Ginger Benefits: ಖಾಲಿ ಹೊಟ್ಟೆಯಲ್ಲಿ ಶುಂಠಿ ರಸವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು?
ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಶುಂಠಿ ಇದ್ದೇ ಇರುತ್ತದೆ, ಖಾಲಿ ಹೊಟ್ಟೆಯಲ್ಲಿ ಶುಂಠಿ ರಸವನ್ನು ಸೇವಿಸುವುದರಿಂದ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಂದ ನೀವು ದೂರ ಇರಬಹುದಾಗಿದೆ.
ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಶುಂಠಿ ಇದ್ದೇ ಇರುತ್ತದೆ, ಖಾಲಿ ಹೊಟ್ಟೆಯಲ್ಲಿ ಶುಂಠಿ ರಸವನ್ನು ಸೇವಿಸುವುದರಿಂದ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಂದ ನೀವು ದೂರ ಇರಬಹುದಾಗಿದೆ. ಗಂಟಲಿನ ಕಿರಿಕಿರಿ ದೂರಾಗಿಸಲು ವಿಕ್ಸ್ ಗೋಲಿಗಳನ್ನು ತೆಗೆದುಕೊಳ್ಳುವ ಮೊದಲೆ ಹಸಿ ಶುಂಠಿ ಸಕ್ಕರೆ ನಮ್ಮ ಬಾಯಿ ಸೇರಿರುತ್ತದೆ. ನೆಗಡಿಯಾದರೆ ಸಾಕು ಶುಂಠಿ ಕಷಾಯ ಮಾಡಿ ಕುಡಿ ಸಾಕು ಎನ್ನುವುದು ನಮ್ಮ ಕಡೆ ರೂಢಿಮಾತು.
ಶಕ್ತಿಯನ್ನು ಹೆಚ್ಚಿಸುತ್ತದೆ: ಶುಂಠಿ ರಸವು ಶಕ್ತಿಯನ್ನು ಹೆಚ್ಚಿಸಿ, ದೇಹಕ್ಕೆ ಚೈತನ್ಯವನ್ನು ನೀಡುತ್ತದೆ. ನಿಮ್ಮ ದೇಹದಲ್ಲಿರುವ ಬೇಡದ ಅಂಶಗಳನ್ನು ಹೊರಹಾಕುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತೆ: ಶುಂಠಿ ರಸವನ್ನು ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಯ ಅಪಾಯ ತಪ್ಪುತ್ತದೆ.
ಶುಂಠಿಯ ಸಾಮಾನ್ಯ ಉಪಯೋಗಗಳು:
ಮಕ್ಕಳ ಶೀತಕ್ಕೆ: ಮಕ್ಕಳಿಗೆ ಜ್ವರ ಬಂದು, ಮೂಗು ಕಟ್ಟಿ, ಉಸಿರಾಡಲು ತೊಂದರೆಯಾದಾಗ 3 ರಿಂದ 6 ಹನಿ ಹಸಿ ಶುಂಠಿರಸ, ಒಂದು ಚಮಚ ಜೇನುತುಪ್ಪ ಮತ್ತು 2-3 ಹನಿ ತುಳಸಿ ರಸ ಸೇರಿಸಿಕೊಟ್ಟರೆ ಬಹುಬೇಗ ಶೀತ ನೆಗಡಿಗಳು ಕಡಿಮೆಯಾಗಿ ಮಗುವಿಗೆ ಆರಾಮವೆನಿಸುತ್ತದೆ.
ದೇಹದ ತೂಕ ಕಡಿಮೆ ಮಾಡಲು: ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಣೆಯಾಗುತ್ತದೆ. ಒಂದು ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ ಪಚನ ಶಕ್ತಿ ಹೆಚ್ಚಾಗುತ್ತದೆ.
ಕೆಮ್ಮು, ಗಂಟಲು ನೋವು ಕೂಡ ಮಾಯ: ಸುಲಭವಾಗಿ ಜೀರ್ಣವಾಗದ ಆಹಾರ ಸೇವಿಸಿದಾಗ ಒಂದು ತುಂಡು ಶುಂಠಿ ತಿಂದರೆ ಬೇಗನೇ ಜೀರ್ಣವಾಗುತ್ತದೆ. ಅಥವಾ ಚಹಾ ಮಾಡುವಾಗ ಚಿಕ್ಕ ಚೂರು ಶುಂಠಿ ಸೇರಿಸಿ ಮಾಡಿದರೂ, ಜೀರ್ಣಕ್ರಿಯೆ ಸುಗಮವಾಗುತ್ತದೆ.
ಗಂಟಲು ನೋವು, ಕೆಮ್ಮಿನಿಂದಾಗಿ ಗಂಟಲು ಕೆರೆದಂತಾಗುತ್ತಿದ್ದರೆ, ಹಸಿ ಶುಂಠಿ ಮತ್ತು ಉಪ್ಪು ಹಾಕಿ ತಿಂದರೆ ಗಂಟಲು ಕೆರೆತ ನಿವಾರಣೆಯಾಗುತ್ತದೆ. ರಾತ್ರಿಯಿಡೀ ಕೆಮ್ಮಿನಿಂದಾಗಿ ನಿದ್ರೆ ಮಾಡಲೂ ತೊಂದರೆಯಾಗುತ್ತಿದ್ದರೆ, ಹೀಗೆ ಮಾಡಬಹುದು.