AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲೇಕೆ ಕಿಡ್ನಿಸ್ಟೋನ್ ಹೆಚ್ಚಾಗಿ ಕಂಡುಬರುತ್ತದೆ? ವೈದ್ಯರು ನೀಡಿದ ಪ್ರಮುಖ ಕಾರಣ ಇಲ್ಲಿದೆ

Kidney Stone Cause: ಚಳಿಗಾಲದಲ್ಲಿ ವಿವಿಧ ರೀತಿಯ ಕಾಯಿಲೆಗಳು ಕಂಡುಬರುವುದು ಸಾಮಾನ್ಯ. ಅದರಲ್ಲಿಯೂ ಕಿಡ್ನಿಸ್ಟೋನ್ ಅಪಾಯವೂ ತುಸು ಹೆಚ್ಚೆ ಇರುತ್ತದೆ. ಹಾಗಾಗಿ ಈ ವಿಷಯದಲ್ಲಿ ಜಾಗರೂಕರಾಗಿರುವುದು ಬಹಳ ಒಳ್ಳೆಯದು. ಆದರೆ ಈ ಸಮಸ್ಯೆಗೆ ಕಂಡುಬರುವುದಕ್ಕೆ ಅದರಲ್ಲಿಯೂ ಈ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಕ್ಕೆ ಹಲವಾರು ನಿರ್ದಿಷ್ಟ ಕಾರಣಗಳಿವೆ. ಹೌದು, ಈ ಬಗ್ಗೆ ಡಾ. ಹಿಮಾಂಶು ಶರ್ಮಾ ಎಂಬುವವರು ಮಾಹಿತಿ ನೀಡಿದ್ದು, ಈ ರೀತಿಯಾಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ವಿವರಣೆ ನೀಡಿದ್ದಾರೆ.

ಚಳಿಗಾಲದಲ್ಲೇಕೆ ಕಿಡ್ನಿಸ್ಟೋನ್ ಹೆಚ್ಚಾಗಿ ಕಂಡುಬರುತ್ತದೆ? ವೈದ್ಯರು ನೀಡಿದ ಪ್ರಮುಖ ಕಾರಣ ಇಲ್ಲಿದೆ
ಚಳಿಗಾಲದಲ್ಲಿ ಕಿಡ್ನಿಸ್ಟೋನ್ ಕಂಡುಬರುವುದಕ್ಕೆ ಕಾರಣ
ಪ್ರೀತಿ ಭಟ್​, ಗುಣವಂತೆ
|

Updated on: Nov 27, 2025 | 3:03 PM

Share

ಇತ್ತೀಚಿನ ದಿನಗಳಲ್ಲಿ, ಕಿಡ್ನಿಸ್ಟೋನ್ (Kidney Stone) ಒಂದು ಪ್ರಮುಖ ಸಮಸ್ಯೆಯಾಗಿದೆ. ಮೂತ್ರಪಿಂಡದಲ್ಲಿ ಸಂಗ್ರಹವಾದ ಖನಿಜಗಳು ಸೇರಿ ಹರಳುಗಳನ್ನು ರೂಪಿಸಿದಾಗ, ಅದನ್ನು ಮೂತ್ರಪಿಂಡದ ಕಲ್ಲು ಅಥವಾ ಕಿಡ್ನಿಸ್ಟೋನ್ ಎಂದು ಕರೆಯಲಾಗುತ್ತದೆ. ಇವು ಮೂತ್ರನಾಳದ ಮೂಲಕ ಹಾದುಹೋಗುವಾಗ, ತೀವ್ರವಾದ ನೋವು, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಅದರಲ್ಲಿಯೂ ಈ ರೀತಿಯ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಬಗ್ಗೆ ಡಾ. ಹಿಮಾಂಶು ಶರ್ಮಾ (Dr. Himashu Sharma) ಎಂಬುವವರು ಮಾಹಿತಿ ನೀಡಿದ್ದು, ಈ ರೀತಿಯಾಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ವಿವರಣೆ ನೀಡಿದ್ದಾರೆ.

ನೀರಿನ ಕೊರತೆ: ಚಳಿಗಾಲದಲ್ಲಿ, ಹೆಚ್ಚಿನವರು ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಪರಿಣಾಮವಾಗಿ, ಖನಿಜಗಳು ಮತ್ತು ಲವಣಗಳು ಮೂತ್ರದಲ್ಲಿ ಸಂಗ್ರಹವಾಗಿ ಕಿಡ್ನಿಸ್ಟೋನ್ ಸಾಧ್ಯತೆ ಹೆಚ್ಚಾಗುತ್ತದೆ.

ದೈಹಿಕ ಚಟುವಟಿಕೆ: ಚಳಿಗಾಲದಲ್ಲಿ, ವ್ಯಾಯಾಮ, ನಡಿಗೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಪರಿಣಾಮವಾಗಿ, ದೇಹದಲ್ಲಿನ ಕ್ಯಾಲ್ಸಿಯಂ ಮಟ್ಟವು ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಮೂತ್ರಪಿಂಡಗಳಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದು ಕಿಡ್ನಿಸ್ಟೋನ್ ರಚನೆಗೆ ಕಾರಣವಾಗುತ್ತದೆ.

ಕೊಬ್ಬಿನಾಂಶವಿರುವ ಆಹಾರಗಳು: ಚಳಿಗಾಲದಲ್ಲಿ, ಜನರು ಹೆಚ್ಚೆಚ್ಚು ಆಹಾರವನ್ನು ಸೇವಿಸುತ್ತಾರೆ. ಈ ರೀತಿ ಹುರಿದ, ಎಣ್ಣೆಯುಕ್ತ ಮತ್ತು ಉಪ್ಪಿನ ಅಂಶವಿರುವ ಆಹಾರ ಸೇವನೆಯ ಪ್ರಮಾಣ ಹೆಚ್ಚಾದಾಗ ಕಿಡ್ನಿಸ್ಟೋನ್ ಪ್ರಕರಣ ಕಂಡುಬರುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲೇಕೆ ಕ್ಯಾಪ್ಸಿಕಂ ಅನ್ನು ಹೆಚ್ಚೆಚ್ಚು ಸೇವಿಸಬೇಕು? ಇದರ ಹಿಂದಿದೆ ಮಹತ್ವದ ಕಾರಣ

ಕಿಡ್ನಿಸ್ಟೋನ್ ಲಕ್ಷಣಗಳು

  • ತೀವ್ರ ಹೊಟ್ಟೆ ನೋವು
  • ಪಕ್ಕೆಲುಬುಗಳು ಅಥವಾ ಹೊಟ್ಟೆಯ ಬಳಿ ಹಠಾತ್ ನೋವು
  • ಮೂತ್ರ ವಿಸರ್ಜಿಸುವಾಗ ಉರಿಯುವ ಸಂವೇದನೆ
  • ಆಗಾಗ ಮೂತ್ರ ವಿಸರ್ಜನೆ
  • ಮೂತ್ರದಲ್ಲಿ ರಕ್ತ
  • ಮೂತ್ರ ವಾಸನೆಯಾಗಿರುವುದು
  • ವಾಂತಿ, ವಾಕರಿಕೆ, ಇತ್ಯಾದಿ

ಕಿಡ್ನಿಸ್ಟೋನ್ ಗೆ ಪರಿಹಾರಗಳೇನು?

  • ಸಾಕಷ್ಟು ನೀರು ಕುಡಿಯಿರಿ.
  • ಸಮತೋಲಿತ ಆಹಾರವನ್ನು ಸೇವಿಸಿ.
  • ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
  • ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ.
  • ಲಕ್ಷಣಗಳು ಕಾಣಿಸಿಕೊಂಡರೆ ತಜ್ಞರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್