ಅಪಾಯಕಾರಿ ಬಾಯಿಯ ಕ್ಯಾನ್ಸರ್​ ಬಗ್ಗೆ ಇರಲಿ ಎಚ್ಚರ: ಇಲ್ಲವಾದರೆ ಪ್ರಾಣವೇ ಹೋದೀತು

ಧೂಮಪಾನ, ತಂಬಾಕು, ಮಧ್ಯಸೇವನೆ ಬಾಯಿಯ ಕ್ಯಾನ್ಸರ್​ಗೆ ಪ್ರಮುಖ ಕಾರಣವಾಗಿದೆ. ಅವೈಜ್ಞಾನಿಕ ಜೀವನಶೈಲಿಗಳೂ ಕೂಡ ಈ ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತದೆ.

ಅಪಾಯಕಾರಿ ಬಾಯಿಯ ಕ್ಯಾನ್ಸರ್​ ಬಗ್ಗೆ ಇರಲಿ ಎಚ್ಚರ: ಇಲ್ಲವಾದರೆ ಪ್ರಾಣವೇ ಹೋದೀತು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Mar 19, 2022 | 3:06 PM

ಮಾರಣಾಂತಿ ಕಾಯಿಲೆಯಾದ ಕ್ಯಾನ್ಸರ್​ ದೇಹವನ್ನು ಹಿಂಡಿ ಹಿಪ್ಪೆಮಾಡುತ್ತವೆ. ಕ್ಯಾನ್ಸರ್ (Cancer) ​ನಲ್ಲಿ ಹಲವು ವಿಧ. ಅದರಲ್ಲಿ ಒಂದು ಬಾಯಿಯ ಕ್ಯಾನ್ಸರ್​​, ಅತಿಯಾದ ತಂಬಾಕು ಸೇವನೆ, ಧೂಮಪಾನದಿಂದ ಬಾಯಿಯ ಕ್ಯಾನ್ಸರ್​ (Mouth Cancer) ಉಂಟಾಗುತ್ತದೆ. ಬಾಯಿ ಕ್ಯಾನ್ಸರ್ ಎಂಬುದು ಕೇವಲ ಆಡು ಭಾಷೆಯಲ್ಲಿ ಬಂದ ಪದ.  ಆದರೆ ನಿಜವಾಗಲೂ ಬಾಯೊಳಗಿನ ತುಟಿಗಳು, ನಾಲಿಗೆ, ಗಂಟಲು, ಕೆನ್ನೆಯ ಭಾಗ, ಬಾಯಿಯ ತಳಭಾಗ, ಅಂಗುಳಿನ ಭಾಗಗಳು ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತವೆ.

ಬಾಯಿಯ ಒಳಗೆ ಅತಿ ವೇಗವಾಗಿ ಹರಡುವ ಈ ರೋಗ ವಸಡು, ಜೊಲ್ಲಿನ ಗ್ರಂಥಿ, ಒಳಗಿನ ಗಲ್ಲ, ಗಂಟಲು, ಟಾನ್ಸಿಲ್ ಮತ್ತು ಅನ್ನನಾಳಕ್ಕೂ ಹರಡುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ಕುತ್ತಿಗೆ, ತಲೆ ಮತ್ತು ದೇಹದ ಇತರ ಭಾಗಗಳಿಗೆ ಕೂಡ ಹರಡಬಲ್ಲದು. ಜಾಗತಿಕವಾಗಿ ಕ್ಯಾನ್ಸರ್‌ ಪ್ರಕರಣಗಳನ್ನು ತೆಗೆದುಕೊಂಡರೆ ಅವುಗಳಲ್ಲಿ ಶೇ.2ರಿಂದ 4ರಷ್ಟು ಬಾಯಿಯ ಕ್ಯಾನ್ಸರ್‌ ಆಗಿರುತ್ತದೆ. ಅಪಾಯಕಾರಿ ಈ ಕ್ಯಾನ್ಸರ್​ ಮನುಷ್ಯನ ಆಹಾರ ಸೇವನೆಯನ್ನೇ ನಿಲ್ಲಿಸಿಬಿಡುತ್ತದೆ.

ಈ ಬಾಯಿಯ ಕ್ಯಾನ್ಸರ್​ನ ಅಪಾಯಕಾರಿ ಲಕ್ಷಣಗಳೇನು? ಇಲ್ಲಿದೆ ಮಾಹಿತಿ

  • ಕಿವಿ ಮತ್ತು ಬಾಯಿ ನೋವು
  • ಸಡಿಲ ಹಲ್ಲುಗಳು
  • ಗಡ್ಡೆ ಬೆಳವಣಿಗೆ ಅಥವಾ ಬಾಯಿಯೊಳಗೆ ಬಿಳಿ/ಕೆಂಪು ಬಣ್ಣದ ತೇಪೆ
  • ನುಂಗಲು ತೊಂದರೆ
  • ತುಟಿ ಅಥವಾ ಬಾಯಿಯ ಮೇಲೆ ನಿರಂತರ ನೋವು

ಧೂಮಪಾನ, ತಂಬಾಕು, ಮಧ್ಯಸೇವನೆ ಬಾಯಿಯ ಕ್ಯಾನ್ಸರ್​ಗೆ ಪ್ರಮುಖ ಕಾರಣವಾಗಿದೆ. ಅವೈಜ್ಞಾನಿಕ ಜೀವನಶೈಲಿಗಳೂ ಕೂಡ ಈ ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತದೆ. ಆರಂಭದ ಹಂತದಲ್ಲಿಯೇ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗಿದೆ. ಈ ಬಾಯಿಯ ಕ್ಯಾನ್ಸರ್​ನಿಂದಾಗಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ತುಟಿಗಳ ಮೇಲೆ ಅತಿಯಾದ ಬಿಸಿ ಅನುಭವ HPV (ಮಾನವ ಪ್ಯಾಪಿಲೋಮವೈರಸ್), STD (ಲೈಂಗಿಕವಾಗಿ ಹರಡುವ ರೋಗ) ಗೆ ಒಡ್ಡಿಕೊಳ್ಳುವ ಸಂಭವವೂ ಇರುತ್ತದೆ.

ಈ ಕ್ಯಾನ್ಸರ್​ನ ಅಪಾಯವನ್ನು ಹೀಗೆ ತಡೆಯಿರಿ

  1. ನಿಮ್ಮ ಆಲ್ಕೋಹಾಲ್ ಸೇವನೆಯನ್ನು ಮಿತಗೊಳಿಸಲು ಪ್ರಯತ್ನಿಸಿ. ಕ್ರಮೇಣ ಸೇವನೆಯನ್ನು ತ್ಯಜಿಸಿ.
  2. ನೀವು ಧೂಮಪಾನ ಮಾಡುತ್ತಿದ್ದರೆ, ತಕ್ಷಣ ತ್ಯಜಿಸಿ. ಜಗಿಯುವ ತಂಬಾಕನ್ನು ತಿನ್ನಲೇಬೇಡಿ.
  3. ಅತಿಯಾದ ಸೂರ್ಯನ ಬೆಳಕಿನಿಂದ ನಿಮ್ಮ ತುಟಿಗಳನ್ನು ರಕ್ಷಿಸಿ. ನಿಮ್ಮ ತುಟಿಗಳನ್ನು ಸೂರ್ಯನ ಹಾನಿಯಿಂದ ರಕ್ಷಿಸಲು. ಸನ್ಸ್ಕ್ರೀನ್ ಅನ್ನು ಅನ್ವಯಿಸಿ, ಹೊದಿಕೆಗಳನ್ನು ಧರಿಸಿ.
  4. ನಿಮ್ಮ ಮೌಖಿಕ ನೈರ್ಮಲ್ಯವನ್ನು ನೋಡಿಕೊಳ್ಳಿ, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ ಮತ್ತು ನಿಮ್ಮ ಆಹಾರವನ್ನು ಚೆನ್ನಾಗಿ ನಿಯಂತ್ರಿಸಿ.
  5. ಆಗಾಗ ದಂತವೈದ್ಯರನ್ನು ಸಂಪರ್ಕಿಸಿ. ಯಾವುದೇ ಸಣ್ಣ ಬದಲಾವಣೆಗಳಾದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ. ಇದರಿಂದ ಮುಂದಾಗುವ ಅಪಾಯವನ್ನು ತಪ್ಪಿಸಬಹುದು.

ಇದನ್ನೂ ಓದಿ: