Weight Loss: ತೂಕ ಇಳಿಸಿಕೊಳ್ಳಲು ಸುಲಭ ಮಾರ್ಗ ಏಲಕ್ಕಿ ನೀರು ಸೇವನೆ

ರಕ್ತದೊತ್ತಡವನ್ನು ಕಡಿಮೆ ಮಾಡಲು ಏಲಕ್ಕಿ ಸಹಾಯಕವಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಫೈಬರ್​ನಂತಹ ಗುಣಗಳನ್ನು ಹೊಂದಿರುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

Weight Loss: ತೂಕ ಇಳಿಸಿಕೊಳ್ಳಲು ಸುಲಭ ಮಾರ್ಗ ಏಲಕ್ಕಿ ನೀರು ಸೇವನೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Sep 10, 2021 | 9:13 AM

ನೀರು ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರೋಗ್ಯ ಚೆನ್ನಾಗಿರಲು ನಿಯಮಿತವಾಗಿ ನೀರು ಸೇವಿಸುವುದು ಅತ್ಯಗತ್ಯ. ದೇಹದ ತೂಕ ಇಳಿಸಿಕೊಳ್ಳಲೂ ಸಹ ಸಾಕಷ್ಟು ನೀರು ಕುಡಿಯುವುದಾಗಿ ವೈದ್ಯರು ಸಲಹೆ ನೀಡುತ್ತಾರೆ. ಇದರ ಜತೆಗೆ ಏಲಕ್ಕಿ ಪುಡಿಯನ್ನೂ ಸಹ ಮಿಶ್ರಣ ಮಾಡಿ ಸೇವಿಸಬಹುದು. ಏಲಕ್ಕಿ ನೀರೂ ಸಹ ದೇಹದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅತೊಯಾಗಿ ಸೇವಿಸಿದರೆ ಅಮೃತವೂ ವಿಷ ಎಂಬ ಮಾತಿದೆ. ಹಾಗಾಗಿ ನಿಯಮಿತವಾದ ಏಲಕ್ಕಿ ಸೆವನೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಏಲಕ್ಕಿ ಔಷಧೀಯ ಗುಣಗಳಿಂದ ಕೂಡಿದೆ. ಇದರಲ್ಲಿ ಹಲವು ಪೋಷಕಾಂಶಗಳಿರುತ್ತದೆ. ಏಲಕ್ಕಿಯಲ್ಲಿ ವಿಟಮಿನ್, ರೊಬೋಫ್ಲಾವಿನ್, ನಿಯಾಸಿನ್, ವಿಟಮಿನ್ ಸಿ, ಖನಿಜ, ಕಬ್ಬಿಣ ಅಂಶ, ಮ್ಯಾಂಗನೀಸ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಂಶಗಳಿರುತ್ತದೆ. ಜತೆಗೆ ಫೈಬರ್, ಆ್ಯಂಟಿಆ್ಯಕ್ಸಿಡೆಂಟ್​ಗಳು ಇರುತ್ತವೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಿಮ್ಮ ದೇಹದಲ್ಲಿರುವ ಫ್ಯಾಟ್ಅನ್ನು ಸುಡುವುದರ ಜತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡಲು ಏಲಕ್ಕಿ ಸಹಾಯಕವಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಫೈಬರ್​ನಂತಹ ಗುಣಗಳನ್ನು ಹೊಂದಿರುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಏಲಕ್ಕಿಯಲ್ಲಿರುವ ಫೈಬರ್ ಅಂಶ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕ ಏಲಕ್ಕಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಇದು ಮ್ಯಾಂಗನೀಸ್ ಸಮೃದ್ಧವಾಗಿದೆ. ಜತೆಗೆ ಇದರಲ್ಲಿನ ಖನಿಜವು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಶೀತ ಮತ್ತು ಕೆಮ್ಮಿಗೆ ಚಿಕಿತ್ಸೆ ನೀಡಬಹುದು ಏಲಕ್ಕಿ ಮ್ಯೂಕೋಲಿಟಿಕ್ ಗುಣಗಳನ್ನು ಹೊಂದಿದೆ. ಇದು ಕೆಮ್ಮು ಮತ್ತು ಶೀತ ಸಮಸ್ಯೆಯನ್ನು ನಿವಾರಿಸುತ್ತದೆ. ಶ್ವಾಸಕೋಶದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಉಸಿರಾಟ ಕ್ರಿಯೆಯನ್ನು ಸುಧಾರಿಸಲು ಸಹಾಯಕವಾಗಿದೆ.

ಜೀರ್ಣಕಾರಿ ಸಮಸ್ಯೆಯನ್ನು ನಿವಾರಿಸುತ್ತದೆ ಏಲಕ್ಕಿ ಸೇವನೆಯು ಜೀರ್ಣಕಾರಿ ಸಂಬಂಧಿತ ಸಮಸ್ಯೆಗಳಿಂದ ದೂರವಿರಲು ಸಹಾಯಕವಾಗಿದೆ. ಇದಕ್ಕಾಗಿ 5 ಏಲಕ್ಕಿಗಳನ್ನು ಸಿಪ್ಪೆ ತೆಗೆದು ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಎದ್ದು ಆ ನೀರನ್ನು ಚೆನ್ನಾಗಿ ಬಿಸಿ ಮಾಡಿ. ಈ ನೀರನ್ನು ದಿನಕ್ಕೆ 2 ಬಾರಿ ಕುಡಿಯಬಹುದು. ವಾರಕ್ಕೆ ಎರಡು ದಿನದಂತೆ ಈ ರೀತಿಯ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಇದು ಸಹಾಯಕವಾಗಿದೆ.

ಇದನ್ನೂ ಓದಿ:

Health Tips: ಒಣ ಬಾದಾಮಿಗಿಂತ ನೀರಲ್ಲಿ ನೆನೆಸಿದ ಬಾದಾಮಿ ಸೇವನೆಯು ಆರೋಗ್ಯಕ್ಕೆ ಉತ್ತಮ

Health Tips: ಚಹಾ ಸೇವನೆಯ ಆರೋಗ್ಯ ಪ್ರಯೋಜಗಳನ್ನು ತಿಳಿಯಿರಿ

(Know about drinking cardamom water for weight loss check in Kannada)

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!