
ಇತ್ತೀಚಿನ ದಿನಗಳಲ್ಲಿ ಅನೇಕರು ಥೈರಾಯ್ಡ್ (Thyroid) ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಮಗೆ ತಿಳಿದಿರಬಹುದು, ಕುತ್ತಿಗೆಯಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿಯನ್ನು ನಾವು ಥೈರಾಯ್ಡ್ ಗ್ರಂಥಿ ಎಂದು ಕರೆಯುತ್ತೇವೆ. ಇದು ದೇಹದ ಉಷ್ಣತೆ, ಹೃದಯ ಬಡಿತ ಮತ್ತು ಮೆದುಳಿನ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಆದರೆ ಥೈರಾಯ್ಡ್ ಗ್ರಂಥಿಯಲ್ಲಿನ ಅಸಮತೋಲನವು ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆ ಕಂಡುಬರುವ ಮೊದಲು ದೇಹದ ವಿವಿಧ ಭಾಗಗಳಲ್ಲಿ ನೋವು ಕಂಡುಬರುತ್ತದೆ. ಏಕೆಂದರೆ ಥೈರಾಯ್ಡ್ ಹಾರ್ಮೋನುಗಳಲ್ಲಿನ ಅಸಮತೋಲನ ಉಂಟಾದಾಗ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಅಲ್ಲಲ್ಲಿ ನೋವು ಕಂಡುಬರುವುದಕ್ಕೆ ಕಾರಣವಾಗುತ್ತದೆ. ಹಾಗಾದರೆ ಥೈರಾಯ್ಡ್ ನಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ, ಅದರ ಜೊತೆಗೆ ದೇಹದ ಯಾವ ಭಾಗಗಳಲ್ಲಿ ನೋವು ಕಂಡುಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಕುತ್ತಿಗೆ ನೋವು: ಇದು ಥೈರಾಯ್ಡ್ ಸಮಸ್ಯೆಯ ಮೊದಲ ಲಕ್ಷಣ. ಕೆಲವರಲ್ಲಿ ಕುತ್ತಿಗೆಯಲ್ಲಿ ಊತವನ್ನೂ ಉಂಟುಮಾಡಬಹುದು. ನಿಮಗೂ ಕೂಡ ಈ ರೀತಿ ಆಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.
ದವಡೆ ನೋವು: ಥೈರಾಯ್ಡ್ ಹಾರ್ಮೋನುಗಳು ಅಸಮತೋಲನಗೊಂಡಾಗಲೂ ದವಡೆ ನೋವು ಉಂಟಾಗಬಹುದು. ದೀರ್ಘಕಾಲದಿಂದ ದವಡೆಯಲ್ಲಿ ನೋವು ಕಂಡುಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.
ಕಿವಿ ನೋವು: ಥೈರಾಯ್ಡ್ ಹಾರ್ಮೋನ್ ಗಳಲ್ಲಿ ಅಸಮತೋಲನ ಉಂಟಾದಾಗ ಕಿವಿ ನೋವು ಕೂಡ ಕಂಡುಬರಬಹುದು. ಹಾಗಾಗಿ ಕಿವಿ ನೋವು ಬಂದಾಗ ಅದನ್ನು ಹಗುರವಾಗಿ ಪರಿಗಣಿಸಬೇಡಿ, ಏಕೆಂದರೆ ಇದು ಥೈರಾಯ್ಡ್ ಕಾಯಿಲೆಯ ಸಂಕೇತವಾಗಿರಬಹುದು.
ಇದನ್ನೂ ಓದಿ: ದೈನಂದಿನ ನಿಮ್ಮ ಈ 5 ಅಭ್ಯಾಸಗಳೇ ಮೂಳೆ ವೀಕ್ ಆಗುವುದಕ್ಕೆ ಕಾರಣ
ಸ್ನಾಯು ನೋವು: ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಯು ದೊಡ್ಡದಾಗುತ್ತಿದ್ದಂತೆ, ಸ್ನಾಯು ನೋವು ಹೆಚ್ಚಾಗುತ್ತದೆ. ನಿಮಗೂ ಈ ರೀತಿಯಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿಮಾಡಿ.
ಕೀಲು ನೋವು: ಥೈರಾಯ್ಡ್ ಗ್ರಂಥಿಯು ದೊಡ್ಡದಾದಾಗ, ಕೀಲುಗಳಲ್ಲಿ ನೋವು ಕಂಡುಬರುತ್ತದೆ. ಅದರಲ್ಲಿಯೂ ಮೊಣಕಾಲುಗಳಲ್ಲಿ ನೋವು ಕಂಡುಬರುತ್ತದೆ. ಇಂತಹ ಪರಿಸ್ಥಿತಿಯನ್ನು ನಿರ್ಲಕ್ಷ್ಯ ಮಾಡದೆಯೇ ವೈದ್ಯರನ್ನು ಸಂಪರ್ಕ ಮಾಡುವುವು ಬಹಳ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Wed, 26 November 25