ಕಿಡ್ನಿ ವೈಫಲ್ಯಕ್ಕೂ ಮುನ್ನ ದೇಹ ನೀಡುವ ಈ 5 ಪ್ರಮುಖ ಎಚ್ಚರಿಕೆ ಸಂಕೇತಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ!

ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ ಸಂಬಂಧಿತ ರೋಗಗಳು ವೇಗವಾಗಿ ಹೆಚ್ಚುತ್ತಿವೆ. ಅದಕ್ಕೆ ಕಾರಣ ರೋಗವು ತೀವ್ರವಾಗುವವರೆಗೆ ಅನೇಕರು ಅವುಗಳನ್ನು ಗಮನಿಸಲು ವಿಫಲರಾಗುತ್ತಾರೆ. ಆದರೆ ಆರಂಭಿಕ ಹಂತದಲ್ಲೇ ಕೆಲವು ಲಕ್ಷಣಗಳನ್ನು ಗುರುತಿಸಿದರೆ ಗಂಭೀರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ಹಾಗಾದರೆ ಕಿಡ್ನಿ ವೈಫಲ್ಯಕ್ಕೂ ಮುನ್ನ ದೇಹ ನೀಡುವ ಎಚ್ಚರಿಕೆಯ ಸೂಚನೆಗಳು ಹೇಗಿರುತ್ತವೆ, ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಿಡ್ನಿ ವೈಫಲ್ಯಕ್ಕೂ ಮುನ್ನ ದೇಹ ನೀಡುವ ಈ 5 ಪ್ರಮುಖ ಎಚ್ಚರಿಕೆ ಸಂಕೇತಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ!
Kidney Failure Early Signs
Image Credit source: Getty Images

Updated on: Jun 18, 2026 | 9:00 PM

ಮೂತ್ರಪಿಂಡಗಳು (Kidneys) ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸಿ, ವಿಷಕಾರಿ ಅಂಶಗಳು ಹಾಗೂ ಹೆಚ್ಚುವರಿ ದ್ರವವನ್ನು ಮೂತ್ರದ ಮೂಲಕ ಹೊರಹಾಕುವ ಪ್ರಮುಖ ಅಂಗಗಳಾಗಿವೆ. ಕಿಡ್ನಿಗಳ ಕಾರ್ಯಕ್ಷಮತೆ ಕುಂಠಿತವಾಗಲು ಆರಂಭವಾದಾಗ ಅದರ ಪರಿಣಾಮ ಇಡೀ ದೇಹದ ಮೇಲೆ ಕಾಣಿಸಿಕೊಳ್ಳುತ್ತದೆ. ಆರಂಭಿಕ ಹಂತದಲ್ಲೇ ಕೆಲವು ಲಕ್ಷಣಗಳನ್ನು ಗುರುತಿಸಿದರೆ ಗಂಭೀರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ಹಾಗಾದರೆ ಕಿಡ್ನಿ ವೈಫಲ್ಯಕ್ಕೂ ಮುನ್ನ ದೇಹ ನೀಡುವ ಎಚ್ಚರಿಕೆಯ ಸೂಚನೆಗಳು ಹೇಗಿರುತ್ತವೆ, ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿರಂತರ ಆಯಾಸ ಮತ್ತು ದುರ್ಬಲತೆ

ಯಾವುದೇ ಹೆಚ್ಚಿನ ಶ್ರಮವಿಲ್ಲದೆ ದಿನವಿಡೀ ಆಯಾಸ, ಶಕ್ತಿ ಕುಂದುವುದು ಅಥವಾ ದೇಹ ಬಲಹೀನವಾಗಿರುವುದು ಕಿಡ್ನಿ ಸಮಸ್ಯೆಯ ಆರಂಭಿಕ ಸೂಚನೆಯಾಗಿರಬಹುದು. ಕಿಡ್ನಿಗಳು ರಕ್ತವನ್ನು ಸರಿಯಾಗಿ ಶುದ್ಧೀಕರಿಸದಿದ್ದರೆ ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುತ್ತವೆ.

ಕೈ, ಕಾಲು ಮತ್ತು ಮುಖದಲ್ಲಿ ಊತ

ಮೂತ್ರಪಿಂಡಗಳು ಹೆಚ್ಚುವರಿ ನೀರನ್ನು ಹೊರಹಾಕಲು ವಿಫಲವಾದಾಗ ದೇಹದಲ್ಲಿ ದ್ರವ ಸಂಗ್ರಹವಾಗುತ್ತದೆ. ಇದರಿಂದ ಪಾದಗಳು, ಕಾಲುಗಂಟುಗಳು, ಕೈಗಳು ಹಾಗೂ ಕಣ್ಣಿನ ಸುತ್ತಲಿನ ಭಾಗದಲ್ಲಿ ಊತ ಕಾಣಿಸಬಹುದು. ಬೆಳಿಗ್ಗೆ ಎದ್ದಾಗ ಕಣ್ಣುಗಳ ಸುತ್ತ ಊತ ಕಂಡುಬಂದರೆ ನಿರ್ಲಕ್ಷಿಸಬೇಡಿ.

ಮೂತ್ರವಿಸರ್ಜನೆಯಲ್ಲಿ ಬದಲಾವಣೆ

ಮೂತ್ರದ ಪ್ರಮಾಣ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ರಾತ್ರಿ ವೇಳೆ ಪದೇಪದೇ ಮೂತ್ರಕ್ಕೆ ಹೋಗಬೇಕಾಗುವುದು, ಮೂತ್ರದಲ್ಲಿ ನೊರೆ ಕಾಣಿಸಿಕೊಳ್ಳುವುದು ಅಥವಾ ಬಣ್ಣದಲ್ಲಿ ಬದಲಾವಣೆ ಉಂಟಾಗುವುದು ಕಿಡ್ನಿ ಸಮಸ್ಯೆಯ ಸೂಚನೆಗಳಾಗಿರಬಹುದು.

ಚರ್ಮ ಒಣಗುವುದು ಮತ್ತು ತುರಿಕೆ

ಕಿಡ್ನಿಗಳು ರಕ್ತದಲ್ಲಿನ ತ್ಯಾಜ್ಯಗಳನ್ನು ಸರಿಯಾಗಿ ಹೊರಹಾಕದಿದ್ದಾಗ ಚರ್ಮದ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತದೆ. ಚರ್ಮ ಒಣಗುವುದು, ತುರಿಕೆ ಅಥವಾ ಅಸಹಜ ಕಿರಿಕಿರಿ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಕಿಡ್ನಿ ಆರೋಗ್ಯವಾಗಿ ಇರಬೇಕು ಅಂದ್ರೆ ಆರೋಗ್ಯ ತಜ್ಞರು ಹೇಳಿದ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಲೇಬೇಕು!

ಹಸಿವು ಕಡಿಮೆಯಾಗುವುದು ಮತ್ತು ವಾಕರಿಕೆ

ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚಾದಾಗ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀಳುತ್ತದೆ. ಇದರಿಂದ ಹಸಿವು ಕಡಿಮೆಯಾಗುವುದು, ವಾಕರಿಕೆ, ವಾಂತಿ ಅಥವಾ ಬಾಯಿಯಲ್ಲಿ ಕಹಿ ರುಚಿ ಕಾಣಿಸಬಹುದು.

ಯಾರಿಗೆ ಹೆಚ್ಚು ಅಪಾಯ?

ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯ ಹಾಗೂ ಕುಟುಂಬದಲ್ಲಿ ಕಿಡ್ನಿ ರೋಗದ ಇತಿಹಾಸ ಇರುವವರಿಗೆ ಅಪಾಯ ಹೆಚ್ಚು. ಇಂತಹವರು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ.

ಗಮನಿಸಿ: ಮೇಲಿನ ಲಕ್ಷಣಗಳು ನಿರಂತರವಾಗಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ಪತ್ತೆಹಚ್ಚುವುದು ಕಿಡ್ನಿಗಳ ಆರೋಗ್ಯ ಕಾಪಾಡಲು ಅತ್ಯುತ್ತಮ ಮಾರ್ಗವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us