AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತಂಕದ ಈ ಲಕ್ಷಣಗಳು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಆತಂಕ ಸಮಸ್ಯೆಯಾಗಿರುವುದರಿಂದ, ಅನೇಕ ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸುಮಾರು 4 ಜನರಲ್ಲಿ 1 ಜನರು ಆತಂಕದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಆತಂಕದ ಈ ಲಕ್ಷಣಗಳು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು
Mental Health
ಅಕ್ಷತಾ ವರ್ಕಾಡಿ
|

Updated on: Jun 23, 2023 | 6:01 AM

Share

ಮಾನಸಿಕ ಆರೋಗ್ಯದ ಬಗ್ಗೆ ದೈಹಿಕ ಆರೋಗ್ಯದಷ್ಟೇ ಕಾಳಜಿವಹಿಸುವುದು ತುಂಬಾ ಅಗತ್ಯವಾಗಿರುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಅತಂಕ ಅನುಭವಿಸುವುದು ಸಾಮಾನ್ಯ. ಆದರೆ ಆತಂಕದ ದಾಳಿಯು ಪದೇಪದೇ ನಿಮ್ಮಲ್ಲಿ ಕಂಡುಬರುತ್ತಿದ್ದರೆ, ಎಂದಿಗೂ ನಿರ್ಲಕ್ಷ್ಯಬೇಡ. ಈ ರೋಗಲಕ್ಷಣಗಳನ್ನು ಗಮನಿಸಿ ತಜ್ಞರ ಸಲಹೆ ಪಡೆಯುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಎನಾದರೊಂದು ಘಟನೆಯನ್ನು ಪದೇ ಪದೇ ನೆನೆದು ಹೆದರುವುದು, ಬೆವರುವುದು ಮುಂತಾದ ಲಕ್ಷಣಗಳು ಆತಂಕದ ಲಕ್ಷಣಗಳಾಗಿವೆ. ನೀವು ಒತ್ತಡ, ಉದ್ವಿಗ್ನತೆ ಅಥವಾ ಅತಿಯಾಗಿ ಯೋಚಿಸಿದಾಗ ಇದು ಸಂಭವಿಸುತ್ತದೆ. ಜೊತೆಗೆ ಬೆವರುವಿಕೆ, ಎದೆಯಲ್ಲಿ ಸುಡುವ ಸಂವೇದನೆ ಮತ್ತು ಹೆಚ್ಚಿದ ಹೃದಯ ಬಡಿತಕ್ಕೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿರುವುದರಿಂದ, ಆತಂಕವು ಅನೇಕ ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸುಮಾರು 4 ಜನರಲ್ಲಿ 1 ಜನರು ಆತಂಕದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಆತಂಕದ ಲಕ್ಷಣಗಳು:

ಉಸಿರಾಟದ ತೊಂದರೆ:

ಒಬ್ಬ ವ್ಯಕ್ತಿಯು ಆತಂಕವನ್ನು ಎದುರಿಸುತ್ತಿರುವಾಗ, ಅವನು / ಅವಳು ಉಸಿರಾಟದ ಸಮಸ್ಯೆ ಅನುಭವಿಸುತ್ತಾನೆ ಮತ್ತು ಸರಿಯಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ನೀವು ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನಾಲ್ಕು ಗೋಡೆಯ ಒಳಗೆ ಬಂಧಿಯಾಗದಿರಿ. ಹೊರಗಡೆ ಬಂದು ಪರಿಸರದೊಂದಿಗೆ ಸಮಯ ಕಳೆಯಿರಿ.

ಇದನ್ನೂ ಓದಿ: ಒಂದು ತಿಂಗಳು ಅನ್ನ ಸೇವಿಸದಿದ್ದರೆ, ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? ತಜ್ಞರು ಹೇಳುವುದೇನು?

ಪದೇ ಪದೇ ದುಃಸ್ವಪ್ನಗಳು:

ಆತಂಕದ ಅಸ್ವಸ್ಥತೆಯನ್ನು ಹೊಂದಿರುವ ವ್ಯಕ್ತಿಯು ಸಾಮಾನ್ಯವಾಗಿ ಕೆಟ್ಟ ಕನಸುಗಳು / ದುಃಸ್ವಪ್ನಗಳನ್ನು ಅನುಭವಿಸುತ್ತಾರೆ. ಇದು ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ. ಇದನ್ನು ತಪ್ಪಿಸಲು, ಮಲಗುವ ಮುನ್ನ ನಿಮ್ಮ ಫೋನ್ ಅನ್ನು ಬಳಸದಿರಿ. ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿ.

ಬೆವರುವ ಅಥವಾ ತಣ್ಣನೆಯ ಕೈಗಳು:

ಒತ್ತಡದಿಂದಾಗಿ, ನೀವು ಅನೇಕ ಬಾರಿ ತಣ್ಣಗಾಗಬಹುದು ಅಥವಾ ಕೈಗಳು ಅತಿಯಾಗಿ ಬೆವರುವುದನ್ನು ಅನುಭವಿಸಬಹುದು, ಇದು ಆತಂಕದ ಸಂಕೇತವಾಗಿದೆ. ಅಂತಹ ಸಮಯದಲ್ಲಿ ಏಕಾಂಗಿಯಾಗಿ ಇರುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ