AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಎತ್ತರ ಹೆಚ್ಚಾಗುತ್ತಿಲ್ಲ ಎಂಬ ಚಿಂತೆ ಕಾಡುತ್ತಿದೆಯೇ? ಈ ಪೋಷಕಾಂಶಗಳ ಕೊರತೆ ಕಾರಣವಾಗಿರಬಹುದು

ಕೆಲವೊಮ್ಮೆ ಮಕ್ಕಳು ದೊಡ್ಡವರಾಗುತ್ತಾ ಅವರ ತೂಕ ಹೆಚ್ಚಳವಾಗುತ್ತದೆ ಆದರೆ ಎತ್ತರ ಸರಿಯಾಗಿ ಹೆಚ್ಚಾಗುವುದಿಲ್ಲ. ಇದು ಪೋಷಕರನ್ನು ಚಿಂತೆಗೀಡು ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ, ಇದರ ಹಿಂದಿನ ಕಾರಣಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯಿಂದ ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಮಕ್ಕಳ ಬೆಳವಣಿಗೆಗೆ ಪೋಷಕಾಂಶಗಳು ಯಾಕೆ ಮುಖ್ಯವಾಗುತ್ತದೆ, ಎತ್ತರ ಹೆಚ್ಚಳಕ್ಕೆ ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಕ್ಕಳ ಎತ್ತರ ಹೆಚ್ಚಾಗುತ್ತಿಲ್ಲ ಎಂಬ ಚಿಂತೆ ಕಾಡುತ್ತಿದೆಯೇ? ಈ ಪೋಷಕಾಂಶಗಳ ಕೊರತೆ ಕಾರಣವಾಗಿರಬಹುದು
Height growth in childrenImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Jun 03, 2026 | 5:26 PM

Share

ಇತ್ತೀಚಿನ ದಿನಗಳಲ್ಲಿ ಹಲವಾರು ಪೋಷಕರು ಮಕ್ಕಳ ಎತ್ತರ (Childs Height) ಸರಿಯಾಗಿ ಹೆಚ್ಚಳವಾಗದಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ನಿಮ್ಮ ಮನೆಯಲ್ಲಿ ಮಕ್ಕಳಿದ್ದೂ ನೀವು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿರಬಹುದು. ಸಾಮಾನ್ಯವಾಗಿ ಮಕ್ಕಳ ದೈಹಿಕ ಬೆಳವಣಿಗೆಗೆ ಕೇವಲ ಜನ್ಯಗುಣಗಳೇ ಅಲ್ಲ, ಸರಿಯಾದ ಪೋಷಣೆಯೂ ಬಹಳ ಮುಖ್ಯವಾಗುತ್ತದೆ ಎಂಬುದನ್ನು ಮರೆಯಬಾರದು. ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯಿಂದ ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಮಕ್ಕಳ ಬೆಳವಣಿಗೆಗೆ ಪೋಷಕಾಂಶಗಳು ಯಾಕೆ ಮುಖ್ಯವಾಗುತ್ತದೆ, ಎತ್ತರ ಹೆಚ್ಚಳಕ್ಕೆ ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಕ್ಕಳ ಬೆಳವಣಿಗೆಗೆ ಪೋಷಕಾಂಶಗಳು ಯಾಕೆ ಮುಖ್ಯ?

ಬಾಲ್ಯ ಮತ್ತು ಕೌಮಾರ್ಯ (Adolescence) ಮಾನವನ ಬೆಳವಣಿಗೆಯ ಎರಡು ಪ್ರಮುಖ ಮತ್ತು ನಿರ್ಣಾಯಕ ಹಂತಗಳಾಗಿರುತ್ತದೆ. ಈ ಸಮಯದಲ್ಲಿ ದೇಹ ವೇಗವಾಗಿ ಬೆಳೆಯುತ್ತದೆ. ಹಾಗಾಗಿ ಈ ಅವಧಿಯಲ್ಲಿ ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳು ದೊರೆಯಬೇಕು. ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ ಇದ್ದರೆ ಎಲುಬು, ಸ್ನಾಯು ಹಾಗೂ ದೇಹದ ಸಾಮಾನ್ಯ ಬೆಳವಣಿಗೆ ನಿಧಾನಗೊಳ್ಳಬಹುದು.

ಎತ್ತರ ಹೆಚ್ಚಳಕ್ಕೆ ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳು:

ಪ್ರೋಟೀನ್: ಇದು ದೇಹದ ಸ್ನಾಯು ಮತ್ತು ಟಿಷ್ಯೂಗಳ ಬೆಳವಣಿಗೆಗೆ ಸಹಕಾರಿ. ಹಾಲು, ಮೊಟ್ಟೆ, ಬೇಳೆ, ಸೋಯಾ ಹಾಗೂ ಕಾಳುಗಳಲ್ಲಿ ಇದು ಹೆಚ್ಚು ದೊರೆಯುತ್ತದೆ.

ಕ್ಯಾಲ್ಸಿಯಂ: ಎಲುಬುಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಅತ್ಯಗತ್ಯ. ಇದು ಹಾಲು, ಮೊಸರು, ಪನೀರ್ ಹಾಗೂ ಹಸಿರು ಸೊಪ್ಪುಗಳಲ್ಲಿ ಉತ್ತಮ ಪ್ರಮಾಣದಲ್ಲಿ ದೊರೆಯುತ್ತದೆ.

ವಿಟಮಿನ್ D: ಈ ಜೀವಸತ್ವ ದೇಹದಲ್ಲಿ ಕ್ಯಾಲ್ಸಿಯಂ ಪೋಷಣೆಗೆ ಸಹಾಯ ಮಾಡುತ್ತದೆ. ಬೆಳಗಿನ ಸೂರ್ಯರಶ್ಮಿ ಮತ್ತು ಕೆಲವು ಆಹಾರಗಳಿಂದ ಇದು ದೊರೆಯುತ್ತದೆ.

ಐರನ್: ಇದು ದೇಹಕ್ಕೆ ಆಮ್ಲಜನಕ ಪೂರೈಸಲು ನೆರವಾಗುತ್ತದೆ. ಇದರ ಕೊರತೆಯಿಂದ ಮಕ್ಕಳಲ್ಲಿ ದೌರ್ಬಲ್ಯ ಮತ್ತು ಬೆಳವಣಿಗೆಯ ಸಮಸ್ಯೆಗಳು ಕಾಣಿಸಬಹುದು.

ಜಿಂಕ್ ಮತ್ತು ಮ್ಯಾಗ್ನೀಷಿಯಂ: ಈ ಖನಿಜಾಂಶಗಳು ದೇಹದ ಸಾಮಾನ್ಯ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

ಇದನ್ನೂ ಓದಿ: ಬೆಳಗ್ಗಿನ ಈ ಅಭ್ಯಾಸಗಳು ನಿಮ್ಮ ಮಕ್ಕಳನ್ನು ಚುರುಕಾಗಿಸುತ್ತದೆ

ಮಕ್ಕಳ ಬೆಳವಣಿಗೆಗೆ ಉತ್ತಮ ಅಭ್ಯಾಸಗಳು:

  • ಪ್ರತಿದಿನ ಸರಿಯಾಗಿ ನಿದ್ರೆ ಮಾಡುವುದು
  • ನಿಯಮಿತ ವ್ಯಾಯಾಮ ಮತ್ತು ಆಟಗಳಲ್ಲಿ ಭಾಗವಹಿಸುವುದು
  • ಸಮತೋಲನಯುತ ಆಹಾರ ಸೇವಿಸುವುದು
  • ಸಾಕಷ್ಟು ನೀರು ಕುಡಿಯುವುದು
  • ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು

ಮಕ್ಕಳು ಯಾವುದರಿಂದ ದೂರವಿರಬೇಕು?

  • ಜಂಕ್ ಫುಡ್ ಮತ್ತು ಸಿಹಿ ಪಾನೀಯಗಳ ಅಧಿಕ ಸೇವನೆ
  • ಹೆಚ್ಚು ಸಮಯ ಮೊಬೈಲ್ ಅಥವಾ ಟಿವಿ ಮುಂದೆ ಕಳೆಯುವುದು
  • ಶಾರೀರಿಕ ಚಟುವಟಿಕೆಗಳ ಕೊರತೆ
  • ತಡರಾತ್ರಿ ಜಾಗರಣೆ

ಮಕ್ಕಳ ಎತ್ತರ ಮತ್ತು ದೈಹಿಕ ಬೆಳವಣಿಗೆಗೆ ಸಮತೋಲನಯುತ ಆಹಾರ, ಉತ್ತಮ ಜೀವನಶೈಲಿ ಮತ್ತು ಅಗತ್ಯ ಪೋಷಕಾಂಶಗಳು ಬಹಳ ಮುಖ್ಯ. ಮಕ್ಕಳ ಬೆಳವಣಿಗೆ ಬಗ್ಗೆ ಆತಂಕ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Wed, 3 June 26

Follow Us
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ
ಸುಪ್ರೀಂಕೋರ್ಟ್​​ ನೋಟಿಸ್ ಬಗ್ಗೆ ರೇವಣ್ಣ ಫಸ್ಟ್​​ ರಿಯಾಕ್ಷನ್​​
ಸುಪ್ರೀಂಕೋರ್ಟ್​​ ನೋಟಿಸ್ ಬಗ್ಗೆ ರೇವಣ್ಣ ಫಸ್ಟ್​​ ರಿಯಾಕ್ಷನ್​​
ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ
ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ
ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ
ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ
ಹರಿಯಾಣದಲ್ಲಿ ದೇಶದ ಮೊದಲ 'ಹೈಡ್ರೋಜನ್ ರೈಲಿ'ಗೆ ಪಿಎಂ ಮೋದಿ ಇಂದು ಚಾಲನೆ
ಹರಿಯಾಣದಲ್ಲಿ ದೇಶದ ಮೊದಲ 'ಹೈಡ್ರೋಜನ್ ರೈಲಿ'ಗೆ ಪಿಎಂ ಮೋದಿ ಇಂದು ಚಾಲನೆ
Live: ಮೊದಲ ಆಶಾಢ ಶುಕ್ರವಾರದಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆಯ ನೇರಪ್ರಸಾರ
Live: ಮೊದಲ ಆಶಾಢ ಶುಕ್ರವಾರದಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆಯ ನೇರಪ್ರಸಾರ
'ಆಷಾಢ ಮಾಸ ಶಕ್ತಿ ದೇವತೆಗಳ ಆರಾಧನೆಗೆ ಪ್ರಶಸ್ತವಾದ ಮಾಸ'
'ಆಷಾಢ ಮಾಸ ಶಕ್ತಿ ದೇವತೆಗಳ ಆರಾಧನೆಗೆ ಪ್ರಶಸ್ತವಾದ ಮಾಸ'
ಮೊದಲ ಬಾರಿಗೆ ಇರಾನ್ ಮೇಲೆ ದಾಳಿ ನಡೆಸಿದ ಯುಎಇ
ಮೊದಲ ಬಾರಿಗೆ ಇರಾನ್ ಮೇಲೆ ದಾಳಿ ನಡೆಸಿದ ಯುಎಇ