ಹಿಂಸೆ ನೀಡುವ ಫುಡ್ ಪಾಯ್ಸನ್ ಬಗ್ಗೆ ತಿಳಿದುಕೊಳ್ಳಿ: ಇಲ್ಲಿದೆ ಮಾಹಿತಿ
ಸರಿಯಾಗಿ ತಯಾರಿಸದ ಆಹಾರ, ಸರಿಯಾಗಿ ಬೇಯಿಸಿದ ಆಹಾರ ಕಲುಷಿತ ಆಹಾರವಾಗಿ ಮಾರ್ಪಡುತ್ತದೆ. ಅಂತಹ ಆಹಾರಗಳ ಸೇವನೆಯಿಂದ ದೇಹಕ್ಕೆ ವಿಷಯುಕ್ತ ಆಹಾರ ನೀಡಿದಂತಾಗುತ್ತದೆ
ಸರಿಯಾಗಿ ತಯಾರಿಸದ ಆಹಾರ(Food), ಸರಿಯಾಗಿ ಬೇಯಿಸಿದ ಆಹಾರ ಕಲುಷಿತ ಆಹಾರವಾಗಿ ಮಾರ್ಪಡುತ್ತದೆ. ಅಂತಹ ಆಹಾರಗಳ ಸೇವನೆಯಿಂದ ದೇಹಕ್ಕೆ ವಿಷಯುಕ್ತ ಆಹಾರ ನೀಡಿದಂತಾಗುತ್ತದೆ. ಇದರಿಂದ ಅನಾರೋಗ್ಯ ಉಂಟಾಗುತ್ತದೆ. ಇದನ್ನೇ ಫುಡ್ ಪಾಯ್ಸನ್ (Food Poison) ಎಂದು ಕರೆಯುತ್ತಾರೆ. ಪರಾವಲಂಬಿ ಅಥವಾ ವೈರಸ್ (Virus)ನಿಂದ ಕೂಡಿರುವ ಆಹಾರದ ಸೇವನೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೊರಗಿನ ತಿಂಡಿ, ಜಂಕ್ಫುಡ್ಗಳ ಸೇವನೆಯಿಂದ ಫುಡ್ ಪಾಯ್ಸನ್ ಸಾಮಾನ್ಯವಾಗಿ ಕಾಡುತ್ತಿದೆ. ಫುಡ್ ಪಾಯ್ಸನ್ ಜೀವನ ಶೈಲಿಯ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತದೆ. ದೇಹವನ್ನು ಅನಾರೋಗ್ಯಕ್ಕೆ ಒಳಪಡಸಿ ಜೀರ್ಣಾಂಗ ವ್ಯವಸ್ಥೆ ಅಸಮತೋಲನಗೊಳ್ಳುವಂತೆ ಮಾಡುತ್ತದೆ. ಹಾಗಾದರೆ ಈ ಫುಡ್ ಪಾಯ್ಸನ್ನ ಲಕ್ಷಣಗಳೇನು? ಇಲ್ಲಿದೆ ಮಾಹಿತಿ
ಫುಡ್ ಪಾಯ್ಸನ್ ಲಕ್ಷಣಗಳು: ವಾಂತಿ ವಾಕರಿಕೆ ಹೊಟ್ಟೆನೋವು ಅತಿಸಾರ ನಿರ್ಜಲೀಕರಣ
ಇವು ಫುಡ್ ಪಾಯ್ಸನ್ನ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ಫುಡ್ ಪಾಯ್ಸನ್ ಇ ಕೋಲಿ, ಕ್ಲೋಸ್ಟ್ರಿಡಿಯಮ್ ಪರ್ಫ್ರಿಂಗನ್ಸ್ ಬ್ಯಾಕ್ಟೀರಿಯಾಗಳಿಂದ ಹರಡುತ್ತವೆ. ಆಹಾರ ಸೇವಿಸಿದ ಕೆಲವೇ ಗಂಟೆಗಳಲ್ಲಿ ಫುಡ್ ಪಾಯ್ಸನ್ ಲಕ್ಷಣಗಳು ಕಂಡುಬರುತ್ತವೆ. ಹೀಗಾಗಿ ಸುಲಭವಾಗಿ ಕಂಡುಹಿಡಿಯಬಹುದು.
ಕಾರಣಗಳು: ಸರಿಯಾಗಿ ಬೇಯಿಸದ ಆಹಾರ ಸೇವನೆಯಿಂದ ಫುಡ್ ಪಾಯ್ಸನ್ ಉಂಟಾಗುತ್ತದೆ.
ತೆರೆದಿಟ್ಟ ಮಾಂಸ ಮತ್ತು ಚೀಸ್ಗಳಲ್ಲಿ ಉತ್ಪತ್ತಿಯಾಗುವ ಲಿಸ್ಟರಿಯಾ ಎನ್ನುವ ಬ್ಯಾಕ್ಟೀರಿಯಾ ಫುಡ್ ಪಾಯ್ಸನ್ಗೆ ಕಾರಣವಾಗುತ್ತದೆ.
ಕಲುಷಿತ ನೀರಿನಿಂದ ತಯಾರಿಸಿದ ಪಾನೀಯಗಳು, ಹಳಸಿದ ಪದಾರ್ಥಗಳ ಸೇವನೆಯಿಂದಲೂ ಫುಡ್ ಪಾಯ್ಸನ್ ಉಂಟಾಗುತ್ತದೆ.
ಬೇಯಿಸದ ಚಿಪ್ಪಿ ಮೀನುಗಳಲ್ಲಿ ಕಂಡುಬರುವ ನೊರೊವೈರಸ್ ಬ್ಯಾಕ್ಟಿರಿಯಾಗಳು ಫುಡ್ ಪಾಯ್ಸ್ನ್ ಉಂಟಾಗುವಂತೆ ಮಾಡುತ್ತದೆ
ಫುಡ್ ಪಾಯ್ಸನ್ ತಡೆಗಟ್ಟಲು ಹೀಗೆ ಮಾಡಿ
ಬೇಗನೆ ಹಾಳಾಗುವ ಆಹಾರ ಪದಾರ್ಥಗಳನ್ನು ಫ್ರಿಡ್ಜ್ನಲ್ಲಿ ಇಡಬೇಡಿ ಅಡುಗೆ ಮಾಡುವಾಗ ಮತ್ತು ನಂತರ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಕೋಳಿ ಮಾಂಸ ಮತ್ತು ಇನ್ನಿತರ ಮಾಂಸದ ಅಡುಗೆಯನ್ನು ಮಾಡುವಾಗ ಸ್ವಚ್ಛತೆಗೆ ಹೆಚ್ಚು ಆದ್ಯತೆ ಇರಲಿ ತರಕಾರಿ, ಹಣ್ಣುಗಳನ್ನು ತಂದ ಮೆಲೆ ನೀರಿನಲ್ಲಿ ತೊಳೆಯಿರಿ ಮುಖ್ಯವಾಗಿ ಹಳಸಿದ ಅಥವಾ ಕೆ್ಟ್ಟ ಆಹಾರಗಳನ್ನು ಸೇವಿಸಲೇಬೇಡಿ
ಫುಡ್ ಪಾಯ್ಸನ್ಗೆ ಒಳಗಾದವರು ಆದಷ್ಟು ಲಘು ಆಹಾರವನ್ನು ಸೇವಿಸಿ. ಇದರಿಂದ ನಿಮ್ಮ ಹೊಟ್ಟೆಯಲ್ಲಿ ಆಹಾರ ಉಳಿದು ಶಕ್ತಿ ಬರುತ್ತದೆ, ಜತೆಗೆ ವಾಂತಿ, ಅತಿಸಾರ ನಿಯಂತ್ರಣಕ್ಕೆ ಬರುತ್ತದೆ. ಫುಡ್ ಪಾಯ್ಸನ್ ಸಮಯದಲ್ಲಿ ಬಾಳೆಹಣ್ಣು, ಬ್ರೆಡ್, ಅನ್ನ, ಸೇಬು, ಹಾಲು ಇಂತಹ ಆಹಾರಗಳನ್ನು ಸೇವಿಸಿ. ಖಾಲಿ ಹೊಟ್ಟೆಯನ್ನು ತುಂಬಿಸಿ ದೇಹವನ್ನು ಸುಸ್ತಾಗದಂತೆ ನೋಡಿಕೊಳ್ಳಿ.
ಇದನ್ನೂ ಓದಿ:
Stomach Bloating: ಹೊಟ್ಟೆ ಉಬ್ಬುವ ಸಮಸ್ಯೆಗೆ ಕಾರಣ ಏನು? ಈ ಸಮಸ್ಯೆಗೆ ಮನೆಮದ್ದಿನಲ್ಲಿಯೇ ಇದೆ ಪರಿಹಾರ