AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Joint Pain: ವಯಸ್ಸಲ್ಲ, ಕೀಲುನೋವು, ಮಂಡಿನೋವಿಗೆ ಕಾರಣವೇ ನಮ್ಮ ಈ ಅಭ್ಯಾಸಗಳು

ವಯಸ್ಸಾಗುತ್ತಾ ಹೋದಂತೆ ಅದರಲ್ಲೂ 40-45 ವರ್ಷಗಳ ಬಳಿಕ ಹೆಚ್ಚಿನವರಲ್ಲಿ ಮಂಡಿನೋವು, ಕೀಲು ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಮೂಳೆ ಸವೆತದ ಕಾರಣ, ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಮಂಡಿ ನೋವು ಕಾಣಿಸುತ್ತದೆ. ಇದೆಲ್ಲಾ ವಯಸ್ಸಾಗುವಾಗ ಸಾಮಾನ್ಯವಾಗಿ ಇದ್ದಿದ್ದೆ ಎಂದು ಇದನ್ನು ಕಡೆಗಣಿಸುತ್ತಾರೆ. ಆದ್ರೆ ಮಂಡಿ ನೋವು ವಯಸ್ಸಲ್ಲವಂತೆ, ನಮ್ಮ ಈ ಕೆಲವೊಂದು ತಪ್ಪು ಅಭ್ಯಾಸಗಳೇ ಕಾರಣವಂತೆ. ಹಾಗಿದ್ರೆ ಕೀಲು ನೋವು ಉಂಟಾಗಲು ಕಾರಣವೇನು, ಅದನ್ನು ಯಾವ ರೀತಿ ತಡೆಗಟ್ಟಬಹುದು ಎಂಬುದನ್ನು ತಿಳಿಯಿರಿ.

Joint Pain: ವಯಸ್ಸಲ್ಲ, ಕೀಲುನೋವು, ಮಂಡಿನೋವಿಗೆ ಕಾರಣವೇ ನಮ್ಮ ಈ ಅಭ್ಯಾಸಗಳು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on:Jun 18, 2025 | 5:48 PM

Share

ವಯಸ್ಸಾದವರಲ್ಲಿ ಕೀಲು ನೋವು (Joint Pain), ಮಂಡಿ ನೋವಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇಂದಿನ ದಿನಗಳಲ್ಲಿ ವಯಸ್ಸಾದವರಲ್ಲಿ ಮಾತ್ರವಲ್ಲ ಸಣ್ಣ ವಯಸ್ಸಿನವರಲ್ಲೂ ಹೆಚ್ಚಾಗಿ ಕಂಡು ಬರುತ್ತಿದೆ. ವಯಸ್ಸಾದಾಗ ಮಂಡಿನೋವು , ಕೀಲು ನೋವು ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ ಅಂತ ಹೇಳ್ತಾರೆ. ಆದ್ರೆ ಇದರ ನೋವು ಮಾತ್ರ ದೀರ್ಘ ಕಾಲದವರೆಗೆ ಇರುತ್ತದೆ. ಮೂಳೆಗಳ ಸಾಂದ್ರತೆ (Bone Density) ಕಡಿಮೆಯಾಗಿ, ದೇಹದಲ್ಲಿ ಕ್ಯಾಲ್ಸಿಯಂ ಅಥವಾ ಕಬ್ಬಿಣದ ಅಂಶ ಕಡಿಮೆಯಾಗಿ, ಮೂಳೆ ಸವೆತದ ಕಾರಣಗಳಿಂದ ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಮೂಳೆಗಳ ಸವೆತದ ಕಾರಣದಿಂದ ವಯಸ್ಸಾದವರಲ್ಲಿ ಮಂಡಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಸಣ್ಣ ವಯಸ್ಸಿನಲ್ಲಿಯೇ ಮಂಡಿ, ಕೀಲು ನೋವು (knee Pain) ಉಂಟಾಗಲು ಕಾರಣ ನಮ್ಮ ಈ ಕೆಲವು ಅಭ್ಯಾಸಗಳಂತೆ. ಹಾಗಿದ್ರೆ ಕೀಲು ನೋವು ಉಂಟಾಗಲು ಕಾರಣವೇನು, ಅದನ್ನು ಯಾವ ರೀತಿ ತಡೆಗಟ್ಟಬಹುದು ಎಂಬುದನ್ನು ತಿಳಿಯಿರಿ.

ಕೀಲು ನೋವಿಗೆ ಕಾರಣಗಳೇನು?

ಅನಾರೋಗ್ಯಕರ ಮತ್ತು ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ವಿಟಮಿನ್‌ ಡಿ, ಕ್ಯಾಲ್ಸಿಯಂ ಕೊರತೆ, ಮೂಳೆಗಳ ಸಾಂದ್ರತೆ ಕಡಿಮೆಯಾಗುವುದರಿಂದ ಕೀಳು, ಮಂಡಿ ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಇದಲ್ಲದೆ ನಮ್ಮ ಕೆಲವು ಅಭ್ಯಾಸಗಳು ಸಹ ಮಂಡಿ ನೋವು ಕಾಣಿಸಿಕೊಳ್ಳಲು ಪ್ರಮುಖ ಕಾರಣವಂತೆ. ಈ ಕುರಿತ ಮಾಹಿತಿಯನ್ನು ಅಕಿಲಿಯಾಸ್‌ ನಿಕೋಲೈಡಿಸ್‌  (Achilleas Nikolaidis) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. “ವಯಸ್ಸಿನ ಕಾರಣದಿಂದಲ್ಲ, ನಮ್ಮ ಈ ಅಭ್ಯಾಸಗಳೇ ಕೀಲು ನೋವಿಗೆ ಮೂಲ ಕಾರಣ” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಹೃದಯಾಘಾತ ತಡೆಯಲು ಮಾತ್ರೆ ಅಗತ್ಯವಿಲ್ಲ, ಈ ಆಹಾರಗಳೇ ಹೃದಯಕ್ಕೆ ಮದ್ದು
Image
ರಾತ್ರಿ ಈ ರೀತಿ ಲಕ್ಷಣ ಕಂಡು ಬರುವುದು ಕಿಡ್ನಿ ಫೇಲ್ಯೂರ್ ಆಗುವ ಮುನ್ಸೂಚನೆ
Image
ಗ್ಯಾಸ್ಟ್ರಿಕ್ ಅಥವಾ ಹೃದಯಾಘಾತ; ಎದೆನೋವನ್ನು ಗುರುತಿಸುವುದು ಹೇಗೆ?
Image
40ರ ನಂತರ ಮಹಿಳೆಯರು ಮೂಳೆ ಆರೋಗ್ಯದ ಈ ಸಲಹೆಗಳನ್ನು ಪಾಲಿಸಿ

ವಿಡಿಯೋ ಇಲ್ಲಿದೆ ನೋಡಿ:

ದೀರ್ಘಕಾಲ ಕುಳಿತುಕೊಳ್ಳುವುದು: ಕೆಲಸದ ತೀವ್ರ ಒತ್ತಡದ ಕಾರಣದಿಂದ ಅನೇಕರು 8 ಕ್ಕಿಂತಲೂ ಹೆಚ್ಚು ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತು ಸುದೀರ್ಘವಾಗಿ ಕೆಲಸ ಮಾಡುತ್ತಾರೆ, ಆ ಸಮಯದಲ್ಲಿ ಎದ್ದು ದೇಹಕ್ಕೆ ಸ್ಪಲ್ಪ ರೆಸ್ಟ್‌ ಕೂಡಾ ಕೊಡುವುದಿಲ್ಲ. ಇದರಿಂದ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ, ಈ ಕಾರನದಿಂದ  ಬೆನ್ನು ನೋವು, ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಕೆಲಸದ ಮಧ್ಯೆ ಸ್ವಲ್ಪ ಬ್ರೇಕ್‌ ತೆಗೆದುಕೊಂಡು 2 ನಿಮಿಷಗಳ ಕಾಲ ಅತ್ತಿಂದಿತ್ತ ಓಡಾಡಿ, ದೇಹವನ್ನು ವಾರ್ಮ್‌ಅಪ್‌ ಮಾಡಿ.

ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದಿರುವುದು: ಕೆಲಸ ಮಾಡುವಾಗ ಸರಿಯಾದ ರೀತಿಯಲ್ಲಿ ಕುಳಿತುಕೊಳ್ಳುವುದು ಕೂಡಾ ಬಹಳ ಮುಖ್ಯ. ಏಕೆಂದರೆ ಅನುಕೂಲಕ್ಕೆ ತಕ್ಕಂತೆ ಕುಳಿತರೆ ಇದರಿಂದ ಕತ್ತು ನೋವು, ಬೆನ್ನು ನೋವು, ಮಂಡಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಪಾದಗಳು ಸಮವಾಗಿ ನೆಲಕ್ಕೆ ತಾಕುವಂತೆ, ಮೊಣಕಾಲುಗಳನ್ನು 90 ಡಿಗ್ರಿ ಕೋನದಲ್ಲಿ ಇರಿಸಿ ಸರಿಯಾದ ರೀತಿಯಲ್ಲಿ ಕುಳಿತುಕೊಳ್ಳಬೇಕು. ಇದಲ್ಲದೆ ಒಂದೇ ಸ್ಥಳದಲ್ಲಿ ದೀರ್ಘವಾಗಿ ಕುಳಿತುಕೊಳ್ಳಬಾರದು, ಅದಕ್ಕಾಗಿ 10 ನಿಮಿಷ ಅಥವಾ ಅರ್ಧ ಗಂಟೆಗೊಮ್ಮೆ ಎದ್ದು ಅತ್ತಿಂದಿತ್ತ ಓಡಾಗಿ, ಕಾಲುಗಳಿಗೆ ವ್ಯಾಯಾಮ ಕೊಡಿ.

ಎದ್ದು ಓಡಾಡದಿರುವುದು: ಕೆಲವರು ಗಂಟೆಗಟ್ಟಲೆ ಕುಳಿತಲ್ಲಿಯೇ ಕುಳಿತಿರುತ್ತಾರೆ. ಇದು ಕೂಡಾ ಮಂಡಿ ನೋವಿಗೆ ಕಾರಣವಾಗಬಹುದು. ಆದ್ದರಿಂದ ಪ್ರತಿ 20 ರಿಂದ 30 ನಿಮಿಷಕ್ಕೊಮ್ಮೆ ಎದ್ದು ಓಡಾಡಿ ಅಥವಾ ಮಂಡಿಗೆ ಸೂಕ್ತವಾದ ಸಣ್ಣ ವ್ಯಾಯಾಮವನ್ನು ನೀಡಿ. ಇದರಿಂದ ಕೀಲುಗಳ ಮೇಲೆ ಉಂಟಾಗುವ ಒತ್ತಡವು ಸಹ ಕಡಿಮೆಯಾಗುತ್ತದೆ.

ಸರಿಯಾಗಿ ವ್ಯಾಯಾಮ ಮಾಡದಿರುವುದು: ಸರಿಯಾದ ರೀತಿಯಲ್ಲಿ ವ್ಯಾಯಾಮಗಳನ್ನು ಮಾಡದಿರುವುದು ಕೂಡಾ ಕೀಲು ನೋವಿಗೆ ಕಾರಣವಾಗುತ್ತದೆ. ಕೆಲವರಂತೂ ಈ ವ್ಯಾಯಾಮಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಆದ್ದರಿಂದ ಮೊಣಕಾಲು, ಸೊಂಟ, ಬೆನ್ನು ಮೂಳೆಯನ್ನು ಬಲಗೊಳಿಸಲು ಸೂಕ್ತವಾದ ವ್ಯಾಯಾಮವನ್ನು ಮಾಡುವುದು ಅತ್ಯಗತ್ಯ.

ಇದನ್ನೂ ಓದಿ: ಮೂಳೆಗಳು ಬಲಿಷ್ಠವಾದರೆ, ನೀವೂ ಬಲಿಷ್ಠವಾಗಿರುತ್ತೀರಿ: 40ರ ನಂತರ ಮಹಿಳೆಯರು ಮೂಳೆ ಆರೋಗ್ಯದ ಈ ಸಲಹೆಗಳನ್ನು ಪಾಲಿಸಿ

ಕಾಲಜನ್‌ ತೆಗೆದುಕೊಳ್ಳದಿರುವುದು: ಕಾಲಜನ್‌ ಅಗತ್ಯ ಪ್ರೋಟೀನ್‌ಗಳಲ್ಲಿ ಒಂದಾಗಿದ್ದು, ಇದು ಚರ್ಮ, ಮೂಳೆ, ಸ್ನಾಯುರಜ್ಜು, ಉಗುರು, ಕೀಲುಗಳ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಿರುವಾಗ ಕಾಲಜನ್‌ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸದಿದ್ದರೆ ಕೀಲು ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಕೀಲುಗಳ ಆರೋಗ್ಯ ಕಾಪಾಡಿಕೊಳ್ಳಲು ಕಾಲಜನ್‌ ಅಂಶ ಹೆಚ್ಚಿರುವ ಆಹಾರಗಳನ್ನು ಅಥವಾ ಅದರ ಪೂರಕಗಳನ್ನು ಅಗತ್ಯವಾಗಿ ಸೇವನೆ ಮಾಡಬೇಕು.

ಅನಾರೋಗ್ಯಕರ ಆಹಾರ: ಸಕ್ಕರೆ ಅಂಶವಿರುವ ಆಹಾರ, ಎಣ್ಣೆ ಪದಾರ್ಥಗಳು, ಸಂಸ್ಕರಿಸಿದ ಮಾಂಸ, ಮದ್ಯ ಸೇವನೆ ಇವುಗಳ ಅತಿಯಾದ ಸೇವನೆಯೂ ಮಂಡಿ ನೋವಿಗೆ ಕಾರಣ. ಅಲ್ಲದೆ ಇದು ಉರಿಯೂತವನ್ನು ಸಹ ಹೆಚ್ಚಿಸುತ್ತದೆ. ಆದ್ದರಿಂದ ಇಂತಹ ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Wed, 18 June 25