ಲೈಟ್ ಆನ್​ ಮಾಡ್ಕೊಂಡು ಮಲಗ್ತೀರಾ? ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು

ಕತ್ತಲಲ್ಲಿ ಮಲಗುವುದೆಂದರೆ ಕೆಲವರಿಗೆ ಭಯ, ಇನ್ನೂ ಕೆಲವರಿಗೆ ನಿದ್ರೆ ಬರುವುದಿಲ್ಲ ಹಾಗಾಗಿ ರಾತ್ರಿಯೆಲ್ಲಾ ರೂಮಿನ್ ಲೈಟ್ ಆನ್ ಮಾಡಿಯೇ ಮಲಗುತ್ತಾರೆ. ನಾರ್ಥ್​ವೆಸ್ಟರ್ನ್​ ಮೆಡಿಸಿನ್ ನಡೆಸಿರುವ ಅಧ್ಯನವೊಂದರಲ್ಲಿ ರಾತ್ರಿ ಲೈಟ್ ಹಾಕಿಕೊಂಡು ಮಲಗುವ 63-84 ವರ್ಷದವರಲ್ಲಿ ಒಬೆಸಿಟಿ, ರಕ್ತದೊತ್ತಡ, ಹಾಗೂ ಮಧುಮೇಹ ಹೆಚ್ಚು ಕಂಡುಬಂದಿದೆ.

ಲೈಟ್ ಆನ್​ ಮಾಡ್ಕೊಂಡು ಮಲಗ್ತೀರಾ? ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು
LightImage Credit source: Timesnow
Follow us
TV9 Web
| Updated By: ನಯನಾ ರಾಜೀವ್

Updated on:Jun 25, 2022 | 2:37 PM

ಕತ್ತಲಲ್ಲಿ ಮಲಗುವುದೆಂದರೆ ಕೆಲವರಿಗೆ ಭಯ, ಇನ್ನೂ ಕೆಲವರಿಗೆ ನಿದ್ರೆ ಬರುವುದಿಲ್ಲ ಹಾಗಾಗಿ ರಾತ್ರಿಯೆಲ್ಲಾ ರೂಮಿನ್ ಲೈಟ್ ಆನ್ ಮಾಡಿಯೇ ಮಲಗುತ್ತಾರೆ. ನಾರ್ಥ್​ವೆಸ್ಟರ್ನ್​ ಮೆಡಿಸಿನ್ ನಡೆಸಿರುವ ಅಧ್ಯನವೊಂದರಲ್ಲಿ ರಾತ್ರಿ ಲೈಟ್ ಹಾಕಿಕೊಂಡು ಮಲಗುವ 63-84 ವರ್ಷದವರಲ್ಲಿ ಒಬೆಸಿಟಿ, ರಕ್ತದೊತ್ತಡ, ಹಾಗೂ ಮಧುಮೇಹ ಹೆಚ್ಚು ಕಂಡುಬಂದಿದೆ.

ಕೈಯಲ್ಲಿ ಕಟ್ಟಿಕೊಳ್ಳುವಂತಹ ಡಿವೈಸ್ ಮೂಲಕ 7 ದಿನಗಳ ಕಾಲ ಟ್ರ್ಯಾಕ್ ಮಾಡಲಾಗಿದೆ. ಇದು ನೈಜ ಅಧ್ಯಯನವಾಗಿದ್ದು ರಾತ್ರಿಯಲ್ಲಿ ಯಾವುದೇ ಬೆಳಕಿಗೆ ದೇಹವೊಡ್ಡುವುದು ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ ಮತ್ತು ವಯಸ್ಸಾದವರಲ್ಲಿ ಮಧುಮೇಹವನ್ನುಂಟುಮಾಡುತ್ತದೆ ಎಂಬುದು ಜೂನ್ 22 ರಂದು SLEEP ಜರ್ನಲ್​ನಲ್ಲಿ ಪ್ರಕಟವಾಗಿದೆ.

ಅತಿಯಾದ ಸ್ಮಾರ್ಟ್​ಫೋನ್ ಬಳಕೆ, ಇಡೀ ರಾತ್ರಿ ಟಿವಿ ನೋಡುವುದು, ಮಾಲಿನ್ಯವೂ ಕೆಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ವೃದ್ಧರು ಈಗಾಗಲೇ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 552 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರನ್ನು ದಿನದಲ್ಲಿ 5 ಗಂಟೆಗಳ ಕಾಲ ಕತ್ತಲೆಯಲ್ಲಿ ಇರಿಸಲಾಗಿತ್ತು. ಇನ್ನೂ ಕೆಲವು ಮಂದಿಯನ್ನು ದಿನದ ಐದು ಗಂಟೆ ಬೆಳಕಿನಲ್ಲಿರಿಸಲಾಗಿತ್ತು.

ಲೈಟ್ ಹಾಕಿಕೊಂಡು ಮಲಗುವವರು ಮಧುಮೇಹ, ರಕ್ತದೊತ್ತಡ, ಹೈಪರ್​ಟೆನ್ಷನ್, ನಿದ್ರಾಹೀನತೆ ಸಮಸ್ಯೆ ಎದುರಿಸುತ್ತಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ರಾತ್ರಿ ಪದೇ ಪದೇ ಬಾತ್​ರೂಂಗೆ ತೆರಳಬೇಕಾಗಿರುವವರು ಲೈಟ್ ಅನ್ನು ಆನ್​ ಮಾಡಿಟ್ಟಿರುತ್ತಾರೆ. ನಿದ್ರೆ ಮಾಡುವ ಸಮಯದಲ್ಲಿ ಆದಷ್ಟು ಬೆಳಕನ್ನು ಅವಾಯ್ಡ್​ ಮಾಡಿ.

ಒಂದೊಮ್ಮೆ ನಿಮಗೆ ಲೈಟ್ ಹಾಕಿ ಮಲಗದಿದ್ದರೆ ನಿದ್ರೆ ಬರುವುದಿಲ್ಲ ಅಂದಾದರೆ ಡಿಮ್ ಲೈಟ್ ಬಳಕೆ ಮಾಡಿ. ಬಿಳಿ ಅಥವಾ ನೀಲಿ ಲೈಟ್ ಬಳಕೆ ಮಾಡುವ ಬದಲು ಆರೆಂಜ್, ಕೆಂಪು ಲೈಟ್ ಬಳಸಿ.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

Published On - 2:37 pm, Sat, 25 June 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್