ಜೇಡ ಕಚ್ಚಿತ್ತೆಂದರೆ ನಿರ್ಲಕ್ಷ್ಯಬೇಡ; ಕೆಲವು ಜಾತಿಯ ಜೇಡಗಳು ಹಾವಿಗಿಂತಲೂ ಅಪಾಯಕಾರಿ

|

Updated on: Jun 22, 2023 | 5:46 PM

ಚಿಕ್ಕದೊಂದು ಜೇಡ ಕಚ್ಚಿದಷ್ಟೇ, ಆದರೆ ಆ ವ್ಯಕ್ತಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಕಾಲ್ಬೆರಳನ್ನೇ ಕತ್ತರಿಸಲಾಗಿದೆ. ಅಷ್ಟಕ್ಕೂ ಅಷ್ಟು ಅಪಾಯಕಾರಿಯಾದ ಜೇಡ ಯಾವುದು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಜೇಡ ಕಚ್ಚಿತ್ತೆಂದರೆ ನಿರ್ಲಕ್ಷ್ಯಬೇಡ; ಕೆಲವು ಜಾತಿಯ ಜೇಡಗಳು ಹಾವಿಗಿಂತಲೂ ಅಪಾಯಕಾರಿ
Image Credit source: News9
Follow us on

ಸಾಮಾನ್ಯವಾಗಿ ಜೇಡ ಕಚ್ಚಿತ್ತೆಂದರೆ ನಿರ್ಲಕ್ಷ್ಯಿಸುವವರೇ ಹೆಚ್ಚು. ಆದರೆ ಕೆಲವು ಜಾತಿಯ ಜೇಡಗಳು ಹಾವಿಗಿಂತಲೂ ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಜೇಡ ಕಚ್ಚಿದ ಭಾಗದಲ್ಲಿ ಕೊಂಚ ಕೆಂಪಗಾಗುವುದು, ಊದಿಕೊಳ್ಳುವುದು ಹಾಗೂ ನೋವು ಇರುವುದು ಮೊದಲಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗೆಂದು ಅದನ್ನು ನಿರ್ಲಕ್ಷ್ಯಿಸದಿರಿ. ಯಾಕೆಂದರೆ ಪ್ರಾಣದ ಮೇಲೆ ಕುತ್ತು ತರುವ ಸಾಧ್ಯತೆ ಹೆಚ್ಚಿದೆ. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ 60 ವರ್ಷ ವಯಸ್ಸಿನ ವ್ಯಕ್ತಿಗೆ ವಿಡೋ ಎಂಬ ಜಾತಿಯ ಜೇಡವೊಂದು ಕಚ್ಚಿದ್ದು, ಕೆಲ ದಿನಗಳಲ್ಲಿ ಆತನ ಕಾಲ್ಬೆರಳುಗಳನ್ನು ಕತ್ತರಿಸಿ ತೆಗೆಯಲಾಗಿದೆ.

ಏನಿದು ಘಟನೆ:

ವ್ಯಕ್ತಿಯ ಚಪ್ಪಲಿಯ ಮೇಲೆ ಜೇಡವೊಂದು ಹರಿದಾಡುತ್ತಿರುವುದನ್ನು ಕಂಡಿದ್ದಾನೆ. ಆದರೆ ಅದು ಕಚ್ಚಿದ್ದು, ಸೂಜಿ ಚುಚ್ಚಿದ್ದಂತೆ ಅನುಭವವಾಗಿದ್ದು, ಆತ ಅದನ್ನು ನಿರ್ಲಕ್ಷ್ಯಿಸಿದ್ದಾನೆ. ಕೆಲವು ಗಂಟೆಗಳ ನಂತರ ಕಾಲನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿದ್ದಾನೆ. ಒಂದು ವಾರದ ನಂತರ ಕಾಲಿನಲ್ಲಿ ಗುಳ್ಳೆಗಳು ಉಂಟಾಗಿದ್ದು, ಕಾಲ್ಬೆರಳು ಕೊಳೆಯಲು ಪ್ರಾರಂಭವಾಗಿದೆ. ಕೊನೆಗೆ ನಡಿಯಲು ಸಾಧ್ಯವಾಗದೇ ಇದ್ದಾಗ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಆತನ ಕಾಲ್ಬೆರಳುಗಳನ್ನೇ ಕತ್ತರಿಸಿ ತೆಗೆದಿದ್ದಾರೆ.

ಇದನ್ನೂ ಓದಿ: ಒಂದು ತಿಂಗಳು ಅನ್ನ ಸೇವಿಸದಿದ್ದರೆ, ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? ತಜ್ಞರು ಹೇಳುವುದೇನು?

ಏನಿದು ವಿಡೋ ಸ್ಪೈಡರ್​​?

ಈ ಜೇಡವು ಸಾಮಾನ್ಯವಾಗಿ ಕೆನಡಾ ಮತ್ತು ಉತ್ತರ ಅಮೆರಿಕಾ ಕಂಡುಬರುವ ಜೇಡವಾಗಿದೆ. ಇದು ಕಡು ನೀಲಿ ಬಣ್ಣದ್ದಾಗಿದ್ದು, ಇದರ ವಿಷವು ಹಾವಿನಷ್ಟೇ ಅಪಾಯಕಾರಿ ಎಂದು ಹೇಳಲಾಗುತ್ತದೆ.

ಈ ಸುದ್ದಿಯನ್ನು ಇಂಗ್ಲೀಷ್​​​ನಲ್ಲಿ ಓದಲು ಇಲ್ಲಿ ಕ್ಲಿಕ್​ ಮಾಡಿ:

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: