AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪಂಚತಾರಾ ಹೋಟೆಲ್​ಗಳ ಮೇಲೆ ದಿಢೀರ್ ರೇಡ್: ಆಹಾರ ಗುಣಮಟ್ಟ, ಸಂಸ್ಕರಣೆ, ಪರಿಶುದ್ಧತೆಯ ಪರಿಶೀಲನೆ

ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳ ಮೇಲೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದು, ಆಹಾರ ಗುಣಮಟ್ಟ ಮತ್ತು ಸ್ವಚ್ಛತೆ ಪರಿಶೀಲಿಸಿದ್ದಾರೆ. ಆರೋಗ್ಯ ಸಚಿವರ ಸೂಚನೆ ಮೇರೆಗೆ ದಾಳಿ ನಡೆದಿದೆ. ಶಾಂಗ್ರೀಲಾ ಸೇರಿದಂತೆ ಕೆಲ ಹೋಟೆಲ್‌ಗಳಲ್ಲಿ ಕಳಪೆ ತರಕಾರಿಗಳು, ಕೊಳೆತ ಈರುಳ್ಳಿ, ಆಲೂಗಡ್ಡೆ ಪತ್ತೆಯಾಗಿದ್ದು, ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.

ಬೆಂಗಳೂರಿನಲ್ಲಿ ಪಂಚತಾರಾ ಹೋಟೆಲ್​ಗಳ ಮೇಲೆ ದಿಢೀರ್ ರೇಡ್: ಆಹಾರ ಗುಣಮಟ್ಟ, ಸಂಸ್ಕರಣೆ, ಪರಿಶುದ್ಧತೆಯ ಪರಿಶೀಲನೆ
ಬೆಂಗಳೂರಿನ 5 ಸ್ಟಾರ್ ಹೋಟೆಲ್​ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ಅಧಿಕಾರಿಗಳುImage Credit source: tv9
ಕಿರಣ್​ ಸೂರ್ಯ
| Edited By: |

Updated on: Aug 07, 2026 | 2:19 PM

Share

ಮುಖ್ಯಾಂಶಗಳು

  • ಪಂಚತಾರಾ ಹೋಟೆಲ್‌ಗಳಲ್ಲಿ ಆರೋಗ್ಯಾಧಿಕಾರಿಗಳ ತಪಾಸಣೆ
  • ಕೊಳೆತ ಈರುಳ್ಳಿ, ಆಲೂಗಡ್ಡೆ ಪತ್ತೆ
  • ಆಹಾರ ಮಾದರಿಗಳು ಲ್ಯಾಬ್‌ಗೆ ರವಾನೆ

ಬೆಂಗಳೂರು, ಆಗಸ್ಟ್ 7: ಬೆಂಗಳೂರಿನ (Bengaluru) ಪಂಚತಾರಾ ಹೋಟೆಲ್‌ಗಳಿಗೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಶುಕ್ರವಾರ ಶಾಕ್ ನೀಡಿದ್ದಾರೆ. ಆಹಾರದ ಗುಣಮಟ್ಟ, ಸಂಸ್ಕರಣೆ ಮತ್ತು ಸ್ವಚ್ಛತೆ ಪರಿಶೀಲನೆಗಾಗಿ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ವಿವಿಧ ಪಂಚತಾರಾ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಕೆಲ ಹೋಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ತರಕಾರಿಗಳು, ಕೊಳೆತ ಈರುಳ್ಳಿ ಹಾಗೂ ಆಲೂಗಡ್ಡೆ ಪತ್ತೆಯಾಗಿವೆ.

ಆರೋಗ್ಯ ಸಚಿವ ಯುಟಿ ಖಾದರ್ ಸೂಚನೆ ಮೇರೆಗೆ ಕ್ರಮ

ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆ ಮೇರೆಗೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಬೆಂಗಳೂರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ನಗರದ ಪಂಚತಾರಾ ಹೋಟೆಲ್‌ಗಳಿಗೆ ತೆರಳಿ ಆಹಾರದ ಗುಣಮಟ್ಟ, ಅಡುಗೆ ಪ್ರಕ್ರಿಯೆ, ಸ್ವಚ್ಛತೆ ಹಾಗೂ ಆಹಾರ ಸಂಗ್ರಹಣಾ ವ್ಯವಸ್ಥೆಯನ್ನು ಪರಿಶೀಲಿಸಿದೆ.

ಶಾಂಗ್ರೀಲಾ ಹೋಟೆಲ್‌ನಲ್ಲಿ ಕಳಪೆ ತರಕಾರಿ ಪತ್ತೆ

ಶಾಂಗ್ರೀಲಾ ಹೋಟೆಲ್‌ನಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಅಡುಗೆ ಕೋಣೆಯಲ್ಲಿನ ಕೆಲ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ. ಪರಿಶೀಲನೆ ವೇಳೆ ಕಳಪೆ ಗುಣಮಟ್ಟದ ತರಕಾರಿಗಳು, ಕೊಳೆತ ಈರುಳ್ಳಿ ಹಾಗೂ ಆಲೂಗಡ್ಡೆ ಪತ್ತೆಯಾಗಿವೆ. ಅಧಿಕಾರಿಗಳು ಅವುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಇನ್ನು ಕೆಲವು ಹೋಟೆಲ್‌ಗಳ ಮೇಲಿನ ದಾಳಿ ವೇಳೆ ಅಜಿನೊಮೋಟೊ ಸೇರಿದಂತೆ ಕೆಲವು ಹಾನಿಕಾರಕ ಅಂಶಗಳಿರುವ ಶಂಕಿತ ಪದಾರ್ಥಗಳು ಪತ್ತೆಯಾಗಿವೆ ಎನ್ನಲಾಗಿದೆ. ಅವುಗಳ ಮಾದರಿಯನ್ನೂ ಅಧಿಕಾರಿಗಳು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಿದ್ದಾರೆ. ಪರೀಕ್ಷಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಲಲಿತ್ ಅಶೋಕ್ ಹೋಟೆಲ್‌ನಲ್ಲೂ ಪರಿಶೀಲನೆ

ಇದೇ ವೇಳೆ ಲಲಿತ್ ಅಶೋಕ್ ಹೋಟೆಲ್‌ಗೂ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 10ಕ್ಕೂ ಹೆಚ್ಚು ಅಧಿಕಾರಿಗಳು ಅಡುಗೆ ಕೋಣೆ, ಆಹಾರ ಸಂಗ್ರಹಿಸುವ ಸ್ಥಳ ಹಾಗೂ ತಯಾರಿಸಲಾದ ಖಾದ್ಯಗಳನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ನಿಷೇಧ: ಉದ್ದೇಶವೇನು?

ಪಂಚತಾರಾ ಹೋಟೆಲ್‌ಗಳಲ್ಲೂ ಆಹಾರ ಸುರಕ್ಷತಾ ನಿಯಮಗಳ ಪಾಲನೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ. ಲ್ಯಾಬ್ ಪರೀಕ್ಷೆಯ ವರದಿ ಬಳಿಕ ಆಹಾರ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲಂಘನೆ ದೃಢಪಟ್ಟರೆ ನಿಯಮಾನುಸಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​
ಡಾರ್ಕ್ ಪ್ಯಾಟರ್ನ್ ಬಳಸಿದ 9 ಡಿಜಿಟಲ್ ಕಂಪನಿಗಳಿಗೆ 20 ಲಕ್ಷ ರೂ. ದಂಡ!
ಡಾರ್ಕ್ ಪ್ಯಾಟರ್ನ್ ಬಳಸಿದ 9 ಡಿಜಿಟಲ್ ಕಂಪನಿಗಳಿಗೆ 20 ಲಕ್ಷ ರೂ. ದಂಡ!
ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ
ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ
'ಎತ್ತರಕ್ಕೆ ಬೆಳೆದರೆ ಅವರನ್ನು ಮುಗಿಸಲು ಪಿತೂರಿ ಮಾಡ್ತಾರೆ': ಸಚಿವ ಜಮೀರ್​​
'ಎತ್ತರಕ್ಕೆ ಬೆಳೆದರೆ ಅವರನ್ನು ಮುಗಿಸಲು ಪಿತೂರಿ ಮಾಡ್ತಾರೆ': ಸಚಿವ ಜಮೀರ್​​
ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ವಿಶೇಷ ಪೂಜೆ; ಮಳೆ-ಬೆಳೆಗಾಗಿ ಪ್ರಾರ್ಥನೆ
ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ವಿಶೇಷ ಪೂಜೆ; ಮಳೆ-ಬೆಳೆಗಾಗಿ ಪ್ರಾರ್ಥನೆ
ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ
ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ
ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್
ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್
ಆಷಾಢದ ಕೊನೆಯ ಶುಕ್ರವಾರ; ಮಹಾಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿ
ಆಷಾಢದ ಕೊನೆಯ ಶುಕ್ರವಾರ; ಮಹಾಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿ
ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು: AI ವೀಡಿಯೋ ವೈರಲ್!
ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು: AI ವೀಡಿಯೋ ವೈರಲ್!