Lymphoma Symptoms: ಈ ಲಕ್ಷಣಗಳು ರಕ್ತದ ಕ್ಯಾನ್ಸರ್​ ಆಗಿರಬಹುದು ಎಚ್ಚರ!

ರಕ್ತದ ಕ್ಯಾನ್ಸರ್ ನಿಮ್ಮ ರಕ್ತ ಕಣಗಳ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಲ್ಯುಕೇಮಿಯಾ, ಲಿಂಫೋಮಾ ಮತ್ತು ಮೈಲೋಮಾ ರಕ್ತದ ಕ್ಯಾನ್ಸರ್​ನ ಕೆಲವು ಸಾಮಾನ್ಯ ವಿಧಗಳಾಗಿವೆ. ರಕ್ತದ ಕ್ಯಾನ್ಸರ್ ರಕ್ತ ಕಣಗಳೊಳಗಿನ ಡಿಎನ್‌ಎಯಲ್ಲಿನ ಬದಲಾವಣೆಗಳಿಂದ ಉಂಟಾಗುತ್ತದೆ. ಇದು ರಕ್ತ ಕಣಗಳು ಅಸಹಜವಾಗಿ ವರ್ತಿಸಲು ಪ್ರಾರಂಭಿಸುತ್ತದೆ. ಕೆಲವು ರೀತಿಯ ರಕ್ತದ ಕ್ಯಾನ್ಸರ್ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಮತ್ತು ವಯಸ್ಕರಲ್ಲಿ ರೋಗಲಕ್ಷಣಗಳು ಮತ್ತು ಚಿಕಿತ್ಸೆಯು ವಿಭಿನ್ನವಾಗಿರಬಹುದು.

Lymphoma Symptoms: ಈ ಲಕ್ಷಣಗಳು ರಕ್ತದ ಕ್ಯಾನ್ಸರ್​ ಆಗಿರಬಹುದು ಎಚ್ಚರ!
ಕ್ಯಾನ್ಸರ್Image Credit source: iStock
Follow us
|

Updated on: Mar 27, 2024 | 5:39 PM

ಇಂಗ್ಲೆಂಡ್​ನಲ್ಲಿ ಪ್ರತಿ ವರ್ಷ 40,000ಕ್ಕೂ ಹೆಚ್ಚು ಜನರು ರಕ್ತದ ಕ್ಯಾನ್ಸರ್‌ನಿಂದ (Blood Cancer) ಬಳಲುತ್ತಿದ್ದಾರೆ. 2,50,000ಕ್ಕೂ ಹೆಚ್ಚು ಜನರು ಪ್ರಸ್ತುತ ರಕ್ತದ ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗಿದ್ದಾರೆ. ಅತಿಯಾದ ತೂಕ ಇಳಿಕೆ, ವಿಪರೀತ ರಕ್ತಸ್ರಾವ, ಗೆಡ್ಡೆಗಳು, ಉಸಿರಾಟದ ತೊಂದರೆ, ರಾತ್ರಿ ಬೆವರುವಿಕೆ, ತೀವ್ರವಾದ ಸೋಂಕುಗಳು, ನಿಮ್ಮ ಮೂಳೆಗಳು, ಕೀಲುಗಳು ಅಥವಾ ಹೊಟ್ಟೆಯಲ್ಲಿ ನೋವು, ಅತಿಯಾದ ಜ್ವರ, ಅತಿಯಾದ ಆಯಾಸ ರಕ್ತದ ಕ್ಯಾನ್ಸರ್​ನ ಕೆಲವು ಮುಖ್ಯ ಲಕ್ಷಣಗಳಾಗಿವೆ.

ಲಿಂಫೋಮಾ ಅಥವಾ ರಕ್ತದ ಕ್ಯಾನ್ಸರ್ ಎಂಬುದು ದುಗ್ಧರಸ ವ್ಯವಸ್ಥೆಯಲ್ಲಿ ಸಂಭವಿಸುವ ಕ್ಯಾನ್ಸರ್​ನ ಒಂದು ರೂಪವಾಗಿದೆ. ದುಗ್ಧರಸ ವ್ಯವಸ್ಥೆಯು ದೇಹದ ಪ್ರತಿರಕ್ಷಣಾ ರಕ್ಷಣೆಯ ಪ್ರಮುಖ ಭಾಗವಾಗಿದೆ. ದುಗ್ಧರಸ ಗ್ರಂಥಿಗಳು, ದುಗ್ಧರಸ ನಾಳಗಳು ಮತ್ತು ಗುಲ್ಮ ಮತ್ತು ಥೈಮಸ್‌ನಂತಹ ಅಂಗಗಳು ದುಗ್ಧರಸವನ್ನು ಸಾಗಿಸುವುದರ ಜೊತೆಗೆ ದೇಹದಿಂದ ವಿಷ, ತ್ಯಾಜ್ಯ ಮತ್ತು ಇತರ ಅನಗತ್ಯ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸೋಂಕಿನ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳನ್ನು ಹೊಂದಿರುವ ದ್ರವ ಇದಾಗಿದೆ.

ಇದನ್ನೂ ಓದಿ: ಕ್ಯಾನ್ಸರ್ ಅಪಾಯಕ್ಕೂ ಕ್ಯಾಲ್ಸಿಯಂ, ವಿಟಮಿನ್ ಡಿ ಸಪ್ಲಿಮೆಂಟ್​ಗೂ ಏನು ಸಂಬಂಧ?

ಲಿಂಫೋಸೈಟ್‌ಗಳ ಅಸಹಜ ಬೆಳವಣಿಗೆಯಾದಾಗ ಲಿಂಫೋಮಾ ಪ್ರಾರಂಭವಾಗುತ್ತದೆ. ಈ ಬೆಳವಣಿಗೆಯು ದುಗ್ಧರಸ ಗ್ರಂಥಿಗಳು, ಗುಲ್ಮ, ಮೂಳೆ ಮಜ್ಜೆ ಅಥವಾ ಇತರ ದುಗ್ಧರಸ ಅಂಗಾಂಶಗಳಲ್ಲಿ ಸಂಭವಿಸಬಹುದು. ಲಿಂಫೋಮಾದ ಆರಂಭಿಕ ರೋಗನಿರ್ಣಯವು ಮುಖ್ಯವಾಗಿದೆ. ಆರಂಭಿಕ ಹಂತದಲ್ಲಿ ಲಿಂಫೋಮಾ ಪತ್ತೆಯಾದಾಗ ಆ ರೋಗವು ಹೆಚ್ಚು ಹರಡುವುದಿಲ್ಲ, ಇದರಿಂದ ಚಿಕಿತ್ಸೆ ನೀಡಲು ಸುಲಭವಾಗುತ್ತದೆ.

ಲಿಂಫೋಮಾ ರಕ್ತ ಕ್ಯಾನ್ಸರ್ ಲಕ್ಷಣಗಳು:

ಊದಿಕೊಂಡ ದುಗ್ಧರಸ ಗ್ರಂಥಿಗಳು:

ನೋವು ರಹಿತ ಊದಿಕೊಂಡ ದುಗ್ಧರಸ ಗ್ರಂಥಿಗಳು, ವಿಶೇಷವಾಗಿ ಕುತ್ತಿಗೆ, ಆರ್ಮ್ಪಿಟ್​ಗಳು ಅಥವಾ ತೊಡೆಸಂದು. ಸಾಮಾನ್ಯ ಸೋಂಕುಗಳೊಂದಿಗೆ ಸಂಭವಿಸುವ ಊತದಂತೆ, ಇವುಗಳು ನಿರಂತರವಾಗಿರುತ್ತವೆ ಮತ್ತು ಸಾಂಪ್ರದಾಯಿಕ ಚಿಕಿತ್ಸೆಗಳನ್ನು ನೀಡಿದರೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ.

ಅತಿಯಾದ ತೂಕ ಇಳಿಕೆ:

ಆಹಾರ ಅಥವಾ ವ್ಯಾಯಾಮದ ದಿನಚರಿಯಲ್ಲಿ ಬದಲಾವಣೆಗಳಿಲ್ಲದೆ ಗಮನಾರ್ಹವಾದ ತೂಕ ಇಳಿಕೆ ಲಿಂಫೋಮಾದ ಆರಂಭಿಕ ಸೂಚಕವಾಗಿದೆ. ದೇಹದ ಸಂಪನ್ಮೂಲಗಳನ್ನು ಕ್ಯಾನ್ಸರ್ ವಿರುದ್ಧ ಹೋರಾಡುವ ಕಡೆಗೆ ತಿರುಗಿಸುವುದರಿಂದ ಇದು ಸಂಭವಿಸುತ್ತದೆ. ಇದು ನಿಮ್ಮ ದೈನಂದಿನ ಚಯಾಪಚಯ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಅಂತಿಮವಾಗಿ ತೂಕ ಇಳಿಕೆಗೆ ಕಾರಣವಾಗುತ್ತದೆ.

ನಿರಂತರ ಆಯಾಸ:

ಲಿಂಫೋಮಾಕ್ಕೆ ಸಂಬಂಧಿಸಿದ ಆಯಾಸವು ವಿಶ್ರಾಂತಿ ಪಡೆದ ಕೂಡಲೆ ಹೋಗುವುದಿಲ್ಲ. ದೇಹದ ರಕ್ತ ಕಣಗಳು ಮತ್ತು ಅದರ ಶಕ್ತಿಯ ಮೂಲಗಳ ಮೇಲೆ ಕ್ಯಾನ್ಸರ್ ಕೋಶಗಳ ಪ್ರಭಾವದಿಂದಾಗಿ ಈ ರೀತಿಯ ದಣಿವು ಸಂಭವಿಸುತ್ತದೆ.

ಇದನ್ನೂ ಓದಿ: ನುಂಗಲು ಕಷ್ಟವಾಗುತ್ತಿದ್ದರೆ ನಿರ್ಲಕ್ಷ್ಯ ಬೇಡ; ಕ್ಯಾನ್ಸರ್ ಲಕ್ಷಣವೂ ಇದ್ದೀತು ಜೋಪಾನ!

ರಾತ್ರಿ ಬೆವರುವಿಕೆ:

ರಾತ್ರಿಯ ಸಮಯದಲ್ಲಿ ಅತಿಯಾದ ಬೆವರುವಿಕೆ ಇದು ಅತಿಯಾಗಿ ಬಿಸಿಯಾದ ಕೋಣೆಯಿಂದ ಉಂಟಾಗುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡಲು ದೇಹದ ಪ್ರಯತ್ನದಿಂದಾಗಿ ಈ ಬೆವರುವಿಕೆಗಳು ಸಂಭವಿಸುತ್ತವೆ.

ತುರಿಕೆ ಮತ್ತು ಚರ್ಮದ ದದ್ದು:

ವಿವರಿಸಲಾಗದ ತುರಿಕೆ ಅಥವಾ ದದ್ದು ಕಾಣಿಸಿಕೊಳ್ಳುವುದು ಲಿಂಫೋಮಾದ ಸೂಕ್ಷ್ಮ ಲಕ್ಷಣವಾಗಿರಬಹುದು. ಕೆಲವು ಸಂದರ್ಭಗಳಲ್ಲಿ ಲಿಂಫೋಮಾವು ಚರ್ಮದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ತುರಿಕೆ, ದದ್ದುಗಳು ಅಥವಾ ಸ್ಪಷ್ಟವಾದ ಕಾರಣವಿಲ್ಲದೆ ಚರ್ಮದ ನೋಟದಲ್ಲಿ ಹೆಚ್ಚು ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗುತ್ತದೆ.

ಉಸಿರಾಟದ ತೊಂದರೆ ಅಥವಾ ಕೆಮ್ಮು:

ಎದೆಯ ಪ್ರದೇಶದಲ್ಲಿ ಲಿಂಫೋಮಾ ಕ್ಯಾನ್ಸರ್ ಬೆಳವಣಿಗೆಯಾದರೆ ಅದು ಶ್ವಾಸನಾಳ ಅಥವಾ ಇತರ ಭಾಗಗಳಲ್ಲಿ ಒತ್ತಡವನ್ನು ಉಂಟುಮಾಡಬಹುದು. ಇದು ಕೆಮ್ಮುವಿಕೆ ಅಥವಾ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ