AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಬಾಳೆ ಹಣ್ಣಿನ ಸಿಪ್ಪೆಯನ್ನು ಎಸೆಯುತ್ತಿದ್ದೀರಾ? ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಬಾಳೆ ಹಣ್ಣಿನ ಸಿಪ್ಪೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಇದರಲ್ಲಿ ಅನೇಕ ಜೀವಸತ್ವಗಳು, ಖನಿಜಗಳು ಮತ್ತು ಪೋಶಕಾಂಶಗಳಿರುವುದರಿಂದ ಆರೋಗ್ಯಕ್ಕೆ ಉತ್ತಮ.

Health Tips: ಬಾಳೆ ಹಣ್ಣಿನ ಸಿಪ್ಪೆಯನ್ನು ಎಸೆಯುತ್ತಿದ್ದೀರಾ? ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಬಾಳೆ ಹಣ್ಣಿನ ಸಿಪ್ಪೆ
TV9 Web
| Updated By: preethi shettigar|

Updated on: Jul 10, 2021 | 7:20 AM

Share

ಸಾಮಾನ್ಯವಾಗಿ ಬಾಳೆಹಣ್ಣಿನ ಸೇವನೆ ಆರೋಗ್ಯಕ್ಕೆ ಪ್ರಯೋಜನ ಎಂಬುದು ತಿಳಿದಿದೆ. ಮಲಬದ್ಧತೆ ಸಮಸ್ಯೆ, ಜೀರ್ಣಕ್ರಿಯೆಯನ್ನು ಸುಧಾರಿಸಿಕೊಳ್ಳಲು ಬಾಳೆಹಣ್ಣನ್ನು ಸೇವಿಸುತ್ತೇವೆ. ಜತೆಗೆ ಮಧ್ಯಾಹ್ನದ ಊಟ ಆದ ತಕ್ಷಣ ಒಂದು ಬಾಳೆ ಹಣ್ಣನ್ನು ಸೇವನೆ ಮಾಡುವುದರಿಂದ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ಮಾತನ್ನೂ ಕೇಳಿದ್ದೇವೆ. ಆದರೆ ಹಣ್ಣು ತಿಂದು ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಬಾಳೆ ಹಣ್ಣಿನ ಸಿಪ್ಪೆಯಲ್ಲಿಯೂ ಸಹ ಎಷ್ಟೆಲ್ಲಾ ಪೌಷ್ಠಿಕಾಂಶಗಳಿವೆ ಎಂಬುದನ್ನು ನೀವು ತಿಳಿಯಲೇಬೇಕು.

ಬಾಳೆ ಹಣ್ಣಿನ ಸಿಪ್ಪೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಇದರಲ್ಲಿ ಅನೇಕ ಜೀವಸತ್ವಗಳು, ಖನಿಜಗಳು ಮತ್ತು ಪೋಶಕಾಂಶಗಳಿರುವುದರಿಂದ ಆರೋಗ್ಯಕ್ಕೆ ಉತ್ತಮ. ಬಾಳೆಹಣ್ಣಿನ ಹೊರಗಿನ ತೆಳೆವಾದ ಹಳದಿ ಸಿಪ್ಪೆಯನ್ನು ಬಿಡಿಸಿ ಒಳಗಿರುವ ನಾರನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ನಾರಿನಾಂಶವಿದೆ. ನಿಯಮಿತವಾಗಿ ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಬಹುದು. ಇದು ಮಲಬದ್ಧತೆ, ಅತಿಸಾರ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ ಬಾಳೆಹಣ್ಣಿನ ಸಿಪ್ಪೆ ಬಳಸಿ ವಾರಕ್ಕೊಮ್ಮೆ ಹಲ್ಲುಗಳನ್ನು ಉಜ್ಜಿದಾಗ ಹೊಳಪು ಬರಲು ಸಹಾಯಕವಾಗಿದೆ. ಇದರಲ್ಲಿರುವ ಪೊಟ್ಯಾಷಿಯಂ ಮತ್ತು ಮೆಗ್ನೀಷಿಯಂ ಅಂಶ ದವಡೆಯನ್ನು ಸದೃಢಗೊಳಿಸುತ್ತದೆ. ಇದರಲ್ಲಿರುವ ಖನಿಜಾಂಶದಿಂದ ಹಲ್ಲುಗಳು ಹೊಳಪು ಕಾಣುತ್ತವೆ.

ಮೊಡವೆ ಸಮಸ್ಯೆಯಿಂದ ಪರಿಹಾರ ಮುಖದಲ್ಲಿ ಏಳುವ ಮೊಡವೆಗಳನ್ನು ತೆಗೆದುಹಾಕಲು ಬಾಳೆಹಣ್ಣಿನ ಸಿಪ್ಪೆ ಸಹಾಯಕವಾಗಿದೆ. ಬಾಳೆಹಣ್ಣಿ ಸಿಪ್ಪೆಯ ಒಳ ಪದರದ ಮೂಲಕ ಮುಖವನ್ನು ಉಜ್ಜಿದರೆ ಒಡವೆಗಳು ಏಳುವುದಿಲ್ಲ. ವಾರಕ್ಕೊಮ್ಮೆ ಮುಖವನ್ನು ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜುವ ಅಭ್ಯಾಸ ಒಳ್ಳೆಯದು. ಜತೆಗೆ ಇದರಲ್ಲಿವ ಪೋಷಕಾಂಶಗಳು ಚರ್ಮದ ಉರಿಯೂತವನ್ನು ನಿವಾರಣೆಗೊಳಿಸುತ್ತದೆ.

ನೋವು ನಿವಾರಣೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಆಂಟಿ-ಆಕ್ಸಿಡೆಂಟ್​ ಗುಣಗಳಿರುವುದರಿಂದ ಹೊಟ್ಟೆ ನೋವಿನ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ಇದು ಜೀರ್ಣಕ್ರಿಯೆ ಸಮಸ್ಯೆಯನ್ನೂ ತೊಡೆದು ಹಾಕುವುದಲ್ಲದೇ ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ. ಜತೆಗೆ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುವ ಶಕ್ತಿಯನ್ನು ಹೊಂದಿದೆ.

ಇದನ್ನೂ ಓದಿ:

ಹಾಲಿನ ಜತೆ ಬಾಳೆಹಣ್ಣು ಮಿಶ್ರಣ ಸೇವಿಸುತ್ತಿದ್ದೀರಾ? ಆರೋಗ್ಯಕ್ಕೆ ಹಾನಿ ಎಂಬುದನ್ನು ಮರೆಯದಿರಿ!

Health Tips: ಬಾಳೆಹಣ್ಣು ಸೇವಿಸುವ ಅಭ್ಯಾಸ ಇದೆಯೇ? ಖಾಯಿಲೆಗಳಿಂದ ದೂರವಿರಲು ಹಣ್ಣುಗಳ ಸೇವನೆ ಉತ್ತಮ