Blood Pressure: ರಕ್ತದೊತ್ತಡ ನಿಯಂತ್ರಣಕ್ಕೆ ಯಾವ ಅಕ್ಕಿ ಪ್ರಯೋಜನಕಾರಿ, ತಜ್ಞರ ಅಭಿಪ್ರಾಯ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಈ ಒತ್ತಡದ ಜೀವನಶೈಲಿಯಿಂದಾಗಿ, ರಕ್ತದೊತ್ತಡ(Blood Pressure)ವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಅಧಿಕ ಮತ್ತು ಕಡಿಮೆ ರಕ್ತದೊತ್ತಡ ಎರಡೂ ಸ್ಥಿತಿ ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.

Blood Pressure: ರಕ್ತದೊತ್ತಡ ನಿಯಂತ್ರಣಕ್ಕೆ ಯಾವ ಅಕ್ಕಿ ಪ್ರಯೋಜನಕಾರಿ, ತಜ್ಞರ ಅಭಿಪ್ರಾಯ ಇಲ್ಲಿದೆ
Blood Pressure
Follow us
| Updated By: ನಯನಾ ರಾಜೀವ್

Updated on: Jun 25, 2022 | 11:43 AM

ಇತ್ತೀಚಿನ ದಿನಗಳಲ್ಲಿ ಈ ಒತ್ತಡದ ಜೀವನಶೈಲಿಯಿಂದಾಗಿ, ರಕ್ತದೊತ್ತಡ(Blood Pressure)ವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಅಧಿಕ ಮತ್ತು ಕಡಿಮೆ ರಕ್ತದೊತ್ತಡ ಎರಡೂ ಸ್ಥಿತಿ ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಅಧಿಕ ರಕ್ತದೊತ್ತಡವು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಆದರೆ ನೀವು ಸರಿಯಾದ ಆಹಾರವನ್ನು ಸೇವಿಸಿದರೆ ನೀವು ಈ ರೋಗವನ್ನು ತಪ್ಪಿಸಬಹುದು. ಹೆಚ್ಚಿನವರು ಅನ್ನ ತಿನ್ನಲು ಇಷ್ಟಪಡುತ್ತಾರೆ. ಆದರೆ ಬಿಪಿ ಪೇಷಂಟ್ ಅನ್ನ ತಿನ್ನಬೇಕೋ ಬೇಡವೋ ಗೊತ್ತಾ? ಅದನ್ನು ತಿನ್ನಬೇಕಾದರೆ, ಯಾವ ಅಕ್ಕಿ ಉತ್ತಮವಾಗಿರುತ್ತದೆ? ಈ ವಿಷಯದ ಕುರಿತು ತಜ್ಞರ ಅಭಿಪ್ರಾಯ ಇಲ್ಲಿದೆ.

ಕಂದು ಅಕ್ಕಿ ಬಳಕೆ ಮಾಡಿ ರಕ್ತದೊತ್ತಡದ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಕಂದು ಅಕ್ಕಿಯನ್ನು ಸೇರಿಸಿಕೊಳ್ಳಬೇಕು. ಏಕೆಂದರೆ ಇದು ಖನಿಜಗಳು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್​ಗಳನ್ನು ಹೊಂದಿದೆ.. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಹೊಂದಿರುವ ವಸ್ತುಗಳು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಕಂಡುಬಂದಿದೆ. ಇದರಿಂದಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೃದಯ ಆರೋಗ್ಯಕರವಾಗಿರುತ್ತದೆ. ಬಿಳಿ ಅಕ್ಕಿಯನ್ನು ತಿನ್ನುವುದರಿಂದ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ ಮತ್ತು ಬಿಪಿ ಹೆಚ್ಚಾಗುತ್ತದೆ. ಆದ್ದರಿಂದ ಬಿಪಿ ಸಮಸ್ಯೆ ಇರುವವರು ಬಿಳಿ ಅನ್ನ ತಿನ್ನಲು ಸಲಹೆ ನೀಡುವುದಿಲ್ಲ.

ಬ್ರೌನ್ ರೈಸ್​ನ ಪ್ರಯೋಜನಗಳು -ಬ್ರೌನ್ ರೈಸ್​ನಲ್ಲಿ ಮೆಗ್ನೀಸಿಯಮ್ ಮತ್ತು ಫೈಬರ್ ಅಧಿಕವಾಗಿದೆ. ಆದ್ದರಿಂದ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

-ಇದರ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

-ಬ್ರೌನ್ ರೈಸ್​ನಲ್ಲಿ ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ, ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.

-ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿಮ್ಮ ಆಹಾರದಲ್ಲಿ ಬಿಳಿ ಅಕ್ಕಿ ಬದಲಿಗೆ ಬ್ರೌನ್ ರೈಸ್ ಅನ್ನು ಸೇರಿಸಿ.

-ನಿಮ್ಮ ಬಿಪಿ ಹತೋಟಿಯಲ್ಲಿರಬೇಕೆಂದು ನೀವು ಬಯಸಿದರೆ, ಇದಕ್ಕಾಗಿ ನೀವು ದಾಸವಾಳದ ಚಹಾವನ್ನು ತಯಾರಿಸಬಹುದು ಮತ್ತು ಕುಡಿಯಬಹುದು.

-ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚ ಕೊತ್ತಂಬರಿ ಪುಡಿಯನ್ನು ಸೇವಿಸಿ. ಇದರಿಂದ ರಕ್ತದೊತ್ತಡವನ್ನೂ ನಿಯಂತ್ರಿಸಬಹುದು.

-ಬೇಕಿದ್ದರೆ ಮಲಗುವ ಮುನ್ನವೂ ಅರ್ಧ ಚಮಚ ಅಶ್ವಗಂಧದ ಪುಡಿಯನ್ನು ಸೇವಿಸಿ. ಅಥವಾ ಹುರಿದ ಜೀರಿಗೆ ಪುಡಿ ಕೂಡ ಕೆಲಸ ಮಾಡುತ್ತದೆ.