ಸಾಮಾನ್ಯವಾಗಿ, ಅಡುಗೆಯಲ್ಲಿ ಬಳಸುವ ಶುಂಠಿ ಆರೋಗ್ಯಕ್ಕೆ ಉತ್ತಮ ಎಂದು ಕೇಳಿದ್ದೇವೆ. ಸ್ಫೈಸಿಯಾಗಿ ತಯಾರಿಸುವ ಎಲ್ಲಾ ತಿನಿಸುಗಳಿಗೂ ನಾವು ಶುಂಠಿಯನ್ನು ಹಾಕುತ್ತೇವೆ. ಇದು ತಯಾರಿಸುವ ತಿಂಡಿಯ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಅತಿಯಾಗಿ ಬಳಸಿದರೆ ದೇಹಕ್ಕೆ ಅಷ್ಟೇ ಹಾನಿಯೂ ಆಗುತ್ತದೆ. ಅತಿಯಾಗಿ ಶುಂಠಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಹಾನಿಯಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ.
ಶುಂಠಿ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ಎಂಬುದನ್ನು ಕೇಳಿದ್ದೇವೆ. ಇದರಲ್ಲಿ ಕಾರ್ಬೋಹೈಡ್ರೇಟ್ಗಳು, ಫೈಬರ್, ಪ್ರೊಟೀನ್, ವಿಟಮಿನ್ ಬಿ3, ಬಿ6, ಕಬ್ಬಿಣ, ಪೊಟ್ಯಾಶಿಯಂ, ವಿಟಮಿನ್ ಸಿ, ಮೆಗ್ನೀಶಿಯಮ್ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಆದರೆ, ಅತಿಯಾದ ಶುಂಠಿ ಸೇವನೆಯಿಂದ ದೇಹಕ್ಕೆ ದುಷ್ಟರಿಣಾಮಗಳು ಹೆಚ್ಚಾಗಿವೆ. ಅದರಲ್ಲಿಯೂ ಗರ್ಭಿಣಿಯರು ಶುಂಠಿಯನ್ನು ಸೇವಿಸಬಾರದು ಎಂದು ವೈದ್ಯರು ಸೂಚಿಸುತ್ತಾರೆ.
ಶುಂಠಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಹೃದಯದ ತೊಂದರೆ ಮತ್ತು ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ಅದಾಗ್ಯೂ, ಹೆಚ್ಚಾಗಿ ಶುಂಠಿ ಚಹಾವನ್ನು ಕುಡಿಯುವುದರಿಂದ ಎದೆ ಮತ್ತು ಹೊಟ್ಟೆಯ ಉರಿಯೂತ ಕಾಣಿಸಿಕೊಳ್ಳುತ್ತದೆ. ರಾತ್ರಿ ಮಲಗುವ ಮುಂಚೆ ಶುಂಠಿ ಚಹಾವನ್ನು ಕುಡಿದು ಮಲಗುವ ಅಭ್ಯಾಸ ಕೆಲವರಲ್ಲಿದೆ. ಹಾಗಿದ್ದರೆ ಅದನ್ನು ಮೊದಲು ತಪ್ಪಿಸಿ. ಇದರಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ನಿದ್ರೆಯ ಕೊರತೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಹೆಚ್ಚು ಶುಂಠಿ ಚಹಾ ಸೇವಿಸುವುದರಿಂದ ಆಮ್ಲೀಯತೆ ತೊಂದರೆ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ:
Health Tips: ಮಳೆಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಈ 6 ಕಷಾಯಗಳನ್ನು ಮಾಡಿ ಕುಡಿಯಿರಿ
Health Tips: ಆಹಾರ ಕ್ರಮ ಸರಿಯಾಗಿದ್ದಲ್ಲಿ ಆರೋಗ್ಯವೂ ಸುಧಾರಿಸುತ್ತದೆ; ಇಲ್ಲಿದೆ ಕೆಲವು ಸಲಹೆಗಳು