ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸವಿದ್ದರೆ ಈ ಸಲಹೆಯನ್ನು ಪಾಲನೆ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 21, 2025 | 8:42 AM

ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಕೂಡ ಹೇಳುತ್ತಾರೆ. ಆದರೆ ಅತಿಯಾದರೆ ಅಮೃತವೂ ವಿಷವಾಗುವುದರಿಂದ ಇತಿಮಿತಿಯಲ್ಲಿದ್ದರೆ ಬಹಳ ಒಳ್ಳೆಯದು. ಅದಲ್ಲದೆ ಬೆಳಿಗ್ಗೆ ಬಿಸಿನೀರು ಕುಡಿಯುವುದು ಕೆಲವು ಆರೋಗ್ಯ ಸಮಸ್ಯೆಯನ್ನು ಉಲ್ಭಣ ಗೊಳಿಸಬಹುದು ಹಾಗಾಗಿ ತಜ್ಞರ ಸಲಹೆ ಪಡೆದುಕೊಂಡ ಬಳಿಕ ಈ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಬಹಳ ಒಳ್ಳೆಯದು. ಹಾಗಾದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದನ್ನು ಯಾರು ತಪ್ಪಿಸಬೇಕು? ಯಾವ ರೀತಿಯ ಆರೋಗ್ಯ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸವಿದ್ದರೆ ಈ ಸಲಹೆಯನ್ನು ಪಾಲನೆ ಮಾಡಿ
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯ (Health) ಕಾಪಾಡಿಕೊಳ್ಳಲು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಹೆಚ್ಚಿನ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಈ ಅಭ್ಯಾಸ ತೂಕ ಇಳಿಸಿಕೊಳ್ಳಲು ಮತ್ತು ಮುಂಜಾನೆ ಹೊಟ್ಟೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು (Hot Water) ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಕೂಡ ಹೇಳುತ್ತಾರೆ. ಆದರೆ ಅತಿಯಾದರೆ ಅಮೃತವೂ ವಿಷವಾಗುವುದರಿಂದ ಇತಿಮಿತಿಯಲ್ಲಿದ್ದರೆ ಬಹಳ ಒಳ್ಳೆಯದು. ಅದಲ್ಲದೆ ಬೆಳಿಗ್ಗೆ ಬಿಸಿನೀರು ಕುಡಿಯುವುದು ಕೆಲವು ಆರೋಗ್ಯ ಸಮಸ್ಯೆಯನ್ನು ಉಲ್ಭಣ ಗೊಳಿಸಬಹುದು ಹಾಗಾಗಿ ತಜ್ಞರ ಸಲಹೆ ಪಡೆದುಕೊಂಡ ಬಳಿಕ ಈ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಬಹಳ ಒಳ್ಳೆಯದು. ಹಾಗಾದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದನ್ನು ಯಾರು ತಪ್ಪಿಸಬೇಕು? ಯಾವ ರೀತಿಯ ಆರೋಗ್ಯ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಈ ಆರೋಗ್ಯ ಸಮಸ್ಯೆ ಇದ್ದರೆ ಬೆಳಿಗ್ಗೆ ಬಿಸಿನೀರು ಕುಡಿಯಬೇಡಿ:

  • ಹೊಟ್ಟೆ ಹುಣ್ಣು: ಹೊಟ್ಟೆ ಹುಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು, ತಪ್ಪಿಯೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯಬಾರದು, ಇದು ಹಾನಿಕಾರಕ. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಹೆಚ್ಚುವರಿ ಆಮ್ಲದ ರಚನೆಯಾಗಿ, ಹೊಟ್ಟೆ ಮತ್ತು ಕರುಳಿನ ಒಳ ಗೋಡೆಯ ಮೇಲೆ ಗಾಯ ಉಂಟಾಗುವುದನ್ನು ಹುಣ್ಣು ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ, ಬಿಸಿನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಮತ್ತು ನೋವು ಉಂಟಾಗಬಹುದು. ಅಲ್ಲದೆ, ಬಿಸಿನೀರು ಹೊಟ್ಟೆಯಲ್ಲಿರುವ ಆಮ್ಲದೊಂದಿಗೆ ವರ್ತಿಸುತ್ತದೆ, ಇದು ಊತ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಜೊತೆಗೆ ನೋವನ್ನು ಮತ್ತಷ್ಟು ಹೆಚ್ಚಿಸುತ್ತದೆ ಹಾಗಾಗಿ ಈ ರೀತಿಯ ಅಭ್ಯಾಸ ಹೊಟ್ಟೆ ಹುಣ್ಣು ಇರುವವರಿಗೆ ಒಳ್ಳೆಯದಲ್ಲ.
  • ಗ್ಯಾಸ್ಟ್ರೋಎಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ (GERD): ಹೊಟ್ಟೆಯಲ್ಲಿರುವ ಆಮ್ಲವು ಅನ್ನನಾಳಕ್ಕೆ ಮತ್ತೆ ಹರಿಯುವ ಸಮಸ್ಯೆ. ಇದು ಹೊಟ್ಟೆಯಲ್ಲಿ ಕಿರಿಕಿರಿಗೆ ಕಾರಣವಾಗಬಹುದು. ಬಿಸಿನೀರು ಕುಡಿಯುವುದರಿಂದ ಅನ್ನನಾಳಕ್ಕೆ ಹೊಟ್ಟೆಯ ಆಮ್ಲದ ರಿಫ್ಲಕ್ಸ್ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇದು ಕೆಲವೊಮ್ಮೆ ನೋವನ್ನು ಉಂಟುಮಾಡಬಹುದು. ಅದಲ್ಲದೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದರಿಂದ ಆಸಿಡ್ ರಿಫ್ಲಕ್ಸ್ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.
  • ಅತಿಸಾರ: ಸಾಮಾನ್ಯವಾಗಿ ಅತಿಸಾರ ಉಂಟಾದಾಗ, ಹೊಟ್ಟೆ ಮತ್ತು ಕರುಳಿನಲ್ಲಿ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ. ಇದು ಅತಿಸಾರದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಬಿಸಿನೀರು ಕುಡಿಯುವುದರಿಂದ ದೇಹದ ಚಯಾಪಚಯ ಮತ್ತು ಕರುಳಿನ ಚಲನೆಯನ್ನು ವೇಗಗೊಳಿಸುವುದರಿಂದ ಇದು ಅತಿಸಾರದ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.
  • ಬೇಸಿಗೆಯಲ್ಲಿ ಹೆಚ್ಚಾಗುವ ದೇಹದ ಉಷ್ಣತೆ: ಬಿಸಿನೀರು ಕುಡಿಯುವುದರಿಂದ ದೇಹದೊಳಗಿನ ಶಾಖ ಹೆಚ್ಚಾಗುತ್ತದೆ. ನೀವು ಈಗಾಗಲೇ ಅತಿಯಾದ ಶಾಖದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಬಿಸಿನೀರು ಕುಡಿಯುವುದರಿಂದ ಸಮಸ್ಯೆ ಇನ್ನಷ್ಟು ಹದಗೆಡುತ್ತದೆ. ಬಿಸಿನೀರು ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು ಆಯಾಸ, ತಲೆನೋವು ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು..
  • ಮೂತ್ರಪಿಂಡದ ಕಲ್ಲುಗಳು: ದೇಹದಲ್ಲಿನ ಖನಿಜಗಳು ಒಂದೇ ಸ್ಥಳದಲ್ಲಿ ಸಂಗ್ರಹಗೊಂಡು ಘನವಸ್ತುಗಳಾಗಿ ಮಾರ್ಪಟ್ಟಾಗ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುತ್ತವೆ. ಈ ಪರಿಸ್ಥಿತಿಯಲ್ಲಿ ಬಿಸಿನೀರು ಕುಡಿಯುವುದರಿಂದ ದೇಹದಲ್ಲಿ ಖನಿಜ ಅಸಮತೋಲನ ಉಂಟಾಗುತ್ತದೆ. ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರು ಬಿಸಿನೀರನ್ನು ಅತಿಯಾಗಿ ಕುಡಿಯುವುದರಿಂದ ಉರಿಯೂತ ಅಥವಾ ನೋವು ಹೆಚ್ಚಾಗಬಹುದು. ಜೊತೆಗೆ ಕಲ್ಲು ದೊಡ್ಡದಾಗುವ ಅಪಾಯವೂ ಇದೆ ಎಂದು ಹೇಳಲಾಗುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
ಕರಬೂಜ ಹಣ್ಣನ್ನು ಈ ಆರೋಗ್ಯ ಸಮಸ್ಯೆಗಳಿರುವವರು ಸೇವನೆ ಮಾಡಬೇಡಿ
ಬೇಸಿಗೆಯಲ್ಲಿ ಸಿಗುವ ಈ ಹಣ್ಣನ್ನು ತಪ್ಪದೆ ಸೇವನೆ ಮಾಡಿ
ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಸೇವನೆ ಅಪಾಯಕಾರಿ! ಅಧ್ಯಯನದಿಂದ ಬಹಿರಂಗ
ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಅವರ ಆಹಾರ ಹೇಗಿತ್ತು ಗೊತ್ತಾ?