಾದ ಪುರುಷರಲ್ಲಿ ಇದು ಹೆಚ್ಚು ದೊಡ್ಡದಾಗಿರುತ್ತದೆ.

ಪ್ರಾಸ್ಟೇಟ್ ಕ್ಯಾನ್ಸರ್​​ನ ಎಚ್ಚರಿಕೆಯ ಚಿಹ್ನೆಗಳು, ಚಿಕಿತ್ಸೆಗಳು ಮತ್ತು ಪರಿಣಾಮಕಾರಿಯಾಗಿ ಈ ಕ್ಯಾನ್ಸರ್ ಅನ್ನು ತಡೆಗಟ್ಟುವ ಆಯ್ಕೆಗಳ ಬಗ್ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಮೂತ್ರಶಾಸ್ತ್ರ, ಆಂಡ್ರಾಲಜಿ, ರೋಬೋಟಿಕ್ ಶಸ್ತ್ರಚಿಕಿತ್ಸೆ ತಜ್ಞ ಡಾ. ಮೊಹಮ್ಮದ್ ಶಾಹಿದ್ ಅಲಿ ಇಂಡಿಯನ್ ಎಕ್ಸ್​ಪ್ರೆಸ್​ಗೆ ನೀಡಿರುವ ಮಾಹಿತಿ ಇಲ್ಲಿದೆ.

ಪ್ರಾಸ್ಟೇಟ್ ಕ್ಯಾನ್ಸರ್​ನ ಆರಂಭಿಕ ಲಕ್ಷಣಗಳು:

ಪ್ರಾಸ್ಟೇಟ್ ಕ್ಯಾನ್ಸರ್, ಭಾರತೀಯ ಪುರುಷರಲ್ಲಿ ಕಾಣಿಸಿಕೊಳ್ಳುತ್ತಿರುವ ಮುಖ್ಯವಾದ 5 ಕ್ಯಾನ್ಸರ್‌ಗಳಲ್ಲಿ ಸ್ಥಾನ ಪಡೆದಿದೆ ಎಂದು ಡಾ. ಅಲಿ ಹೇಳುತ್ತಾರೆ. ಅವರ ಪ್ರಕಾರ, ಪಾಶ್ಚಿಮಾತ್ಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ಆಹಾರಕ್ರಮದ ಬದಲಾವಣೆಗಳು ಮತ್ತು ಸುಧಾರಿತ ರೋಗನಿರ್ಣಯ ವಿಧಾನಗಳಂತಹ ವಿವಿಧ ಅಂಶಗಳಿಂದಾಗಿ ಭಾರತವು ಪ್ರಾಸ್ಟೇಟ್ ಕ್ಯಾನ್ಸರ್ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Lymphoma Symptoms: ಈ ಲಕ್ಷಣಗಳು ರಕ್ತದ ಕ್ಯಾನ್ಸರ್​ ಆಗಿರಬಹುದು ಎಚ್ಚರ!

ಆರಂಭಿಕ ಗುರುತಿಸುವಿಕೆ ಮತ್ತು ಸಮಯೋಚಿತ ಚಿಕಿತ್ಸೆಯು ಅಂತಹ ರೋಗಿಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಆರಂಭಿಕ ಹಂತಗಳಲ್ಲಿ ಇದು ಸಂಪೂರ್ಣವಾಗಿ ಲಕ್ಷಣರಹಿತವಾಗಿರಬಹುದು. ಆದರೆ ಕೆಲವು ಸಂದರ್ಭಗಳಲ್ಲಿ ಇದು ಮೂತ್ರದ ಸಮಸ್ಯೆಗಳೊಂದಿಗೆ ಕಾಣಿಸಿಕೊಳ್ಳಬಹುದು.

– ಮೂತ್ರ ಕಡಿಮೆಯಾಗುವುದು

– ಮೂತ್ರ ವಿಸರ್ಜಿಸಲು ಅರ್ಜೆಂಟ್ ಆಗುವುದು

– ಮೂತ್ರ ವಿಸರ್ಜಿಸುವಾಗ ನೋವು

– ಮೂತ್ರದಲ್ಲಿ ರಕ್ತ

– ಸರಿಯಾಗಿ ಮಲವಿಸರ್ಜನೆ ಆಗದಿರುವುದು, ಮಲ ವಿಸರ್ಜಿಸುವಾಗ ಕಿರಿಕಿರಿ ಉಂಟಾಗುವುದು.

– ಲೈಂಗಿಕ ಕ್ರಿಯೆ ನಡೆಸುವಾಗ ನೋವಿನ ಸ್ಖಲನ ಮತ್ತು ನಿಮಿರುವಿಕೆಯ ತೊಂದರೆ.

– ವೀರ್ಯದಲ್ಲಿ ರಕ್ತ ಅಥವಾ ಮೂತ್ರ ವಿಸರ್ಜನೆ.

– ನಿಮ್ಮ ಬೆನ್ನು, ಸೊಂಟ ಅಥವಾ ಎದೆಯಲ್ಲಿ ನೋವು.

– ಮೂಳೆ ನೋವು

– ವಿಪರೀತ ತೂಕ ಇಳಿಕೆ

– ಅತಿಯಾದ ಆಯಾಸ

ಪ್ರಾಸ್ಟೇಟ್ ಕ್ಯಾನ್ಸರ್​ನ ಕೊನೆಯ ಹಂತಗಳಲ್ಲಿ ರೋಗಿಗಳು ಸಾಮಾನ್ಯವಾಗಿ ಕಾಲಿನ ಊತ (ಲೆಗ್ ಎಡಿಮಾ) ಅಥವಾ ಮೂಳೆಗಳ ನೋವನ್ನು ಅನುಭವಿಸುತ್ತಾರೆ. ಇದು ಮೂಳೆಗಳು, ದುಗ್ಧರಸ ಗ್ರಂಥಿಗಳು ಮತ್ತು ಇತರ ಅಂಗಗಳು ಸೇರಿದಂತೆ ಹತ್ತಿರದ ಅಂಗಾಂಶಗಳು ಮತ್ತು ಅಂಗಗಳಿಗೆ ಹರಡಿರುವುದನ್ನು ಸೂಚಿಸುತ್ತದೆ.

ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಹಚ್ಚಲು ಸ್ಕ್ರೀನಿಂಗ್ ಪರೀಕ್ಷೆಗಳು:

ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಸಾಮಾನ್ಯವಾಗಿ ಎರಡು ರೀತಿಯ ಸ್ಕ್ರೀನಿಂಗ್ ಪರೀಕ್ಷೆಗಳನ್ನು ಬಳಸಲಾಗುತ್ತದೆ. ಈ ಪರೀಕ್ಷೆಗಳು ನಿರ್ಣಾಯಕವಲ್ಲ. ಏಕೆಂದರೆ ಅವುಗಳು ತಪ್ಪು ಧನಾತ್ಮಕ ಅಥವಾ ಋಣಾತ್ಮಕತೆಗೆ ಕಾರಣವಾಗಬಹುದು. ಈ ಕ್ಯಾನ್ಸರ್ ಇರುವ ಅನುಮಾನವಿದ್ದರೆ ಈ ಕೆಳಗಿನ ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ವೈದ್ಯರು ಹೇಳುತ್ತಾರೆ.

ಪ್ರಾಸ್ಟೇಟ್-ನಿರ್ದಿಷ್ಟ ಪ್ರತಿಜನಕ (PSA) ಪರೀಕ್ಷೆ:

ಈ ಪರೀಕ್ಷೆಯು ರಕ್ತದಲ್ಲಿನ ಪಿಎಸ್ಎ ಮಟ್ಟವನ್ನು ಅಳೆಯುತ್ತದೆ. ಎಲಿವೇಟೆಡ್ ಪಿಎಸ್ಎ ಮಟ್ಟಗಳು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಸೂಚಿಸುತ್ತದೆ.

ಡಿಜಿಟಲ್ ಗುದನಾಳದ ಪರೀಕ್ಷೆ (DRE):

ಇದು ಗಡ್ಡೆಗಳಂತಹ ಅಸಹಜತೆಗಳನ್ನು ಪತ್ತೆಹಚ್ಚಲು ಗುದನಾಳದ ಮೂಲಕ ಪ್ರಾಸ್ಟೇಟ್​ನ ದೈಹಿಕ ಪರೀಕ್ಷೆಯನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಪುರುಷರಂತೆ ಮಹಿಳೆಯರಿಗೂ ಪ್ರಾಸ್ಟೇಟ್​ ಕ್ಯಾನ್ಸರ್​ ಬರುತ್ತದಾ?

ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಜೀವನಶೈಲಿಯ ಬದಲಾವಣೆಗಳು ಮತ್ತು ತಡೆಗಟ್ಟುವ ಕ್ರಮಗಳು:

ಈ ಗಂಭೀರ ಕಾಯಿಲೆಯನ್ನು ಅನುಭವಿಸುವ ಅಪಾಯವನ್ನು ಕಡಿಮೆ ಮಾಡಲು ಪುರುಷರು ತಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅವುಗಳೆಂದರೆ,

ಆರೋಗ್ಯಕರ ಆಹಾರ:

ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು. ಕಡಿಮೆ ಕೆಂಪು ಮಾಂಸ ಮತ್ತು ಹೆಚ್ಚಿನ ಕೊಬ್ಬಿನ ಡೈರಿ ಉತ್ಪನ್ನಗಳು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಯಮಿತ ವ್ಯಾಯಾಮ:

ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯಕರ ತೂಕ:

ಆಹಾರ ಮತ್ತು ವ್ಯಾಯಾಮದ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಸ್ಥೂಲಕಾಯತೆಯು ಆಕ್ರಮಣಕಾರಿ ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅವಕಾಶದೊಂದಿಗೆ ಸಂಬಂಧಿಸಿದೆ.‘

ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ:

ಅತಿಯಾದ ಆಲ್ಕೋಹಾಲ್ ಸೇವನೆಯು ಪ್ರಾಸ್ಟೇಟ್ ಕ್ಯಾನ್ಸರ್​ಗೆ ತಿಳಿದಿರುವ ಅಪಾಯಕಾರಿ ಅಂಶವಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್