Coconut Water: ತೆಂಗಿನ ನೀರಿನ ಆರೋಗ್ಯ ಪ್ರಯೋಜನಗಳನ್ನು ತಿಳಿದ್ರೆ ನಿಜವಾಗಿಯೂ ಆಶ್ಚರ್ಯವಾಗುತ್ತೆ

| Updated By: shruti hegde

Updated on: Oct 28, 2021 | 7:49 AM

ತೆಂಗಿನನೀರು ರುಚಿಯೂ ಹೌದು ಆರೋಗ್ಯಕ್ಕೂ ಉತ್ತಮ. ನೈಸರ್ಗಿಕವಾಗಿ ಸಿಗುವ ತೆಂಗಿನ ನೀರು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

Coconut Water: ತೆಂಗಿನ ನೀರಿನ ಆರೋಗ್ಯ ಪ್ರಯೋಜನಗಳನ್ನು ತಿಳಿದ್ರೆ ನಿಜವಾಗಿಯೂ ಆಶ್ಚರ್ಯವಾಗುತ್ತೆ
ಸಂಗ್ರಹ ಚಿತ್ರ
Follow us on

ತೆಂಗಿನ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿರುವ ಪೋಷಕಾಂಶಗಳು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬಿಸಿಲಿನ ಬೇಗೆಗೆ ಎಳನೀರು ಅಥವಾ ತೆಂಗಿನಕಾಯಿ ನೀರು ಸೇವನೆಯಿಂದ ದೇಹ ಆರಾಮವೆನಿಸುತ್ತದೆ. ದೇಹದ ಒತ್ತಡ, ಮಾನಸಿಕ ಅಸ್ವಸ್ಥತೆ, ಹಸಿವು ಈ ಸಂದರ್ಭದಲ್ಲಿ ಎಳನೀರು ಅಥವಾ ತೆಂಗಿನನೀರು ಸೇವನೆಯಿಂದ ನೀವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿರುವಾಗ ತೆಂಗಿನ ನೀರು ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುತ್ತದೆ
ದೇಹದಲ್ಲಿ ಹಲವಾರು ಸ್ವತಂತ್ರ ರಾಡಿಕಲ್​ಗಳು ಇದ್ದಾಗ ನಿಮ್ಮ ದೇಹವು ಆಕ್ಸಿಡೇಟಿವ್ ಒತ್ತಡದ ಸ್ಥಿತಿಯನ್ನು ಹೊಂದುತ್ತದೆ. ಇದು ನಿಮ್ಮ ಜೀವಕೋಶಗಳನ್ನು ಹಾನಿಗೊಳಿಸುತ್ತದೆ ಜತೆಗೆ ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಸಂಶೋಧನೆಯ ಪ್ರಕಾರ ತೆಂಗಿನ ನೀರಿಲ್ಲಿ ಉತ್ಕರ್ಷಣ ನಿರೋಧಕಗಳಿರುತ್ತವೆ ಎಂಬುದು ಸಾಬೀತಾಗಿದೆ. ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್​ಗಳನ್ನು ಮಾರ್ಪಡಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ದೇಹದಲ್ಲಿ ಜೀವಕೋಶಗಳ ಆರೋಗ್ಯದ ದೃಷ್ಟಿಯಿಂದ ತೆಂಗಿನ ನೀರು ಒಳ್ಳೆಯದು.

ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕ
ತೆಂಗಿನ ನೀರು ದೇಹದ ಒತ್ತಡವನ್ನು ನಿಯಂತ್ರಿಸಲು ಸಹಾಯಕ. ಜೊತೆಗೆ ಮಧುಮೇಹ ಸಮಸ್ಯೆ ಹೊಂದಿರುವವರಿಗೂ ಇದು ಸಹಾಯಕ. ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಇತ್ತೀಚೆಗೆ ನಡೆದ ಸಂಶೋಧನೆಯ ಪ್ರಕಾರ, ರಕ್ತದಲ್ಲಿನ ಗ್ಲುಕೋಸ್​ಅನ್ನು ಕಡಿಮೆ ಮಾಡಲು ತೆಂಗಿನನೀರು ಸಹಾಯಕ ಎಂಬುದು ತಿಳಿದು ಬಂದಿದೆ. ಆದರೆ ಇನ್ನೂ ಹೆಚ್ಚಿನ ಮಟ್ಟದ ಅಧ್ಯಯನಗಳು ಅವಶ್ಯಕ ಎಂದು ಶಾಸ್ತ್ರಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ.

ತೆಂಗಿನ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದೊಂದೇ ಅಲ್ಲದೇ ಇದು ಮೆಗ್ನಿಶೀಯಮ್​ನ​ ಉತ್ತಮ ಮೂಲವಾಗಿದೆ. ಇದು ಟೈಪ್ 2 ಮಧುಮೇಹ ಮತ್ತು ಪ್ರಿಡಿಯಾಬಿಟಿಸ್ ಹೊಂದಿರುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಮೂತ್ರಪಿಂಡದಲ್ಲಿ ಬೆಳೆದ ಕಲ್ಲು ನಿವಾರಣೆಗೆ ಸಹಾಯಕ
ಸಾಕಷ್ಟು ನೀರಿನಾಂಶ ಹೊಂದಿರುವ ಪದಾರ್ಥಗಳನ್ನು ಸೇವಿಸುವ ಮೂಲಕ ಮೂತ್ರಪಿಂಡದಲ್ಲಿ ಬೆಳೆದಿರುವ ಕಲ್ಲುಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಹಾಗಾಗಿಯೇ ಮೂತ್ರಪಿಂಡದ ಕಲ್ಲುಗಳನ್ನು ಹೊಂದಿರುವವರಿಗೆ ಹೆಚ್ಚು ನೀರು ಕುಡಿಯುವಂತೆ ತಜ್ಞರು ಸಲಹೆ ನೀಡುತ್ತಾರೆ. ತೆಂಗಿನ ನೀರು ಮೂತ್ರಪಿಂಡದಲ್ಲಿ ಕಲ್ಲುಗಳು ಅಂಟಿಕೊಳ್ಳದಂತೆ ತಡೆಯುತ್ತದೆ. 2018ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ತೆಂಗಿನ ನೀರಿನಲ್ಲಿ ಪೊಟ್ಯಾಷಿಯಮ್, ಕ್ಲೋರೈಡ್ ಮತ್ತು ಸಿಟ್ರಸ್ ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಇದರಿಂದ ಕಲ್ಲುಗಳು ಹೊರಹೋಗಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ತೆಂಗಿನ ನೀರನ್ನು ಕುಡಿಯುವುದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಶೋಧನೆಯ ಮೂಲಕ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ತೆಂಗಿನ ನೀರು ಸಹಾಯಕ ಎಂಬುದು ತಿಳಿದು ಬಂದಿದೆ. ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಲ್ಲಿ ಒತ್ತಡವನ್ನು ಕಡಿಮೆ ಮಾಡಲು ತೆಂಗಿನ ನೀರು ಸಹಾಯಕ. ಇದರಲ್ಲಿರುವ ಪೊಟ್ಯಾಶಿಯಮ್ ಅಂಶ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ರಕ್ತದೊತ್ತಡ ಸಮಸ್ಯೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಸುದೀರ್ಘ ವ್ಯಾಯಾಮದ ನಂತರ ಪ್ರಯೋಜನಕಾರಿ
ವ್ಯಾಯಾಮದ ಸಮಯದಲ್ಲಿ ಕಳೆದುಹೋದ ಎಲೆಕ್ಟ್ರೋಲೈಟ್​ಗಳನ್ನು ಮರುಸ್ಥಾಪಿಸಲು ತೆಂಗಿನ ನೀರು ಪ್ರಯೋಜನಕಾರಿ. ಎಲೆಕ್ಟ್ರೋಲೈಟ್​ಗಳು ಖನಿಜಗಳಾಗಿದ್ದು, ಸರಿಯಾದ ಸಮತೋಲನವನ್ನು ನಿರ್ವಹಿಸುವುದು ಜೊತೆಗೆ ದೇಹಕ್ಕೆ ಬೇಕಾದ ಪೊಟ್ಯಾಷಿಯಂ, ಮೆಗ್ನೀಶಿಯಂ, ಸೋಡಿಯಂ ಮತ್ತು ಕ್ಯಾಲ್ಸಿಯಂ ಅಂಶವನ್ನು ನೀಡುತ್ತದೆ.

ತೆಂಗಿನನೀರು ರುಚಿಯೂ ಹೌದು ಆರೋಗ್ಯಕ್ಕೂ ಉತ್ತಮ. ನೈಸರ್ಗಿಕವಾಗಿ ಸಿಗುವ ತೆಂಗಿನ ನೀರು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ. ಈ ಮೇಲಿನ ಎಲ್ಲಾ ಅಂಶಗಳು ಸಂಶೋಧನೆಯಿಂದ ತಿಳಿದು ಬಂದಿದ್ದರೂ, ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದ ಅಂಶಗಳು. ಈ ಹಲವು ಗುಣಗಳನ್ನು ಆಧರಿಸಿ ಮಾನವರನ್ನು ಒಳಗೊಂಡು ಹೆಚ್ಚು ಅಧ್ಯಯನಗಳು ಅಗತ್ಯವಿದ್ದರೂ ಇಲ್ಲಿಯವರೆಗೆ ನಡೆದ ಸಂಶೋಧನೆಯಿಂದ ತೆಂಗಿನ ನೀರಿನಲ್ಲಿ ಉತ್ತಮ ಆರೋಗ್ಯ ಪ್ರಯೋಜನಗಳಿವೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ:

Coconut Benefits: ತೆಂಗಿನಕಾಯಿ ಪೂಜೆ ಮತ್ತು ಅಡುಗೆಗೆ ಮಾತ್ರ ಎಂದು ತಿಳಿದರೆ ಅದು ತಪ್ಪು; ಆರೋಗ್ಯಕರ ಗುಣದ ಬಗ್ಗೆಯೂ ಗಮನಹರಿಸಿ

Health Tips: ತೆಂಗಿನಕಾಯಿ ನೀರು ಸೇವನೆ ರಕ್ತದೊತ್ತಡ ನಿಯಂತ್ರಿಸಲು ಸಹಾಯಕ